ಡಾಂಬಾರು ಹಾಕಿದ ಎರಡೇ ದಿನಕ್ಕೆ ಕಿತ್ತು ಬಂದ ರಸ್ತೆ!!
Assembly Election: ಗುಂಡ್ಲುಪೇಟೆ ತಾಲೂಕಿನ ಮಾಲಾಪುರ ಸಂಪರ್ಕ ರಸೆಯಲ್ಲಿ ತೀರಾ ಕಳಪೆ ಕಾಮಗಾರಿ ನಡೆದಿರುವ ಆರೋಪ ಕೇಳಿಬಂದಿದೆ. ಯರಿಯೂರು ಸಂಪರ್ಕ ರಸ್ತೆಯಿಂದ ಮಾಲಾಪುರದವರೆಗಿನ ರಸ್ತೆ ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿಗೊಳ್ಳುತ್ತಿದ್ದು, ಎರಡು ದಿನದ ಹಿಂದೆಯಷ್ಟೆ ಡಾಂಬರೀಕರಣ ಮಾಡಲಾಗಿತ್ತು.
ಚಾಮರಾಜನಗರ: ಚುನಾವಣಾ ಹೊತ್ತಿನಲ್ಲಿ ಕಾಮಗಾರಿಗಳ ಗುಣಮಟ್ಟ ಯಾವ ರೀತಿ ಇರಲಿದೆ ಎಂಬುದಕ್ಕೇ ಈ ರಸ್ತೆ ಒಂದು ನಿದರ್ಶನವಾಗಿದೆ. ಡಾಂಬಾರು ಹಾಕಿದ ಎರಡೇ ದಿನಕ್ಕೆ ಕಿತ್ತುಬಂದಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಗುಂಡ್ಲುಪೇಟೆ ತಾಲೂಕಿನ ಮಾಲಾಪುರ ಸಂಪರ್ಕ ರಸೆಯಲ್ಲಿ ತೀರಾ ಕಳಪೆ ಕಾಮಗಾರಿ ನಡೆದಿರುವ ಆರೋಪ ಕೇಳಿಬಂದಿದೆ. ಯರಿಯೂರು ಸಂಪರ್ಕ ರಸ್ತೆಯಿಂದ ಮಾಲಾಪುರದವರೆಗಿನ ರಸ್ತೆ ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿಗೊಳ್ಳುತ್ತಿದ್ದು, ಎರಡು ದಿನದ ಹಿಂದೆಯಷ್ಟೆ ಡಾಂಬರೀಕರಣ ಮಾಡಲಾಗಿತ್ತು. ಗುಣಮಟ್ಟದ ಬಗ್ಗೆ ಸಂಶಯಗೊಂಡ ಜನರು ಪರಿಶೀಲಿಸಿದಾಗ ಡಾಂಬಾರು ಕಿತ್ತು ಬರುತ್ತಿದೆ.
ಇದನ್ನೂ ಓದಿ- "ಆಯನೂರು ಮಂಜುನಾಥ್ ಬಂಡಾಯ; ಶಾಸಕರ ಪಕ್ಷಾಂತರ: ಬಿಜೆಪಿ ಮೇಲೆ ಪರಿಣಾಮ ಬೀರಲ್ಲ "
ರೊಟ್ಟಿ ತಟ್ಟುವಂತೆ ಅತಿ ಕಡಿಮೆ ಮಂದಕ್ಕೆ ಡಾಂಬರು ಹಾಕಲಾಗಿದೆ. ಕೈನಿಂದ ಡಾಂಬರನ್ನು ಸುಲಭವಾಗಿ ಕೀಳಬಹುದಾಗಿದೆ. ಇದು ಶೇ.60 ಕಮಿಷನ್ ಪ್ರಭಾವ ಎಂದು ಮಾಲಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನು ಗುತ್ತಿಗೆದಾರನ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ- Karnataka Election 2023: ಬಿಜೆಪಿಯ ಈ ಹಿರಿಯ ನಾಯಕನಿಗೆ ಇಲ್ಲವಂತೆ ಈ ಬಾರಿ ಟಿಕೆಟ್! ಹೊಸ ಮುಖದ ಹುಡುಕಾಟದಲ್ಲಿ ಹೈಕಮಾಂಡ್
ಒಟ್ಟಿನಲ್ಲಿ ಚುನಾವಣಾ ಸಮಯದಲ್ಲಿ ಮಾಯಜಾಲದಂತೆ ಕಾಮಗಾರಿಗಳು ನಡೆಯುತ್ತದೆ ಎಂಬುದಕ್ಕೆ ಈ ರಸ್ತೆ ಕನ್ನಡಿ ಹಿಡಿದಂತಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.