Karnataka Election 2023: ಈ ಬಾರಿ ಶೇ.72.67 ವೋಟಿಂಗ್: 2018ರಲ್ಲಿ ಎಷ್ಟಾಗಿತ್ತು ಗೊತ್ತಾ ಮತದಾನ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
Karnataka Election 2023 Vote Percentage: ರಾಜ್ಯದ ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮತದಾನದ ಪ್ರವೃತ್ತಿ ಮುಂದುವರೆದಿದೆ. ವಿರಾಜಪೇಟೆಯಲ್ಲಿ ಶೇ.74.07ರಷ್ಟು ಮತದಾನವಾಗಿದ್ದರೆ, ಮಡಿಕೇರಿಯಲ್ಲಿ ಶೇ.75.39ರಷ್ಟು ಮತದಾನವಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.81.3, ಕಾಪು ಶೇ.78.79, ಉಡುಪಿ ಶೇ.75.87, ಕುಂದಾಪುರ ಶೇ.78.94 ಮತ್ತು ಬೈಂದೂರಿನಲ್ಲಿ ಶೇ.77.84 ರಷ್ಟು ಮತದಾನವಾಗಿದೆ.
Karnataka Election 2023: ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬುಧವಾರ 72.67 ರಷ್ಟು ಮತದಾನವಾಗಿದ್ದು, 224 ವಿಧಾನಸಭಾ ಸ್ಥಾನಗಳಿಗೆ ನಡೆದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ ಎಂದು ಚುನಾವಣಾ ಆಯೋಗ (EC) ತಿಳಿಸಿದೆ. ಕೆಲವು ಘಟನೆಗಳನ್ನು ಹೊರತುಪಡಿಸಿ, ಮತದಾನವು ಒಟ್ಟಾರೆ ಶಾಂತಿಯುತವಾಗಿದೆ ಎಂದು ಇಸಿ ಸೆಕ್ರೆಟರಿಯೇಟ್ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಏಳು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಶೇ 73 ರಷ್ಟು ಮತದಾನವಾಗಿದೆ, 2018 ರಲ್ಲಿ 71.1% ರಷ್ಟು ಮತದಾನವಾಗಿದ್ದು, ಹಿಂದಿನ ದಾಖಲೆಯನ್ನು ಮುರಿದಿದೆ. ಇದು 1952 ರಲ್ಲಿ ನಡೆದ ಮೊದಲ ರಾಜ್ಯ ಚುನಾವಣೆಯ ನಂತರದ ಅತ್ಯುತ್ತಮ ಮತದಾನ ಎನ್ನಬಹುದು.
ಇದನ್ನೂ ಓದಿ: ಬಿಜೆಪಿ ತಮ್ಮ ಸಾಧನೆಯನ್ನೂ ಹೇಳುತ್ತಿಲ್ಲ, ಸಿಎಂ ಮುಖವನ್ನೂ ತೋರಿಸುತ್ತಿಲ್ಲ: ಕಾಂಗ್ರೆಸ್
ಬೆಂಗಳೂರು ನಗರ, ಯಶವಂತಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 63.7% ಮತ್ತು ಸಿವಿ ರಾಮನ್ ನಗರದಲ್ಲಿ ಅತಿ ಕಡಿಮೆ ಅಂದರೆ 42.1% ಮತದಾನವಾಗಿದೆ. ಜಿಲ್ಲೆಗಳ ಪೈಕಿ ಹಳೆ ಮೈಸೂರು ಭಾಗದ ರಾಮನಗರದಲ್ಲಿ ಅತಿ ಹೆಚ್ಚು ಅಂದರೆ ಶೇ.85ರಷ್ಟು ಮತದಾನವಾಗಿದೆ.
ಮಧ್ಯಾಹ್ನದ ಅವಧಿಯಲ್ಲಿ ರಾಜ್ಯದ ದಕ್ಷಿಣ ಭಾಗದಲ್ಲಿ ಶೇಕಡಾ 50 ರಷ್ಟು ಮತದಾನವಾಗಿತ್ತು. ಇನ್ನು ಸಂಜೆ 5 ಗಂಟೆ ವೇಳೆಗೆ ಶೇ.65.69 ರಷ್ಟು ಮತದಾರರು ಮತ ಚಲಾಯಿಸಿ ತಮ್ಮ ಹಕ್ಕು ಚಲಾಯಿಸಿದ್ದರು. ಹೈವೋಲ್ಟೇಜ್ ವರುಣಾ ಕ್ಷೇತ್ರದಲ್ಲಿ ಶೇ.84.39ರಷ್ಟು ಮತದಾನವಾಗಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ವಸತಿ ಸಚಿವ ವಿ.ಸೋಮಣ್ಣ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾರಣ ಇದು ಸಖತ್ ಕುತೂಹಲ ಮೂಡಿಸಿದೆ.
ರಾಜ್ಯದ ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಭಾರಿ ಮತದಾನದ ಪ್ರವೃತ್ತಿ ಮುಂದುವರೆದಿದೆ. ವಿರಾಜಪೇಟೆಯಲ್ಲಿ ಶೇ.74.07ರಷ್ಟು ಮತದಾನವಾಗಿದ್ದರೆ, ಮಡಿಕೇರಿಯಲ್ಲಿ ಶೇ.75.39ರಷ್ಟು ಮತದಾನವಾಗಿದೆ.
ಕೋಮುಗಲಭೆಗಳಿಗೆ ಸಾಕ್ಷಿಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಹೆಚ್ಚಿನ ಮಟ್ಟದಲ್ಲಿ ಮತದಾನ ನಡೆದಿದೆ. ಸುಳ್ಯದಲ್ಲಿ ಶೇ.78.94, ಪುತ್ತೂರು ಶೇ.80.02, ಬಂಟ್ವಾಳ ಶೇ.80.17 ಮತ್ತು ಮಂಗಳೂರು ಶೇ.77.6, ಮಂಗಳೂರು ನಗರ ದಕ್ಷಿಣದಲ್ಲಿ ಶೇ.65.1, ಮಂಗಳೂರು ನಗರ ಉತ್ತರದಲ್ಲಿ ಶೇ.72.32, ಮೂಡಬಿದ್ರಿ ಶೇ.76.11, ಬೆಳ್ತಂಗಡಿಯಲ್ಲಿ ಶೇ.80.8ರಷ್ಟು ಮತದಾನವಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.81.3, ಕಾಪು ಶೇ.78.79, ಉಡುಪಿ ಶೇ.75.87, ಕುಂದಾಪುರ ಶೇ.78.94 ಮತ್ತು ಬೈಂದೂರಿನಲ್ಲಿ ಶೇ.77.84 ರಷ್ಟು ಮತದಾನವಾಗಿದೆ.
ಚನ್ನಪಟ್ಟಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರು ಪ್ರತಿನಿಧಿಸಿದ್ದಾರೆ. ಸದ್ಯ ಈ ಕ್ಷೇತ್ರದಲ್ಲಿ ಶೇ.85.23 ರಷ್ಟು ಮತದಾನ ಮಾಡಿದ್ದಾರೆ. ಇನ್ನು ಕನಕಪುರದಿಂದ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪರ್ಧಿಸಿದ್ದು ಶೇ.84.52ರಷ್ಟು ಮತದಾನವಾಗಿದೆ.
ಶಿಕಾರಿಪುರ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಸ್ಪರ್ಧಿಸುತ್ತಿದ್ದು, ಶೇ.82.57ರಷ್ಟು ಮತದಾನವಾಗಿದೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ನಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸುತ್ತಿದ್ದು, ಇಲ್ಲಿ ಶೇ.64.18 ರಷ್ಟು ಮತದಾನವಾಗಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪರ್ಧಿಸಿದ್ದ ಅಥಣಿ ಕ್ಷೇತ್ರದಲ್ಲಿ ಶೇ.80.23ರಷ್ಟು ಮತದಾನವಾಗಿದೆ.
ಇದನ್ನೂ ಓದಿ: ಮತದಾನಕ್ಕೆ ಬಂದ ಮಹಿಳೆಗೆ ಲಾಠಿ ಏಟು ಆರೋಪ !ಮತಗಟ್ಟೆಯಲ್ಲೇ ವಾಗ್ವಾದ, ನೂಕಾಟ, ತಳ್ಳಾಟ
ಬೆಂಗಳೂರು ಸೇಂಟ್ರಲ್’ನ 7 ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂ ನಲ್ಲಿ ಭದ್ರ:
ಸದ್ಯ 7 ಕ್ಷೇತ್ರಗಳ EVM ಭದ್ರತೆಗೆ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ಸ್ಟ್ರಾಂಗ್ ರೂಂ ನಿರ್ಮಾಣ ಮಾಡಲಾಗಿದ್ದು, ಅದರಲ್ಲಿ ಆರ್ ಆರ್ ನಗರ,ಶಿ ವಾಜಿನಗರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ಕ್ಷೇತ್ರಗಳ ಇವಿಎಂನ್ನು ಭದ್ರವಾಗಿ ಇಡಲಾಗಿದೆ. EVM ಸ್ಟ್ರಾಂಗ್ ರೂಂ ಸೇರುತ್ತಿದ್ದಂತೆ ಖಾಕಿಯ ಹದ್ದಿನ ಕಣ್ಗಾವಲು ನಿಯೋಜನೆ ಮಾಡಿದೆ. ಇನ್ನು ಸ್ಟ್ರಾಂಗ್ ರೂಂ ಸುತ್ತಮುತ್ತ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, ಈ ಭದ್ರತೆಯ ನೇತೃತ್ವವನ್ನು ದಕ್ಷಿಣ ಡಿಸಿಪಿ ಕೃಷ್ಣಕಾಂತ್ ವಹಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.