Chamarajanagar karnataka Assembly Election Result 2023:‌ ಈ ಬಾರಿ ಸೋಮಣ್ಣ ಚಾಮರಾಜನಗರದಲ್ಲಿ ಗೆದ್ದೇ ಬಿಡುತ್ತಾರೆ ಎಂಬ ಕಮಲ ಕಲಿಗಳ ಅತ್ಯುತ್ಸಾಹಕ್ಕೆ ಮತದಾರ ತಣ್ಣೀರು ಎರಚಿದ್ದು ಸತತ ನಾಲ್ಕನೇ ಬಾರಿಗೆ ಚಾಮರಾಜನಗರದ ಗದ್ದುಗೆ ಏರಿದ್ದಾರೆ ಶಾಸಕ ಸಿ‌.ಪುಟ್ಟರಂಗಶೆಟ್ಟಿ.


COMMERCIAL BREAK
SCROLL TO CONTINUE READING

ಹೌದು..., ಶಾಸಕ ಸಿ‌.ಪುಟ್ಟರಂಗಶೆಟ್ಟಿ ಕೃಷಿಯಲ್ಲಿ ಅಪರಿಮಿತ ಆಸಕ್ತಿ ಇರುವ ಜನಪ್ರತಿನಿಧಿಯಾಗಿದ್ದು ತೆಂಗಿನ ಮರವನ್ನು ಸರಸರನೇ ಏರುವ ನಿಷ್ಣಾತ. ಆ ಕಲೆಯನ್ನೇ ರಾಜಕೀಯದಲ್ಲಿ ಕರಗತ ಮಾಡಿಕೊಂಡಿರುವುದು ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. 


ಲಿಂಗಾಯತ ಪ್ರಾಬಲ್ಯ ಕ್ಷೇತ್ರವಾದ ಚಾಮರಾಜನಗರದಲ್ಲಿ ಲಿಂಗಾಯತ ಪ್ರಬಲ ನಾಯಕ ವಿ‌‌.ಸೋಮಣ್ಣ ಸ್ಪರ್ಧೆ ಮಾಡಿದ್ದರೂ ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆದ್ದು ತಾನು ಸೋಲಿಲ್ಲದ ಸರದಾರ ಎಂದು ತೋರಿಸಿದ್ದಾರೆ. ಸೋಮಣ್ಣ ಬಂದ ಬಳಿಕ ಚಾಮರಾಜನಗರ ಹೈವೋಲ್ಟೆಜ್ ಕ್ಷೇತ್ರವಾಗಿ ಬದಲಾಗಿತ್ತು, ಸೋಮಣ್ಣ ಚಾಮರಾಜನಗರ ಮತದಾರರಾಗಿ ಬದಲಾಗಿದ್ದರು. ಆದರೆ, ಎಲ್ಲದಕ್ಕೂ  ಮತದಾರ ಮತಯಂತ್ರದ ಮೂಲಕವೇ ಉತ್ತರ ಕೊಟ್ಟಿದ್ದಾನೆ.


ಇದನ್ನೂ ಓದಿ- Kollegala Assembly Election Result 2023: 1 ಮತದಿಂದ ಸೋತ‌ ನನಗೆ ಅಂತರ ಮುಖ್ಯವಲ್ಲ- ಗೆಲುವು ಮುಖ್ಯ: ಕೊಳ್ಳೇಗಾಲದ ವಿಜೇತ ಎ.ಆರ್.ಕೃಷ್ಣಮೂರ್ತಿ​


ಒಮ್ಮೆಯೂ ಮುನ್ನಡೆ ಸಾಧಿಸದ ಸೋಮಣ್ಣ: 
ಚಾಮರಾಜನಗರ ವಿಧಾನಸಭಾ ಮತ ಎಣಿಕೆಯು ಒಟ್ಟು 18 ಸುತ್ತುಗಳಲ್ಲಿ ನಡೆಯಿತು. ಆದರೆ, ಬಿಜೆಪಿಯ ಯಾವುದೇ ಸ್ರ್ಟಾಟಜಿಗಳು ಚಾಮರಾಜನಗರದಲ್ಲಿ ಕೆಲಸ ಮಾಡಲಿಲ್ಲ, ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸಿದ ಸಿ‌.ಪುಟ್ಟರಂಗಶೆಟ್ಟಿ 2,4,6,8   ಸಾವಿರ ಹೀಗೆ  ಅಂತರವನ್ನು ಹೆಚ್ಚಿಸಿಕೊಂಡು ಕೊನೆಗೆ ಗೆಲುವಿನ ದಡ ತಲುಪಿದರು.


ಓರ್ವ ಪ್ರಬಲ ನಾಯಕ ಸ್ಪರ್ಧೆಗೂ ಬಗ್ಗದ ಸಿ.ಪುಟ್ಟರಂಗಶೆಟ್ಟಿ ಗೆಲುವಿನ ಯಾವುದೇ ಹಾದಿಯನ್ನು ಸೋಮಣ್ಣಗೆ ಬಿಟ್ಟುಕೊಡದೇ 16 ಸುತ್ತಿನಿಂದಲೇ ಗೆಲುವಿನ ನಗೆ ಆರಂಭಿಸಿ 18 ಸುತ್ತಿನಲ್ಲಿ ವಿಜಯಿಯಾದರು.


ಸೋಮಣ್ಣಗೆ ಸಾರಥ್ಯ ವಹಿಸಿದ್ದ ಹೈಕಮಾಂಡ್: 
ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಹೈಕಮಾಂಡ್ ಸೋಮಣ್ಣಗೆ 8 ಕ್ಷೇತ್ರಗಳ ಗುರಿಯನ್ನು ಕೊಟ್ಟಿತ್ತು.  8 ಕ್ಷೇತ್ರಗಳಲ್ಲೂ ಬಿಜೆಪಿ ಮಕಾಡೆ ಮಲಗಿದ್ದು ಕೈ ಭದ್ರವಾಗಿ ನೆಲೆಯೂರಿದರೇ ಕಮಲಪಡೆ ಛಿದ್ರವಾಗಿದೆ. 


ಇದನ್ನೂ ಓದಿ- Chamrajnagar Assembly Election Result 2023: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅರಳದ ಕಮಲ: ವಿ‌.ಸೋಮಣ್ಣಗೆ ಸೋಲು


ಬಿಜೆಪಿ ಪರವಾಗಿ ಘಟಾನುಘಟಿ ನಾಯಕರದ ಅಮಿತ್ ಷಾ, ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಸುದೀಪ್ ಅಬ್ಬರದ ಪ್ರಚಾರ ನಡೆಸಿದ್ದರು‌. ಆದರೆ, ಇದ್ಯಾವುದನ್ನು ಮತದಾರ ಪರಿಗಣಸಿದೇ ಕೈ ಬಲ ಹೆಚ್ಚಿಸಿದ್ದಾನೆ‌.


ಯಾರಿಗೆ ಎಷ್ಟು ಮತ..?
>> ಕಾಂಗ್ರೆಸ್- ಸಿ.ಪುಟ್ಟರಂಗಶೆಟ್ಟಿ- 83,858


>> ಬಿಜೆಪಿ- ವಿ‌. ಸೋಮಣ್ಣ- 76325 


>> ಜೆಡಿಎಸ್- ಆಲೂರು ಮಲ್ಲು-1082


>> ಬಿಎಸ್ಪಿ- ಹ.ರಾ.ಮಹೇಶ್- 6461


>> ನೋಟಾ: 794


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.