`ಒಂದು ಮತಕ್ಕೆ ಕೋಟಿ ನೀಡಿದರೂ ಸಾಲದು, ಅಮಿಷಕ್ಕೆ ಒಳಗಾಗದೇ ಗುಪ್ತವಾಗಿ ವೋಟ್ ಮಾಡಿ`
siddalinga Shree : ಸಿದ್ದಗಂಗಾ ಮಠದ ಸ್ವಾಮೀಜಿಗಳು ತುಮಕೂರಿನ ಮತಗಟ್ಟೆ ಸಂಖ್ಯೆ 116ರಲ್ಲಿ ಮತದಾನ ಮಾಡಿದರು. ಶ್ರೀಗಳು 116ರ ವಾರ್ಡ್ ನಲ್ಲಿ ಮೊದಲಿಗರಾಗಿ ಮತ ಹಾಕಿದ್ದಾರೆ. ಜೊತೆಗೆ ಮತದಾನದ ಮಹತ್ವದ ಕುರಿತು ಮಾದ್ಯಮಗಳ ಜೊತೆ ಮಾತನಾಡಿದ್ದಾರೆ.
Tumkur : ಸಿದ್ದಲಿಂಗಾ ಶ್ರೀಗಳು ಮೊದಲಿಗರಾಗಿ 116ರ ವಾರ್ಡ್‌ನಲ್ಲಿ ಹಕ್ಕು ಚಲಾವಣೆ ಮಾಡಿದರು. ಜೊತೆಗೆ ಮತದಾನದ ಕುರಿತು ಮಾದ್ಯಮಗಳ ಜೊತೆ ಮಾತನಾಡಿದ ಅವರು ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಪವಿತ್ರವಾದ ಸ್ಥಾನ ಮತ್ತು ಮಹತ್ವವಿದೆ. 18 ವರ್ಷ ತುಂಬಿದ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಮನೆಯಲ್ಲಿ ಕುಳಿತುಕೊಳ್ಳದೇ, ಮತಗಟ್ಟೆಗೆ ಬಂದು ಯಾವದೇ ಆಮಿಷಕ್ಕೆ ಒಳಗಾಗದೇ ನ್ಯಾಯಯುತವಾಗಿ ವೋಟ್ ಹಾಕಬೇಕು ಎಂದು ಹೇಳಿದ್ದಾರೆ. ಜೊತೆಗೆ ಮತದಾನ ಮಾಡಲು ಜನರೇ ಜಾಗೃತರಾಗಬೇಕು. ಒಂದು ಮತಕ್ಕೆ ಕೋಟಿ ನೀಡಿದರೂ ಸಾಲದೂ ಹಾಗಾ ಯಾವದೇ ಆಮಿಷಗಳಿಗೆ ಒಳಗಾಗದೇ ತಪ್ಪದೇ ನಿಮಗೆ ಉತ್ತಮ ಎನಿಸುವ ಜನನಾಯಕನ್ನು ಆಯ್ಕೆ ಮಾಡಿ ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ-ಜಿಲ್ಲಾ ಚುನಾವಣಾಧಿಕಾರಿ, ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ- ಪರಿಶೀಲನೆ
ನಮ್ಮ ಸಂವಿಧಾನ ನಮಗೆ ನೀಡಿರುವ ಅಮೂಲ್ಯವಾದ ಸ್ವಾತಂತ್ರ್ಯವೆಂದರೇ ನಮ್ಮನ್ನಾಳುವ ನಾಯಕನನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶ. ಅದನ್ನು ಉತ್ತಮ ರೀತಿಯಿಂದ ಬಳಸಿಕೊಳ್ಳುವುದು ನಮ್ಮ ಕರ್ತವ್ಯ. ಆದ್ದರಿಂದ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಿ. ನಿಮ್ಮ ಮತಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.
ವೋಟ್ ಮಾಡುವಾಗ ಗುಪ್ತತೆಯನ್ನು ಕಾಪಾಡಿ ಎಂದು ಸಹ ಶ್ರೀಗಳು ತಿಳಿಸಿದ್ದಾರೆ. ಮತದಾನ ಎಲ್ಲರ ಹಕ್ಕು ಮತ್ತು ಕರ್ತವ್ಯ, ಎಲ್ಲರೂ ಮನೆಯಲ್ಲಿ ಕುಳಿತುಕೊಳ್ಳದೇ ಮತಗಟ್ಟೆಗೆ ಬಂದು ತಪ್ಪದೇ ಮತದಾನ ಮಾಡಿ ಎಂದು ಮಾದ್ಯಮಗಳ ಮೂಲಕ ಮತದಾನದ ಮಹತ್ವದ ಜೊತೆಗೆ ಮತದಾನದ ಕುರಿತು ಜಾಗೃತಿ ಮೂಡಿಸಿದ್ದಾರೆ.
ಇದನ್ನೂ ಓದಿ-ರಾಜ್ಯದ ಎಲ್ಲೆಡೆ ಮತದಾನಕ್ಕೆ ಸಕಲ ಸಿದ್ಧತೆ: ಬಿಗಿ ಬಂದೋಬಸ್ತ್ ವ್ಯವಸ್ಥೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇ