ಮಂಡ್ಯ : ಸುಮಾಲತಾ ಅಂದ್ರೆ ಮಾಜಿ ಕುಮಾರಸ್ವಾಮಿಗೆ ಭಯ. ಅಂಬರೀಶ್ ರಿಂದ ಏನು ಅನುಕೂಲ ಹಾಗಿಲ್ಲ ಅಂತ ಹೇಳ್ತಾರೆ. ಅಂಬರೀಶ್ ಬಗ್ಗೆ ಮಂಡ್ಯ ಜನರಿಗೆ ಗೊತ್ತು. ಏಳಕ್ಕೆ ಏಳು ಸೀಟ್‌ ಜೆಡಿಎಸ್ ಗೆಲ್ಲೊಕೆ ಅಂಬರೀಶ್ ಕಾರಣ. ಇವರು ಸಿಎಂ ಆಗೋಕು ಅವರೇ ಕಾರಣ. ಅಂಬರೀಶ್ ಬಗ್ಗೆ ಮಾತನಾಡುವುದು ದುರಹಾಂಕರಾದ ಮಾತು. ಮನೆಗೆ ಬಂದು ಊಟ ಮಾಡಿ ಅಂಬರೀಶ್‌ಗೆ ಧನ್ಯವಾದ ಹೇಳಿದ್ರು ಎಂದು ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ವಿರುದ್ಧ ಸಂಸದೆ ಸುಮಲತಾ ಅಂಬರೀಶ್‌ ಅವರು ಗುಡುಗಿದರು.


COMMERCIAL BREAK
SCROLL TO CONTINUE READING

ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಹೆಚ್‌ಡಿಕೆ ವಿರುದ್ದ ವಾಗ್ದಾಳಿ ನಡಿಸಿದರು. ಮುಂದಿನ ವಾರ ಅಭಿಷೇಕ್ ಅಂಬರೀಶ್ ಪ್ರಚಾರಕ್ಕೆ ಬರ್ತಾರೆ. ಬಿಜೆಪಿಗೆ ಸಾಕಷ್ಟು ಜನ ಬೆಂಬಲ ಇದೆ. ಬಿಜೆಪಿಗೆ ಪಾಸಿಟಿವ್ ಸಿಕ್ತಿದೆ. ಎರಡೂ ಪಕ್ಷದ ಬಂಡಾಯದ ಬಿಜೆಪಿಗೆ ಪ್ಲಸ್ ಆಗುತ್ತದೆ. ದೊಡ್ಡ ದೊಡ್ಡ ಸಾಮಾಜ್ರವೇ ಮುಳುಗಿಹೋಗಿದೆ.
ಭದ್ರಕೋಟೆ ಅನ್ನೋದು ಹಾಸ್ಯಸ್ಪದ. ನಾವು ಮಾಡಿದ ಅಭಿವೃದ್ಧಿ ಮಾತ್ರ ಶಾಶ್ವತ ಎಂದರು.


ಇದನ್ನೂ ಓದಿ: ʼಕಾಂಗ್ರೆಸ್ ಲಿಂಗಾಯತ ಸಮಾಜ ಒಡೆಯುವ ಕೆಲಸ ಮಾಡಿದೆʼ


ಅಲ್ಲದೆ, ಅಶೋಕ್ ಜಯರಾಂಗೆ ಮೋಸ ಆಗಿದೆ. ಜನರು ಈ ಭಾರಿ ಅಶೋಕ್ ಜಯರಾಂಗೆ ಆಶೀರ್ವಾದ ಮಾಡ್ತಾರೆ. ನಮ್ಮ ಟಾರ್ಗೆಟ್ ಇಲ್ಲಿಯ ಭ್ರಷ್ಟಾಚಾರ ಮಾತ್ರ. ಶ್ರೀರಂಗಪಟ್ಟಣ- ಪಾಂಡವಪುರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಪುಟ್ಟರಾಜು ಮೇಲೆ ಸಿಬಿಐ ಕೆಸ್ ಇದೆ. ಈ ಅವಕಾಶಕ್ಕೆ ಜನರು ಕಾಯ್ತಿದ್ದಾರೆ‌. ಮಂಡ್ಯದಲ್ಲಿ ಒಳ್ಳೆಯ ವಾತಾವರಣ ಕಂಡು ಬರ್ತಿದೆ. ಒಳ್ಳೆಯ ಜನರು ರಾಜಕಾರಣ ಬರಬೇಕು ಅಂದ್ರೆ, ಸ್ವಚ್ಚವಾಗಬೇಕು. ಜೆಡಿಎಸ್ ಅಭ್ಯರ್ಥಿಯನ್ನ ಸೋಲಿಸೋದೆ ನನ್ನ ಅಜೆಂಡಾ. ಅದಕ್ಕಾಗಿ ಬಿಜೆಪಿಗೆ ನನ್ನ ಬೆಂಬಲ ಸೂಚಿಸಿದ್ದೇನೆ ಎಂದು ಹೇಳಿದರು.


ಸುಮಲತಾ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರು ಫೈಟ್ ಮಾಡ್ತಿರೋದು ಯಾರಿಗೆ..? ಎರಡೂ ಪಕ್ಷ ಬಿಟ್ಟು ಸುಮಾಲತಾ ಬಗ್ಗೆ ಮಾತನಾಡ್ತಿದ್ದಾರೆ. ಕುಮಾರಸ್ವಾಮಿ ಅವರೇ ಹೇಳ್ತಾರೆ ಸುಮಾಲತಾ ಬಗ್ಗೆ ಮಾತನಾಡಲ್ಲ ಅಂತ. ದುರಹಂಕಾರದ ಶಾಸಕ ಅಂದ್ರೆ ರವೀಂದ್ರ ಶ್ರೀಕಂಠಯ್ಯ. ಜನರೇ ಅವರನ್ನ ಒಂದು ಊರಿನಲ್ಲಿ ಓಡಿಸಿದ್ದಾರೆ. ಅವರ ಪಕ್ಷದವರೇ ಹೇಳ್ತಿದ್ದಾರೆ‌ ದುಡ್ಡ ಪಡೆದು ಟಿಕೆಟ್ ಕೊಟ್ಟಿದ್ದಾರೆ ಅಂತ. ಬೆಂಕಿ ಹಚ್ಚುವ ಕೆಲಸವನ್ನ ಮಾಡ್ತಾರೆ ಎಂದರು.


ಇದನ್ನೂ ಓದಿ: ಚಾಮರಾಜನಗರ: 51 ಲಕ್ಷ ಮೌಲ್ಯದ ವಿಸ್ಕಿ- 12 ಲಕ್ಷ ಮೌಲ್ಯದ ಬಿಯರ್ ಜಪ್ತಿ


ಸುಮಾಲತಾ ಅಂದ್ರೆ ಕುಮಾರಸ್ವಾಮಿಗೆ ಭಯ. ಅಂಬರೀಶ್ ರಿಂದ ಏನೂ ಅನುಕೂಲ ಆಗಿಲ್ಲ ಅಂತ ಹೇಳ್ತಾರೆ. ಅಂಬರೀಶ್ ಬಗ್ಗೆ ಮಂಡ್ಯ ಜನರಿಗೆ ಗೊತ್ತು. ಏಳಕ್ಕೆ ಏಳು ಸೀಟ್‌ ಜೆಡಿಎಸ್ ಗೆಲ್ಲೊಕೆ ಅಂಬರೀಶ್ ಕಾರಣ. ಸಿಎಂ ಹಾಗೋಕು ಅವರೇ ಕಾರಣ. ಅಂಬರೀಶ್ ಬಗ್ಗೆ ಮಾತನಾಡುವುದು ದುರಹಾಂಕರಾದ ಮಾತು. ಮನೆಗೆ ಬಂದು ಊಟ ಮಾಡಿ ಅಂಬರೀಶ್ ಗೆ ಧನ್ಯವಾದ ಹೇಳಿದ್ರು. ಅಭಿಮಾನಿಗಳು ಕೊಟ್ಟ ಗೌರವ, ಇವರು ಯಾರು ಗೌರವ ಕೊಟ್ಟಿಲ್ಲ‌ ಎಂದು ಜೆಡಿಎಸ್‌ ವಿರುದ್ಧ ಗುಡುಗಿದರು.


ನಿಮ್ಮ ಸಾಧನೆ ಬಗ್ಗೆ ಮಾತನಾಡಿ ಅಂದ್ರೆ, ಸುಮಾಲತಾ ಬಗ್ಗೆ ಮಾತನಾಡ್ತಿರಿ. ಮಂಡ್ಯಕ್ಕೆ ಏನು ಕೊಡುಗೆ ಇದೆ ನಿಮ್ಮದು..? ಅದನ್ನು ಮುಚ್ಚಿಹಾಕಲು ಸುಮಾಲತಾ ಅವರನ್ನ ಟಾರ್ಗೆಟ್ ಮಾಡ್ತಾರೆ ಅಷ್ಟೆ. ನಾವೇ ದೊಡ್ಡ ನಾಯಕರು ಅಂತ ಮೆರೆಯುತ್ತಿರುವವರನ್ನ ಬೆಳೆಸಿದು ಎಸ್.ಡಿ.ಜಯರಾಂ. ಟಿಕೆಟ್ ಕೊಡದೆ ಅನ್ಯಾಯ ಮಾಡಿದ್ರು.
ಬಹಿರಂಗ ಸಭೆಯಲ್ಲಿ ಮಾತ್ರ ಮಾತನಾಡುವುದು ಅಷ್ಟೆ ಎಂದು ಸಂಸದೆ ಅಕ್ರೋಶ ಹೊರಹಾಕಿದರು.


ಇದನ್ನೂ ಓದಿ:ʼಲಿಂಗಾಯತ ಸಿಎಂʼ ಘೋಷಣೆ ಬಗ್ಗೆ ಯಾವುದೇ ನಿರ್ಣಯ ಆಗಿಲ್ಲ : ಸಿಎಂ ಸ್ಪಷ್ಟನೆ


ಲೋಕಸಭಾ ಚುನಾವಣೆಯಲ್ಲಿ ನಿಕಿಲ್ ಸೋಲ್ತಾರೆ. ತಕ್ಷಣವೇ ಯುವರಾಜ್ಯಾಧ್ಯಕ್ಷ ಕಿರೀಟ ಕೊಟ್ಟರು. ಯಾವ ಆಧಾರದ ಮೇಲೆ ಕೊಟ್ಟರಿ.. ಯಾವ ಯುವಕರು ಇರಲಿಲ್ವಾ ನಿಮ್ಮ ಪಕ್ಷದಲ್ಲಿ? ಯುವ ರಾಜ ಹಾಗಿ ಎಷ್ಟು ಸಭೆ ಮಾಡಿದ್ದಾರೆ? ಎಲ್ಲೂ ಸಭೆ, ಪಕ್ಷ ಸಂಘಟನೆ ಮಾಡಿಲ್ಲ, ಇದಕ್ಕೆ ರಾಮನಗರ ಟಿಕೆಟ್ ಗಿಫ್ಟ್ ಕೊಟ್ಟರು. ಜನರು ಇದಕ್ಕೆಲ್ಲ ಉತ್ತರ ಕೊಡ್ತಾರೆ. ಮಂಡ್ಯದಲ್ಲಿ 5 ಸ್ಥಾನ ಗೆದ್ದೆ ಗೆಲ್ತೇವೆ ಎಂದು ಕುಮಾರಸ್ವಾಮಿ ವಿರುದ್ಧ ಸುಮಲತಾ ಅವರು ನೇರವಾಗಿ ಗುಡುಗಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.