ಇವತ್ತೇ ʼ5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ.. ನುಡಿದಂತೆ ನಡೆಯುತ್ತೇವೆ..!
ನಾವು ಐದು ಯೋಜನೆಗಳನ್ನ ಘೋಷಿಸಿದ್ವಿ, ಮಹಿಳೆಯರಿಗೆ 2000 ರೂ., 200 ಯೂನಿಟ್ ವಿದ್ಯುತ್ ಉಚಿತ, 10 ಕೆ.ಜೆ. ಅಕ್ಕಿ, ಇಡೀ ರಾಜ್ಯದಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ, ಪದವೀಧರರಿಗೆ 3೦೦೦, ಡಿಪ್ಲಮೋದಾರರಿಗೆ 1500 ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದೆವು. ಈಗ ಕೊಟ್ಟ ಮಾತಿನಂತೆ ನಾವು ನಡೆಯುತ್ತೇವೆ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಬೆಂಗಳೂರು : ಕಳೆದ 5 ವರ್ಷಗಳಿಂದ ಆದ ಸಮಸ್ಯೆ ನೋಡಿದ್ದೀರ. ತಮ್ಮೆಲ್ಲರ ಬೆಂಬಲ ನೀಡಿ, ಬದಲಾವಣೆಗೆ ಕಾರಣರಾಗಿದ್ದೀರ. ಚುನಾವಣೆಯಲ್ಲಿ ಕೊಟ್ಟಂತಹ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ. ಕೆಲವೇ ನಿಮಿಷಗಳಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ನಮ್ಮ ಘೋಷಣೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಪದಗ್ರಹಣ ಸಮಾರಂಭದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ನಾಯಕ ರಾಹುಲ್ ಗಾಂಧಿ, ರಾಜ್ಯದ ಜನರಿಗೆ ಧನ್ಯವಾದಗಳು, ನೀವೆಲ್ಲರೂ ಕಾಂಗ್ರೆಸ್ ಬೆಂಬಲಿಸಿದ್ದೀರ. ಕಳೆದ 5 ವರ್ಷಗಳಿಂದ ಆದ ಸಮಸ್ಯೆ ನೋಡಿದ್ದೀರ, ತಮ್ಮೆಲ್ಲರ ಬೆಂಬಲ ಚುನಾವಣೆಯಲ್ಲಿ ನೀಡಿ ಕರ್ನಾಟಕದಲ್ಲಿ ಪೂರ್ಣ ಬದಲಾವಣೆಗೆ ಕಾರಣರಾಗಿದ್ದೀರ ಎಂದು ಜನತೆಗೆ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ:ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಜೊತೆಗೆ ಎಂಟು ಸಚಿವರ ಪ್ರಮಾಣವಚನ
ಅಲ್ಲದೆ, ದಲಿತರು, ಬಡವರು, ಕಾರ್ಮಿಕರ ಬೆಂಬಲದಿಂದ ಗೆದ್ದಿದ್ದೇವೆ. ನಮ್ಮ ಪರ ಬಡವರು ನಿಂತಿದ್ದೀರು, ಬಿಜೆಪಿಯಲ್ಲಿ ಶ್ರೀಮಂತರು, ಅಧಿಕಾರಿಗಳಿದ್ರು. ಅವರ ಕುತಂತ್ರಗಳನ್ನ ನೀವು ಹಿಮ್ಮೆಟ್ಟಿಸಿ, ಅವರ ಭ್ರಷ್ಟಾಚಾರವನ್ನ ತಿರಸ್ಕರಿಸಿದ್ದರ. ಕಾಂಗ್ರೆಸ್ ದ್ವೇಷವನ್ನ ಅಳಿಸಿ ಇನ್ಮುಂದೆ ಪ್ರೀತಿಯನ್ನ ಅರಳಿಸಲಿದೆ. ದ್ವೇಷ ತೊಲಗಿಸಲು ನಿಮ್ಮೆಲ್ಲರ ಸಹಕಾರ ನಮಗಿದೆ ಎಂದು ರಾಗಾ ಹೇಳಿದರು.
ಇನ್ನು ನಾವು ಐದು ಯೋಜನೆಗಳನ್ನ ಘೋಷಿಸಿದ್ವಿ, ಮಹಿಳೆಯರಿಗೆ 2000 ರೂ., 200 ಯೂನಿಟ್ ವಿದ್ಯುತ್ ಉಚಿತ, 10 ಕೆ.ಜೆ. ಅಕ್ಕಿ, ಇಡೀ ರಾಜ್ಯದಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ, ಪದವೀಧರರಿಗೆ 3೦೦೦, ಡಿಪ್ಲಮೋದಾರರಿಗೆ 1500 ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದೆವು. ಈಗ ಕೊಟ್ಟ ಮಾತಿನಂತೆ ನಾವು ನಡೆಯುತ್ತೇವೆ. ಕೆಲವೇ ನಿಮಿಷಗಳಲ್ಲಿ ಸಂಪುಟ ಸಭೆ ನಡೆಯಲಿದ್ದು, ಎಲ್ಲವನ್ನೂ ಅನುಷ್ಠಾನಕ್ಕೆ ತರುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
ಇದನ್ನೂ ಓದಿ: ಪ್ರಮಾಣ ವಚನ ಸ್ವೀಕರಿಸಿದ ಸಿದ್ದು, ಡಿಕೆಶಿ, 8 ಜನ ಸಚಿವರು.! ಫೋಟೋಸ್ ನೋಡಿ
ಮೋದಿ ಜಪಾನ್‌ಗೆ ಹೋದಾಗ ನೋಟ್ ಬ್ಯಾನ್ ಆಗುತ್ತೆ : ಖರ್ಗೆ
ಇದೆ ವೇಳೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಾವು ಐದು ಗ್ಯಾರೆಂಟಿ ಕೊಟ್ಟಿದ್ದೆವು, ಆ ಎಲ್ಲಾ ಗ್ಯಾರೆಂಟಿಗಳನ್ನ ಜಾರಿಗೆ ತರುತ್ತೇವೆ. ಬಿಜೆಪಿಯವರಂತೆ ಮಾಡದೆ ಇರುವವರಲ್ಲ ನಾವು. ಮೋದಿ ಜಪಾನ್‌ಗೆ ಹೋಗ್ತಾರೆ ಆಗ ನೊಟಿಪಿಕೇಶನ್ ಹೊರಡಿಸ್ತಾರೆ, ಈ ಹಿಂದೆ ಜಪಾನ್‌ಗೆ ಹೋದ್ರು ಆಗ 1000 ರೂ. ನೋಟು ಬ್ಯಾನ್ ಮಾಡಿದ್ರು ಈಗ ಜಪಾನ್‌ಗೆ ಹೋದ್ರು 2000 ರೂ ನೋಟು ಬಂದ್ ಮಾಡಿದ್ರು. ದೇಶದ ಜನರಿಗೆ ಇದು ತೊಂದರೆ ಕೊಡುವ ಕೆಲಸ. ಆದರೆ ನಮ್ಮ ಸರ್ಕಾರ ಜನಪರ ಸರ್ಕಾರ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇದು ಕನ್ನಡಿಗರಿಗೆ ಸಿಕ್ಕ ಜಯ : ಸಿಎಂ ಸಿದ್ದರಾಮಯ್ಯ
ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಕಾಂಗ್ರೆಸ್‌ಗೆ ಸಿಕ್ಕ ಜಯ ಕನ್ಮಡಿಗರಿಗೆ ಸಿಕ್ಕ ಜಯ. ನಿಮ್ಮೆಲ್ಲರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದಕ್ಕೇಲ್ಲ ನಿಮ್ಮ ಆಶೀರ್ವಾದ ಕಾರಣ ಎಂದರು. ಅಲ್ಲದೆ, ಸರ್ಕಾರ ಬರಲು ಭಾರತ್ ಜೋಡೋ ಕಾರಣ, ಖರ್ಗೆ, ಪ್ರಿಯಾಂಕ ಗಾಂಧಿಯವರ ಮಾರ್ಗದರ್ಶನವಿದೆ, ಅವರೆಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ