PM Modi Road Show : ಇದೆಲ್ಲಾ ಒಂದು ಕಡೆ ಆದ್ರೆ ಬಿಜೆಪಿ ಪಕ್ಷ ಮಾತ್ರ ತನ್ನ ಬುಡದ ಬೇರು ಅಲುಗಾಡಲಿದೆ ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಷಾ ರನ್ನ ಕರೆಸಿ ಬೃಹತ್ ರೋಡ್ ಶೋ ನಡೆಸಲು ತೀರ್ಮಾನಿಸಿದೆ. ಈ ಬೃಹತ ರೋಡ್ ಶೋ ನಡೆಸಲು ಬೆಂಗಳೂರಿನಲ್ಲಿ ಅಂತಿಮ ಸಿದ್ದತೆ ನಡೆಸಲಾಗ್ತಿದೆ.


COMMERCIAL BREAK
SCROLL TO CONTINUE READING

ಆದ್ರೆ ಈ ರೋಡ್ ಶೋದಿಂದ ನಗರದ ಜನರಿಗೆ ಸೇರಿ ನಗರಕ್ಕೆ ಬರುವ ಹೊರ ರೋಗಿಗಳಿಗೆ ಭಾರಿ ಪ್ರಮಾಣದಲ್ಲಿ ತೊಂದರೆ ಆಗಲಿದೆ ಎಂದು ಕಾಂಗ್ರೆಸ್ ನ ರಾಮಲಿಂಗಾರೆಡ್ಡಿ ಅಸಮಧಾನವನ್ನ ಹೊರ ಹಾಕಿದ್ದಾರೆ. ಮೋದಿ ರೋಡ್ ಶೋ ನಡೆಸುವ ದಾರಿಯುದ್ದಕ್ಕೂ ಸರ್ಕಾರಿ ಸೇರಿ ಖಾಸಗೀ ಆಸ್ಪತ್ರೆಗಳಿಗೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಹೊರ ರೋಗಿಗಗಳು ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುತ್ತಾರೆ. 


ಇದನ್ನೂ ಓದಿ-ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿತ್ತು: ಹೆಚ್.ಡಿ.ಕುಮಾರಸ್ವಾಮಿ


ಆದ್ರೆ ಶನಿವಾರ ಮತ್ತು ಭಾನುವಾರ ಬಿಜೆಪಿ ರೋಡ್ ಶೋ ಇರುವ ಕಾರಣ ಆಸ್ಪತ್ರೆಗಳಿಗೆ ತೆರಳುವ ಪ್ರಮುಖ ರಸ್ತೆಗಳನ್ನೇ ಬಂದ್ ಮಾಡಿಸಲಾಗ್ತಿದೆ ಹಾಗೂ ಅದೇ ರಸ್ತೆಗಳನ್ನ ಮೋದಿ ಪ್ರಚಾರ ಕೂಡ ಇದೆ. ಹೀಗಾಗಿ ಎರಡು ದಿನಗಳ ಕಾಲ ಸಾವಿರಾರು ಅನಾರೋಗ್ಯಸ್ಥರಿಗೆ ಭಾರಿ ಪೆಟ್ಟು ಬೀಳಲಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಅಲ್ಲದೇ ಒಂದೇ ಒಂದು ಕ್ಷಣ ರೋಗಿಗಳಿಗೆ ತೊಂದರೆ ಆದ್ರೂ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಬೇಸರವನ್ನ ವ್ಯಕ್ತಪಡಿಸಿದ್ದಾರೆ.


ಈ ಮೂಲಕ ರೋಡ್ ಶೋ ನಡೆಸುವ ಬದಲಾಗಿ ಯಾವುದಾದರೂ ಮೈದಾನ ಅಥವಾ ನಗರದ ಹೊರ ಭಾಗದಲ್ಲಿ ಈ ಕಾರ್ಯಕ್ರಮ ಇಟ್ಟುಕೊಳ್ಳಬಹುದಿತ್ತು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.


ಇದನ್ನೂ ಓದಿ-ಯುವಕರಲ್ಲಿ ಮತದಾನ ಜಾಗೃತಿ ಮೂಡಿಸಿದ ಬಿಬಿಎಂಪಿ & ಚುನಾವಣಾ ಆಯೋಗ


ಇನ್ನೂ ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದು ನಗರದ 65ಕ್ಕೂ ಹೆಚ್ಚು ಆಸ್ಪತ್ರೆಗಳು ಮೋದಿ ರೋಡ್ ಶೋ ಮಾರ್ಗದಲ್ಲಿ ಬರಲಿವೆ. ಅನಿವಾರ್ಯ ಕಾರ್ಣದಿಂದ ರೋಡ್ ಬಂದ್ ಮಾಡಲೇಬೇಕಾಗಿದ್ದು, ಜನರಿಗೆ ತೊಂದರೆ ಆಗಲಿದೆ.‌ ಜನ ಈ ಬಗ್ಗೆ ಗಮನದಲ್ಲಿಟ್ಟು ಮಾರ್ಗ ಬದಲಾವಣೆ ಮೂಲಕ ಬಂದರೆ ಹೊಳಿತು ‌ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.