Karnataka Election 2023: ರಾಜ್ಯ ವಿಧಾನಸಭಾ ಚುನಾವಣೆಗೆ ಬೆರಳೆಣಿಕೆ ದಿನಗಳೂ ಮಾತ್ರ ಬಾಕಿಯಿದೆ. ಅಭ್ಯರ್ಥಿಗಳು ಜನರ ಮನಗೆಲ್ಲಲು ನಾನಾ ಕಸರತ್ತು ಮಾಡ್ತಿದ್ದಾರೆ. ರ್ಯಾಲಿ.ಸಮಾವೇಶ ನಡೆಸಿ ಶಕ್ತಿಪ್ರದರ್ಶಿಸುತ್ತಿದ್ದಾರೆ. ಇವೆಲ್ಲದರ ನಡುವೆ ಹೂವಿನ ಹಾರಗಳಿಗೆ ಬೇಡಿಕೆ ಹೆಚ್ಚಿದೆ. ಕೊರೊನಾ ಬಳಿಕ‌ ಅಲ್ಪ ಮಟ್ಟಿಗೆ ಮಾತ್ರ ಚೇತರಿಕೆ ಕಂಡಿದ್ದ ಹೂವು ವ್ಯಾಪಾರ ಇದೀಗ ಚುನಾವಣೆ ಹಿನ್ನೆಲೆ ದುಪ್ಪಟ್ಟಾಗಿದೆ. ಮಾರುಕಟ್ಟೆಯಲ್ಲಿ ಹೂವಿನ ಹಾರಗಳಿಗೆ ಬೇಡಿಕೆ ಹೆಚ್ಚಿದೆ.  


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆನೆ ಮೇಲೆ ಕುಳಿತು ಪ್ರಚಾರ ನಡೆಸುತ್ತಿರುವ ಚಾಮರಾಜನಗರ BSP ಅಭ್ಯರ್ಥಿ!


ಚುನಾವಣೆ ನೆಪದಲ್ಲಿ ಹೂವಿನ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪರವಾಗ್ತಿದೆ. ಬೆಂಗಳೂರಿನ ಸಿಟಿ ಮಾರ್ಕೆಟ್ ನ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಹಾರಕ್ಕೆ ಬಹಳ ಬೇಡಿಕೆ ಬಂದಿದೆ. ಬಹಿರಂಗ ಪ್ರಚಾರಕ್ಕೆ ಅಧಿಕೃತ ಚಾಲನೆ ಸಿಕ್ಕ ಬೆನ್ನಲ್ಲೇ ಹಾರಕ್ಕೆ ಪ್ರತಿ ದಿನ ಬೇಡಿಕೆ ಬರುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಬಣ್ಣದಲ್ಲೇ ಆಳೆತ್ತರದ ಹಾರಗಳನ್ನು ತಯಾರು ಮಾಡಲಾಗುತ್ತಿದೆ.


ಅಲ್ಲದೆ 10, 15, 20 ಅಡಿ ಎತ್ತರದ ಕಸ್ಟಮೈಸ್ಡ್ ಹಾರಗಳಿಗೆ ಹಲವು ರಾಜಕೀಯ ಪಕ್ಷಗಳಿಂದ ಆರ್ಡರ್ ನೀಡಲಾಗುತ್ತಿದೆ. 15 ಅಡಿ ಎತ್ತರದ ಹೂವಿನ ಹಾರಕ್ಕೆ 15 ಸಾವಿರ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನ 170 ರಿಂದ 200 ಹೂವಿನ ಹಾರಗಳು ಕೆಆರ್ ಮಾರ್ಕೆಟ್ ನಲ್ಲಿ ವ್ಯಾಪಾರವಾಗುತ್ತಿದೆ.ಉಳಿದಂತೆ ಗುಲಾಬಿ ಹಾರ, ಚೆಂಡು ಹೂವಿಹಾರ, ಮಲ್ಲಿಗೆ ಹಾರ ಹೀಗೆ ಬಗೆಬಗೆಯ ಹಾರಗಳು ಮಾರುಕಟ್ಟೆಯಲ್ಲಿದೆ. ಇಂಥಾ ಹೂವಿನ ಹಾರಗಳಿಗೆ 3 ಸಾವಿರದಿಂದ‌ 15 ಸಾವಿರ ರೂಪಾಯಿ ವರೆಗೂ ದರ ನಿಗದಿ ಮಾಡಲಾಗಿದೆ. ಹೂವಿನ ಹಾರ ಬೇಕು ಅಂದ್ರೆ ಎರಡ್ಮೂರು ದಿನಗಳ ಮುಂಚಿತವಾಗಿಯೇ ಆರ್ಡರ್ ಮಾಡಬೇಕು. ಕೋವಿಡ್ ಟೈಮಲ್ಲಿ ಬಹಳ ನಷ್ಟ ಎದುರಿಸಿದ್ದ ಹೂವಿನ ವ್ಯಾಪಾರಿಗಳಿಗೆ ಚುನಾವಣೆ ಸುಗ್ಗಿ ಕಾಲ ತಂದಿದೆ.


ಇದನ್ನೂ ಓದಿ: ಅಭ್ಯರ್ಥಿಗೆ ಆಮೀಷ ಆಡಿಯೋ: ಮೂವರ ವಿರುದ್ಧ ಕೇಸ್ ದಾಖಲು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.