ಅತಿಹೆಚ್ಚು ರೈತರ ಆತ್ಮಹತ್ಯೆ ಆಗಿದ್ದು ಸಿದ್ರಾಮಣ್ಣನ ಕಾಲದಲ್ಲಿ : ಸಿಎಂ ಬೊಮ್ಮಾಯಿ
ರೈತರ ಆತ್ಮಹತ್ಯೆ ಆಗಿದ್ದು ಸಿದ್ರಾಮಣ್ಣನ ಕಾಲದಲ್ಲಿ. ಕರ್ನಾಕಟದ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪ್ರಿಯಾಂಕಾ, ರಾಹುಲ್ ಬಂದೋದ್ರಾ..? ಯಾವುದು ಸೂಕ್ತವಲ್ಲವೋ ಅದನ್ನು ಮಾತನಾಡಿ ಜನರನ್ನು ಮರಳು ಮಾಡಲು ಸಾದ್ಯವಿಲ್ಲ. ಪ್ರಿಯಾಂಕಾ ಗಾಂದಿಗೆ ಕಾಂಗ್ರೆಸ್ ಸರಿಯಾದ ಮಾಹಿತಿ ನೀಡಿಲ್ಲ.
ಹುಬ್ಬಳ್ಳಿ : ಮುಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅಂತಾ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿಕೆ ವಿಚಾರಕ್ಕೆ, ನಡ್ಡಾ ಅವರು ನನ್ನ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟು ಒಳ್ಳೆಯ ಮಾತು ಹೇಳಿದ್ದಾರೆ. ಅಮಿತ್ ಶಾ ಅವರು ಬಂದಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದಾಗಿ ಹೇಳಿದ್ದೆ. ನಮ್ಮ ಪಕ್ಷದಲ್ಲಿ ಸ್ಪಷ್ಟ ನಿಲುವಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕೇಂದ್ರ ಸಂಸದೀಯ ಮಂಡಳಿ ಮತ್ತು ಶಾಸಕರು ಸಿಎಂ ಆಯ್ಕೆ ಮಾಡ್ತಾರೆ. ನಡ್ಡಾ ಅವರು ಹೇಳಿದ ಮಾತಿಗೆ ನಾನು ಚಿರಖುಣಿಯಾಗಿರುತ್ತೇನೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತೇನೆ ಎಂದರು. ಇನ್ನು ಪ್ರಿಯಾಂಕಾ ಗಾಂಧಿ ಹೇಳಿಕೆಗೆ ತಿರುಗೇಟು. ಪ್ರವಾಹದ ಸಂದರ್ಭದಲ್ಲಿ ಮೋದಿ ರಾಜ್ಯಕ್ಕೆ ಬಂದಿಲ್ಲ ಎಂಬ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದರು.
ಇದನ್ನೂ ಓದಿ: ʼಮೋದಿ ವಿಷ ಸರ್ಪʼ ಅಂತ ನಾನು ಹೇಳಿಲ್ಲ : ಖರ್ಗೆ ಯುಟರ್ನ್
ಪ್ರವಾಹ ಬಂದಾಗ ಹೆಚ್ಚಿನ ಅನುದಾನ ಕೊಟ್ಟಿದ್ದು ಮೋದಿ ಸರ್ಕಾರ. ಪ್ರಿಯಾಂಕಾ ಗಾಂಧಿಯವರ ಸರ್ಕಾರದ ಇದ್ದಾಗ ಮನೆ ಬಿದ್ದರೆ 2 ಸಾವಿರ ಕೊಡುತ್ತಿದ್ದರು. ಅತಿವೃಷ್ಟಿ ಪರಿಹಾರ ಮೋದಿ ಕಾಲದಲ್ಲಿ ಹೆಚ್ಚಿಸಲಾಗಿದೆ. ಅತಿಹೆಚ್ಚು ರೈತರ ಆತ್ಮಹತ್ಯೆ ಆಗಿದ್ದು ಸಿದ್ರಾಮಣ್ಣನ ಕಾಲದಲ್ಲಿ. ಕರ್ನಾಕಟದ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಪ್ರಿಯಾಂಕಾ, ರಾಹುಲ್ ಬಂದೋದ್ರಾ..? ಯಾವುದು ಸೂಕ್ತವಲ್ಲವೋ ಅದನ್ನು ಮಾತನಾಡಿ ಜನರನ್ನು ಮರಳು ಮಾಡಲು ಸಾದ್ಯವಿಲ್ಲ. ಜನತೆಗೆ ಗೊತ್ತಿರುವ ಮಾಹಿತಿ ಇದು, ಪ್ರಿಯಾಂಕಾ ಗಾಂದಿಗೆ ಕಾಂಗ್ರೆಸ್ ಸರಿಯಾದ ಮಾಹಿತಿ ನೀಡಿಲ್ಲ ಎಂದು ಪ್ರಿಯಾಂಕಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ರೇಡ್‌ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ವಿಚಾರ. ಕಳ್ಳನ ಜೀವ ಹುಳ್ಳುಳ್ಳಗೆ ಎಂದು ಸಿಎಂ ವ್ಯಂಗ್ಯವಾಡಿದರು. ಜಗದೀಶ್ ಶೆಟ್ಟರ್ ಎಲ್ಲಾ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ. ಮೋದಿಯವರಿಗೆ ದಿನಕ್ಕೆ ಐದು ಕಡೆ ಪ್ರಚಾರ ಮಾಡುವ ಶಕ್ತಿ ಇದೆ, ಮಾಡ್ತಾರೆ. ಖರ್ಗೆಯವರು ಸೀನಿಯರ್ ಲೀಡರ್ ಅವರ ಬಾಯಿಂದ ಇಂತಹ ಮಾತು ಬಂದಿದೆ ಅಂದಾಗ, ಉಳಿದವರಿಂದ ಪ್ರತಿಕ್ರಿಯೆ ಬರೋದು ಸಹಜ. ದೇವೇಗೌಡರು ಯಾವ ರಾಷ್ಟ್ರೀಯ ಪಕ್ಷದವರು ಮೈತ್ರಿಗೆ ಮುಂದಾಗಿದ್ದಾರೆ ಬಹಿರಂಗವಾಗಿ ಹೇಳಲಿ ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.