ಬೆಂಗಳೂರು: ಲಿಂಗಾಯತ ಸಿಎಂಗಳ ಬಗ್ಗೆ ಸಿದ್ದರಾಮಯ್ಯ ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ.ಅವರೊಬ್ಬ ಹಿರಿಯ ನಾಯಕ.ಆದರೆ ಅವರು ಲಿಂಗಾಯತ ಸಮುದಾಯದ ಆತ್ಮ ಕಲುಕುವ ಹೇಳಿಕೆ ಕೊಟ್ಟಿದ್ದಾರೆ.ಲಿಂಗಾಯತ ಸಮುದಾಯವನ್ನೇ ಭ್ರಷ್ಟ ಅನ್ನೋದು ತಪ್ಪು ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.


COMMERCIAL BREAK
SCROLL TO CONTINUE READING

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.


ಇದನ್ನೂ ಓದಿ: Photo Gallery: ಮೋದಿ ಏನು ದೇವರಾ? ಮಠಾಧೀಶರಾ? ಅಥವಾ ಛೂಮಂತರ್ ಬಾಬಾನಾ?-ಕಾಂಗ್ರೆಸ್ ಪ್ರಶ್ನೆ


ಇಂದು ಬಸವ ಜಯಂತಿ.ಇಂದಿನಿಂದ ನಮ್ಮ ಪ್ರಚಾರ ಆರಂಭಿಸುತ್ತಿದ್ದೇವೆ. ನಾವು ಬಸವ ತತ್ವದಡಿ ಆಡಳಿತ ನಡೆಸಿದ್ದೇವೆ. ಅದರ ಮೂಲಕವೇ ಪ್ರಚಾರ ಆರಂಭಿಸುತ್ತೇವೆ.ಸಿದ್ದರಾಮಯ್ಯ ಅವರು ಒಬ್ಬ ಹಿರಿಯ ನಾಯಕರಾಗಿ ಈ ರೀತಿಯ ಹೇಳಿಕೆ ನೀಡಬಾರದಿತ್ತು. ಅವರವರ ಸಮಾಜದ ನಾಯಕರು ಅವರ ಯೋಗ್ಯತೆ,ಕ್ಷಮತೆಯಲ್ಲಿ ಕೆಲಸ ಮಾಡುತ್ತಾರೆ. ಅವರ ಘನತೆಗೆ ಇದು ತಕ್ಕ ಹೇಳಿಕೆ ಅಲ್ಲ ಎಂದರು.


ಇದನ್ನೂ ಓದಿ: Karnataka Election Photos : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಬಿಗ್‌ ರಿಲೀಫ್‌..! ಡಿಕೆಶಿ ನಾಮಪತ್ರ ಅಂಗೀಕಾರ


ರಾಹುಲ್ ಗಾಂಧಿ ಅವರು ಈ ಹಿಂದೆ ಮೋದಿ ಅವರ ಹೆಸರಿಗೆ ಕೊಟ್ಟ ಹೇಳಿಕೆಯ ರೀತಿಯಲ್ಲಿ ಸಿದ್ದರಾಮಯ್ಯ ಈಗ ಮಾತಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನತೆ ಇದಕ್ಕೆ ಉತ್ತರ ಕೊಡುತ್ತಾರೆ. ತಕ್ಕ ಪಾಠ ಕಲಿಸುತ್ತಾರೆ ಎಂದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.