ಬೆಂಗಳೂರು : ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮತ್ತು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು ಪಕ್ಷ ತಮಗೆ ಟಿಕೆಟ್‌ ನೀಡಲಿಲ್ಲ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ಸವದಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ಅಥಣಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇದೀಗ ಶೆಟ್ಟರ್‌ ರಾಜೀನಾಮೆ ನೀಡಿದ್ದು, ಮುಂದಿನ ನಿರ್ಧಾನ ಏನು ಅಂತ ತಿಳಿಸಲಿದ್ದಾರೆ. ಆದ್ರೆ ಎಲ್ಲೋ ಒಂದು ಕಡೆ ಇಬ್ಬರು ನಾಯಕರು ದುಡುಕಿದ್ರಾ...? ಎನ್ನುವ ಮಾತು ಜನರ ಬಾಯಿಂದ ಕೇಳಿ ಬರುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ಜನಸಂಘ ಕಾಲದಿಂದಲೂ ಜಗದೀಶ್‌ ಶೆಟ್ಟರ್‌ ಬಿಜೆಪಿ ಪಕ್ಷದ ಬೆಳವಣಿಗೆಗೆ ಕಾರ್ಯಕರ್ತರಾಗಿ, ಪಕ್ಷದ ಕಾರ್ಯಕರ್ತರ ಜೊತೆ ಕೆಲಸ ಮಾಡಿದ್ದರು. ಲಕ್ಷ್ಮಣ ಸವದಿಯವರು ಸಹ ಉತ್ತರ ಕರ್ನಾಟಕದ ಭಾಗದಲ್ಲಿ ಕಮಲ ಅರಳಲು ಕಾರ್ಯಕರ್ತರ ಜೊತೆ ಕೆಲಸ ಮಾಡಿದ್ದರು. ಆದ್ರೆ ಇಂದು ವಿಧಾನಸಭೆ ಚುನಾವಣೆಗೆ ಟಿಕೆಟ್‌ ನೀಡಲಿಲ್ಲ ಎನ್ನುವ ಒಂದೇ ಒಂದು ಕಾರಣಕ್ಕೆ ಇಬ್ಬರೂ ಸ್ವಪಕ್ಷದಿಂದ ದೂರವಾಗಿದ್ದಾರೆ.


ಇದನ್ನೂ ಓದಿ: ಸವದಿ, ಶೆಟ್ಟರ್‌ ಬಣ್ಣ ಬಯಲು ಮಾಡ್ತೀನಿ..! ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತೆ..


ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ, ಪ್ರಲ್ಹಾದ್‌ ಜೋಷಿ, ಧರ್ಮೇಂದ್ರ ಪ್ರಧಾನ್ ಸೇರಿದಂತೆ ಅನೇಕ ನಾಯಕರು ಜಗದೀಶ್‌ ಅವರ ಮನವೊಲಿಸು ಹರಸಾಹಸ ಪಟ್ಟು ಸುಮ್ಮನಾಗಿದ್ದಾರೆ. ಸವದಿ ಏಕಾಎಕಿ ಕಾಂಗ್ರೆಸ್‌ ಮನೆ ಸೇರಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಜನಸಾಮಾನ್ಯರ ತಲೆಯಲ್ಲಿ ಬರೋದು ಒಂದೇ ಒಂದು ಪ್ರಶ್ನೆ.. ಇಂತಹ ದಿಗ್ಗಜ ನಾಯಕರನ್ನು ಇಷ್ಟೋಂದು ಸರಳವಾಗಿ ಬಿಜೆಪಿ ಹೇಗೆ ಕೈ ಬಿಟ್ಟಿತು..? ಅಂತ..


ಆದ್ರೆ, ಬಿಜೆಪಿ ಪಕ್ಷ ಕೆಲವೊಂದಿಷ್ಟು ಐಡಿಯಾಲಜಿಗಳ ಮೇಲೆ ಮುಂದಿನ ಭವಿಷ್ಯಕ್ಕಾಗಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಯುವ ಪಡೆಗೆ ದೇಶದ ಭವಿಷ್ಯದ ಭಾರವನ್ನು ಹೊರಿಸುವ ಪ್ರಯತ್ನದಲ್ಲಿದೆ. ಅದಕ್ಕಾಗಿ ಇಂತಹ ಗಟ್ಟಿ ನಿರ್ಧಾರಗಳನ್ನು ಹೈಕಮಾಂಡ್‌ ತೆಗೆದುಕೊಂಡಿದೆ ಅಂತ ಕಮಲ ನಾಯಕರು ಹೇಳುತ್ತಿದ್ದಾರೆ. ಇದರ ನಡುವೆ ಶೆಟ್ಟರ್‌ ಹಾಗೂ ಸವದಿಯನ್ನ ಪಕ್ಷ ಕೈ ಬಿಟ್ಟಿರಲಿಲ್ಲ.. ಅವರಿಗೆ ಟಿಕೆಟ್‌ ನೀಡಿದ್ದಿಲ್ಲ ಅಷ್ಟೇ.. ಎಂದು ಹೇಳಿದ್ದಾರೆ.


ಇದನ್ನೂ ಓದಿ: Karnataka Election 2023: ಇಡಿ ಕೇಸ್ ಮುಚ್ಚಲು ಅಧಿಕಾರಿಯ ತಂದೆಗೆ ಡಿಕೆಶಿ ಟಿಕೆಟ್..!


ಇನ್ನು ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡಲು ನಿರಾಕರಿಸಿದ್ದ ಬಿಜೆಪಿ ಅವರ ಕುಟುಂಬಕ್ಕೆ ಟಿಕೆಟ್‌ ನೀಡುವುದಾಗಿ ಪರಿಪರಿಯಾಗಿ ಹೇಳಿತ್ತು. ಇಂದೂ ಸಹ ಯಡಿಯೂರಪ್ಪನವರು ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಅಲ್ಲದೆ, ಜಗದೀಶ್‌ ಶೆಟ್ಟರ್‌ ಅವರನ್ನು ರಾಜ್ಯಸಭೆಗೆ ಕಳುಹಿಸುವ ಚರ್ಚೆ ಮಾಡುತ್ತಿರುವುದಾಗಿ ಬಿಜೆಪಿ ನಾಯಕರು ತಿಳಿಸಿದ್ದಾರೆ. ಅದ್ರೆ ಶೆಟ್ಟರ್‌ ಕ್ಯಾರೆ ಎನ್ನದೇ ರಾಜೀನಾಮೆ ನೀಡಿದ್ದಾರೆ. ಮುಂದೆ ಏನ್‌ ಮಾಡ್ತಾರೆ ಅಂತ ಕಾಯ್ದು ನೋಡಬೇಕಿದೆ.


ಲಕ್ಷ್ಮಣ್‌ ಸವದಿ ಕಳೆದ ಬಾರಿ 2018 ರ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಮಹೇಶ್‌ ಕುಮಟಳ್ಳಿ ವಿರುದ್ಧ ಸೋಲು ಅನುಭವಿಸಿದ್ದರು. ಅದಾದ ನಂತರವೂ ಅವರನ್ನು ಪಕ್ಷ ಎಂಎಲ್‌ಸಿ ಮಾಡಿ ಡಿಸಿಎಂ ಪೋಸ್ಟ್‌ ನೀಡಿತ್ತು. ಈಗಲೂ ಸಹ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅವರಿಗೆ ಸ್ಥಾನ ನೀಡುವುದಾಗಿ ಯಡಿಯೂರಪ್ಪ ಸೇರಿದಂತೆ ಕಮಲ ನಾಯಕರು ಹೇಳುತ್ತಿದ್ದಾರೆ. ಆದ್ರೆ ಇಷ್ಟೇಲ್ಲಾ ಮಾಡಿದ ಪಕ್ಷವನ್ನು ಸವದಿ ಏಕಾಎಕಿ ಏಕೆ ಬಿಟ್ಟರು ಎನ್ನುವುದೇ ಗೊಂದಲಮಯವಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.