Karnataka Assembly Elections 2023: ಪ್ರಜಾಪ್ರಭುತ್ವದ ಹಬ್ಬ ಚುನಾವಣೆಗೆ ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿದೆ. ಇದಕ್ಕಾಗಿ ರಾಜ್ಯಾದ್ಯಂತ ಭರದ ಸಿದ್ದತೆ ಜರುಗಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಕೂಡ ಮಸ್ಟರಿಂಗ್ ಕೇಂದ್ರಗಳಿಂದ ಚುನಾವಣಾ ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದ್ದಾರೆ. 


COMMERCIAL BREAK
SCROLL TO CONTINUE READING

ಚಾಮರಾಜನಗರದ ಪದವಿ ಕಾಲೇಜು ಹಾಗೂ  ಕೊಳ್ಳೆಗಾಲದ ಎಂ.ಜಿ.ಎಸ್.ವಿ. ಪದವಿಪೂರ್ವ ಕಾಲೇಜಿನ ಮಸ್ಟರಿಂಗ್ ಕೇಂದ್ರಗಳಿಂದ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಹನೂರಿನ ವಿವಿಧ ಮತಗಟ್ಟೆಗಳಿಗೆ ಇವಿಎಂ ಹಿಡಿದು ಸಿಬ್ಬಂದಿ ತೆರಳಿದ್ದಾರೆ.


ಅಂಚೆ ಮತದಾನ ಮಾಡಿದ ಸಿಬ್ಬಂದಿ: 
ಚಾಮರಾಜನಗರ ಜಿಲ್ಲೆಯಲ್ಲಿ ಮತದಾನ ಹೊಂದಿರುವ ಸಿಬ್ಬಂದಿಗಳಿಗೆ ಮಸ್ಟರಿಂಗ್ ಕೇಂದ್ರದ ಅವರಣದಲ್ಲೇ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅಂಚೆ ಮತದಾನ ಮಾಡಿದ ಬಳಿಕ ಚುನಾವಣೆಗೆ ಸಿಬ್ಬಂದಿಗಳು ತೆರಳಿದರು.


ಇದನ್ನೂ ಓದಿ- ರಾಜ್ಯದ ಎಲ್ಲೆಡೆ ಮತದಾನಕ್ಕೆ ಸಕಲ ಸಿದ್ಧತೆ: ಬಿಗಿ ಬಂದೋಬಸ್ತ್ ವ್ಯವಸ್ಥೆ


ಶಿಕ್ಷಕರು, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಅಂಚೆ ಮತ ಪತ್ರಗಳನ್ನು ಬ್ಯಾಲೆಟ್ ಬಾಕ್ಸ್ ಗಳಲ್ಲಿ ಹಾಕಿ ತಮ್ಮ ಹಕ್ಕು ಚಲಾಯಿಸಿದರು.


ಕಾಡಂಚಿನ ಗ್ರಾಮಗಳಿಗೆ ಜೀಪ್ ವ್ಯವಸ್ಥೆ: 
ವಿವಿಧ ಮತಗಟ್ಟೆಗಳಿಗೆ ತೆರಳಲು ಬಸ್ ಜೊತೆಗೆ 4×4 ಜೀಪ್ ವ್ಯವಸ್ಥೆಯನ್ನು ಚುನಾವಣಾಧಿಕಾರಿಗಳು ಈ ಬಾರಿ ಕಲ್ಪಿಸಿದ್ದರು.‌ ಹನೂರು, ಚಾಮರಾಜನಗರ ತಾಲೂಕಿನ ವಿವಿಧ ಕಾಡಂಚಿನ ಗ್ರಾಮಗಳಿಗೆ,  ರಸ್ತೆ ಇಲ್ಲದ ಊರುಗಳಿಗೆ, ಪ್ರಾಣಿ ಭೀತಿ ಇರುವ ಗ್ರಾಮಗಳಿಗೆ ಚುನಾವಣಾ ಸಿಬ್ಬಂದಿ ಜೀಪ್ ಮೂಲಕ ತೆರಳಿದರು.


ಹನೂರಲ್ಲಿ ಭರ್ಜರಿ ಭೋಜನ!
ಚಾಮರಾಜನಗರ ಜಿಲ್ಲೆಯ ಹನೂರು ಮಸ್ಟರಿಂಗ್ ಕೇಂದ್ರದಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಭೂರಿ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.‌ ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಾದ್ದರಿಂದ ಲಾಡು, ಕೀರು, ಮೈಸೂರು ಪಾಕ್, 4 ಪಲ್ಯ , ಚಪಾತಿ, ಮುದ್ದೆ ಸೇರಿದಂತೆ ಭರ್ಜರಿ ಭೋಜನವನ್ನು ಮತಗಟ್ಟೆ ಸಿಬ್ಬಂದಿಗಳಿಗೆ ಉಣಬಡಿಸಲಾಯಿತು.


ಇದನ್ನೂ ಓದಿ- ಜಿಲ್ಲಾ ಚುನಾವಣಾಧಿಕಾರಿ, ಮುಖ್ಯ ಆಯುಕ್ತರಿಂದ ಮಸ್ಟರಿಂಗ್ ಕೇಂದ್ರಗಳ ಭೇಟಿ- ಪರಿಶೀಲನೆ


ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯು ಹದ್ದಿನ ಕಣ್ಣಿಟ್ಟಿದ್ದು 2000ಕ್ಕೂ ಅಧಿಕ ಪೊಲೀಸರು ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ, ಸಿಆರ್ ಪಿಎಫ್, ಬೇರೆ ರಾಜ್ಯದ ಪೊಲೀಸರು ಕೂಡ ಜಿಲ್ಲೆಯ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.