ಮತಗಟ್ಟೆ ಸಾಮಗ್ರಿ ವಿಚಾರ: ಟೆಂಡರ್ನಲ್ಲಿ ಕಪ್ಪುಪಟ್ಟಿಯಲ್ಲಿದ್ದ ಚಿಲುಮೆ ಸಂಸ್ಥೆ ಭಾಗಿ
Karnataka Assembly Election 2023: ಕೆಲ ರಾಜಕೀಯ ಮುಖಂಡರ ಜೊತೆ ಕೈಜೊಡಿಸಿರುವ ಚಿಲುಮೆ ಸಂಸ್ಥೆ ಮತ್ತೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂಬಾಗಿಲ ಮೂಲಕ ಎಂಟ್ರೀ ಕೋಡ್ತಿದೆ.
ಬೆಂಗಳೂರು: ದೇಶವ್ಯಾಪ್ತಿ ಮತದಾರರ ಗೌಪ್ಯ ಮಾಹಿತಿ ಸಂಗ್ರಹಣೆಯಲ್ಲಿ ದೊಡ್ಡಮಟ್ಟದ ಸೌಂಡ್ ಮಾಡಿದ್ದ ಚಿಲುಮೆ ಸಂಸ್ಥೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಮತಗಟ್ಟೆಗಳಿಗೆ ಸಾಮಗ್ರಿ ಟೆಂಡರ್ ಪಡೆಯಲು ಬಾರಿ ಸರ್ಕಸ್ ಮಾಡುತ್ತಿದೆ.
ಮತದಾರರ ಮಾಹಿತಿ ಕಳವು ಮಾಡಿರುವ ಆರೋಪ ಹೊತ್ತಿರುವ ಚಿಲುಮೆ ಸಂಸ್ಥೆಯು ಶಿಕ್ಷಣ, ಸಂಸ್ಕೃತಿ ಮತ್ತು ಗ್ರಾಮೀಣ ಅಭಿವೃದ್ಧಿ ಟ್ರಸ್ಟ್, ನಗರದ ಮತಗಟ್ಟೆಗಳಿಗೆ ಸಾಮಗ್ರಿ ವಿತರಿಸುವ ಹಲವು ಟೆಂಡರ್‌ನಲ್ಲಿ ಭಾಗವಹಿಸಿದೆ. ಬಿಬಿಎಂಪಿ ಈ ಟ್ರಸ್ಟ್‍ನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಕಪ್ಪುಪಟ್ಟಿಗೆ ಸೇರಿಸಿತ್ತು. ಅದರೂ ಸಹ ಈ ಬಾರಿ ವಿಧಾನಸಭಾ ಚುನಾವಣೆಗೆ ಮತಗಟ್ಟೆಗಳಿಗೆ ಬೇಕಾಗುವ ಸಾಮಗ್ರಿಗಳ ಪೂರೈಕೆ ಟೆಂಡರ್‍ನಲ್ಲಿ ಚಿಲುಮೆ ಸಂಸ್ಥೆ ಮತ್ತೆ ಭಾಗವಹಿಸಿರುವುದು ಎಲ್ಲೋ ಒಂದು ಕಡೆ ಬಿಬಿಎಂಪಿ ಅಧಿಕಾರಿಗಳ ಮೇಲೆ ಅನುಮಾನ ಮೂಡುತ್ತಿದೆ.
ಇದನ್ನೂ ಓದಿ: "ಇಡಿ, ಸಿಬಿಐ ,ಐಟಿ ತನಿಖಾ ಸಂಸ್ಥೆಗಳು ರಾಜ್ಯದಲ್ಲಿರುವ ಭ್ರಷ್ಟಾಚಾರದ ಕಡೆ ಯಾಕೆ ನೋಡುತ್ತಿಲ್ಲ"
ವೋಟರ್ ಐಡಿ ಪ್ರಕರಣದಲ್ಲಿ ತಗಲುಹಾಕಿಕೊಂಡಿದ್ದ ಚಿಲುಮೆ ಸಂಸ್ಥೆಯನ್ನೂ ಬಿಬಿಎಂಪಿ ಅಯುಕ್ತರು ಕಪ್ಪು ಪಟ್ಟಿಗೆ ಸೇರಿಸಿ, ಯಾವುದೇ ಪಾಲಿಕೆ ಟೆಂಡರ್ ನಲ್ಲಿ ಭಾಗವಹಿಸದಂತೆ ಆದೇಶ ನೀಡಿದ್ದರು. ಅದರೆ ಕೆಲ ರಾಜಕೀಯ ಮುಖಂಡರ ಜೊತೆ ಕೈಜೊಡಿಸಿರುವ ಚಿಲುಮೆ ಸಂಸ್ಥೆ ಮತ್ತೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂಬಾಗಿಲ ಮೂಲಕ ಎಂಟ್ರೀ ಕೋಡ್ತಿದೆ.
ಇನ್ನೂ ನಗರ ಹೆಚ್ಚುವರಿ ಜಿಲ್ಲಾ ಚುನಾವಣೆ ಅಧಿಕಾರಿಗಳು ಮತದಾನದ ದಿನದಂದು ಮತಗಟ್ಟೆಗಳಲ್ಲಿ ಸಿದ್ಧತೆ ಮಾಡಿಕೊಳ್ಳುವ ಹಿನ್ನೆಲೆ ಟೆಂಡರ್ ಕರೆದಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾಗವಹಿಸಿದ್ದ ಇತಿಹಾಸದೊಂದಿಗೆ ಈ ಬಾರಿಯು ಚಿಲುಮೆ ಸಂಸ್ಥೆ ಹಲವು ಟೆಂಡರ್‌ಗಳಲ್ಲೂ ಪಾಲ್ಗೊಂಡಿದೆ. ಅದರೆ ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಕೆಳಹಂತದ ಅಧಿಕಾರಿಗಳಲ್ಲಿ ಗೊಂದಲವಿತ್ತು. ತಾಂತ್ರಿಕ ಮೌಲ್ಯಮಾಪನದೊಂದಿಗೆ ಬಿಬಿಎಂಪಿಯ ಕೆಲವು ಅಧಿಕಾರಿಗಳು ಚಿಲುಮೆ ಟ್ರಸ್ಟ್‌ಗೆ ಟೆಂಡರ್ ಅನ್ನು ತಿರಸ್ಕರಿಸಿದ್ದಾರೆ. ಟ್ರಸ್ಟ್ ಮತ್ತೆ ನ್ಯಾಯಾಲಯದಲ್ಲಿ ತಡೆಯಾಜ್ನೆ ತೆರವು ಮಾಡಿ ಅಂತಾ ಅರ್ಜಿ ಸಲ್ಲಿಸಿದೆ. ಒಂದೆರಡು ದಿನಗಳಲ್ಲಿ ನ್ಯಾಯಾಲಯ ಈ ಬಗ್ಗೆ ವಿಚಾರಣೆ ನಡೆಸಲಿದೆ. ಇದಾದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: "ಸವಾರಿ ಮಾಡುವ ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಕನ್ನಡಿಗರು ಈಗ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ"
ಇನ್ನೂ ಪ್ರಾದೇಶಿಕ ಆಯುಕ್ತ ಆದಿತ್ಯ ಬಿಸ್ವಾಸ್ ಅವರು ಇತ್ತೀಚೆಗೆ ನೀಡಿದ್ದ ತನಿಖಾ ವರದಿಯಲ್ಲಿ ಚೆಲುಮೆ ಅಕ್ರಮವಾಗಿ ಮತದಾರರ ಮಾಹಿತಿ ಸಂಗ್ರಹಿಸಿದ್ದು, ಅದನ್ನು ವಿದೇಶದ ಸರ್ವರ್‍ನಲ್ಲಿ ಸಂಗ್ರಹಿಸಿದೆ ಎಂಬ ವರದಿ ಕೂಡ ನೀಡಿದರೆ. ಅದರೂ ಕೂಡ ಈ ಸಂಸ್ಥೆ ರಾಜಾರೋಷವಾಗಿ ಮತ್ತೆ ಟೆಂಡರ್ ನಲ್ಲಿ ಪಾಲ್ಗೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎಂಬ ಪ್ರಶ್ನೆ ಮೂಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.