Amul vs Nandini: ಪ್ರಧಾನಿ ಮೋದಿಯವರೇ ನಿಮ್ಮ ಕರ್ನಾಟಕ ಭೇಟಿಯ ಉದ್ದೇಶವೇನು?- ಸಿದ್ದರಾಮಯ್ಯ
ಗುಜರಾತ್‌ನ ಬರೋಡಾ ಬ್ಯಾಂಕ್ ಜೊತೆಗೆ ನಮ್ಮ ಹೆಮ್ಮೆಯ ವಿಜಯಾ ಬ್ಯಾಂಕ್‍ಅನ್ನು ವಿಲೀನಗೊಳಿಸಲಾಯಿತು. ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ಗುಜರಾತ್‌ನ ಅದಾನಿಗೆ ಹಸ್ತಾಂತರಿಸಲಾಯಿತು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು: ಪ್ರಧಾನಿ ಮೋದಿಯವರ ಕರ್ನಾಟಕ ಭೇಟಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ‘ನಿಮ್ಮ ಕರ್ನಾಟಕ ಭೇಟಿಯ ಉದ್ದೇಶವೇನು’ ಅಂತಾ ಪ್ರಶ್ನಿಸಿದ್ದಾರೆ. #SaveNandini ಹ್ಯಾಶ್‍ಟ್ಯಾಗ್ ಬಳಸಿ ಭಾನುವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಪ್ರಧಾನಿ ಮೋದಿಯವರೇ ನೀವು ಕರ್ನಾಟಕಕ್ಕೆ ಬಂದಿರುವ ಉದ್ದೇಶ ಕರ್ನಾಟಕಕ್ಕೆ ಕೊಡುವುದೋ ಅಥವಾ ಕರ್ನಾಟಕದಿಂದ ಲೂಟಿ ಮಾಡುವುದೋ?’ ಕುಟುಕಿದ್ದಾರೆ.
‘ನೀವು ಈಗಾಗಲೇ ಕನ್ನಡಿಗರಿಂದ ಬ್ಯಾಂಕುಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ಕದ್ದಿದ್ದೀರಿ. ನೀವು ಈಗ ನಂದಿನಿಯನ್ನು (ಕೆಎಂಎಫ್) ನಮ್ಮಿಂದ ಕದಿಯಲು ಪ್ರಯತ್ನಿಸುತ್ತಿದ್ದೀರಾ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಗುಜರಾತ್‌ನ ಬರೋಡಾ ಬ್ಯಾಂಕ್ ಜೊತೆಗೆ ನಮ್ಮ ಹೆಮ್ಮೆಯ ವಿಜಯಾ ಬ್ಯಾಂಕ್‍ಅನ್ನು ವಿಲೀನಗೊಳಿಸಲಾಯಿತು. ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ಗುಜರಾತ್‌ನ ಅದಾನಿಗೆ ಹಸ್ತಾಂತರಿಸಲಾಯಿತು. ಈಗ ಗುಜರಾತ್‌ನ AMUL ನಮ್ಮ KMF (ನಂದಿನಿ) ತಿನ್ನಲು ಯೋಜಿಸಲಾಗುತ್ತಿದೆ. ಪ್ರಧಾನಿ ಮೋದಿಯವರೇ ಗುಜರಾತಿಗಳಿಗೆ ನಾವು ಶತ್ರುಗಳೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
"ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದಕ್ಕೆ ಅವರ ಕೇಂದ್ರ ನಾಯಕರ ರಾಜ್ಯ ಪ್ರವಾಸವೇ ಸಾಕ್ಷಿ"
ಪ್ರೋತ್ಸಾಹ ಧನ ನೀಡಲು ನಮ್ಮ ಸರ್ಕಾರ ಕ್ಷೀರ ಧಾರೆ ಯೋಜನೆ ಜಾರಿಗೊಳಿಸಿದೆ. ಇದು 2013ರಲ್ಲಿ 45 ಲಕ್ಷ ಲೀಟರ್‌ನಿಂದ 2017ರಲ್ಲಿ 73 ಲಕ್ಷ ಲೀಟರ್‌ಗೆ ಏರಿಕೆಯಾಗಲು ನೆರವಾಯಿತು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.