ಬೆಂಗಳೂರು : ಲಕ್ಷಣ ಸವದಿ ಅವರನ್ನ ಚುನಾವಣೆಯಲ್ಲಿ ಸೋತ ಮೇಲೂ ಡಿಸಿಎಂ, ಕೋರ್ ಕಮಿಟಿ ಸ್ಥಾನ, ಹಾಗೂ ಎಂಎಲ್‌ಸಿ ಸ್ಥಾನ ನೀಡಿದ್ವಿ, ಸವದಿ ಅವರನ್ನ ಜನ ಕ್ಷಮಿಸೋದಿಲ್ಲ, ಜನರಿಗೆ ಮಾಡಿದ ದ್ರೋಹ ಇದು. ಜಗದೀಶ್‌ ಶೆಟ್ಟರ್ ಬದಲು, ಕುಟುಂಬಕ್ಕೆ ಟಿಕೆಟ್‌ ಕೊಡೋದಾಗಿ ಹೇಳಿದ್ದೆ, ಅವರನ್ನು ರಾಜ್ಯಸಭೆಗೆ ಕಳಿಸುವ ಬಗ್ಗೆ ಚರ್ಚೆಯಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ತಿಳಿಸಿದರು.


COMMERCIAL BREAK
SCROLL TO CONTINUE READING

ವಿಧಾನಸಭೆ ಸ್ಪರ್ಧೆಗೆ ಟಿಕೆಟ್‌ ನೀಡದ ಹಿನ್ನಲೆ ಬಿಜೆಪಿ ತೊರೆದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮತ್ತು ಮಾಜಿ ಉಪಮುಖ್ಯಂತ್ರಿ ಲಕ್ಷ್ಮಣ ಸವದಿ ಕುರಿತು ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಎಸ್‌ ಯಡಿಯೂರಪ್ಪನವರು ಮಾತನಾಡಿದರು. ಬಿಜೆಪಿ ರಾಷ್ಟೀಯ ಪಕ್ಷ, ಹಳೆ ಬೇರು ಹೊಸ ಚಿಗುರು ಸೇರಿ ಬೆಳಸಬೇಕಿದೆ. ಪಕ್ಷ ನನಗೆ, ಶೆಟ್ಟರ್, ಸವದಿ, ಈಶ್ವರಪ್ಪ ಅವರಿಗೆ ಸ್ಥಾನ ಮಾನ ನೀಡಿದೆ. ನನ್ನಂತ ಸಾಮಾನ್ಯ ಕಾರ್ಯಕರ್ತ ಜನರ ಮನಸಿನಲ್ಲಿ ಇರಲು ಬಿಜೆಪಿ ಕಾರಣ ಎಂದರು.


ಇದನ್ನೂ ಓದಿ: Karnataka Election 2023: ಇಡಿ ಕೇಸ್ ಮುಚ್ಚಲು ಅಧಿಕಾರಿಯ ತಂದೆಗೆ ಡಿಕೆಶಿ ಟಿಕೆಟ್..!


ಲಕ್ಷಣ ಸವದಿ ಅವರನ್ನ ಚುನಾವಣೆಯಲ್ಲಿ ಸೋತಮೇಲೆ ಡಿಸಿಎಂ, ಕೋರ್ ಕಮಿಟಿ ಸ್ಥಾನ, ಹಾಗೂ ಎಂ ಎಲ್ ಸಿ ಸ್ಥಾನ ನೀಡಿದ್ವಿ. ಲಕ್ಷ್ಮಣ್ ಸವದಿ ಈ ಹಿಂದೆ ಹೇಗೆ ಸಚಿವರಾಗಿ ಮಾಡಿಡ್ವೊ ಅದೇ ರೀತಿ ಮಾಡಬಹುದಿತ್ತು. ಅವರಿಗೆ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸಚಿವರನ್ನಾಗಿ ಮಾಡೋದಾಗಿ ಹೇಳಿದ್ದೆ. ಸವದಿ ಹಾಗೂ ಬೆಂಬಲಿಗರಿಗೆ ನನ್ನ ಪ್ರಶ್ನೆ.. ನಿಮಗೆ ಏನು ಕಡಿಮೆ ಆಗಿದೆ..? ಸವದಿ ಅವರನ್ನ ಜನ ಕ್ಷಮಿಸೋದಿಲ್ಲ, ಜನರಿಗೆ ಅವರು ದ್ರೋಹ ಮಾಡಿದ್ದಾರೆ ಎಂದು ಸವದಿ ನಡೆಗೆ ಬಿಎಸ್‌ವೈ ಅಸಮಾಧಾನ ವ್ಯಕ್ತಪಡಿಸಿದರು.


ಅಲ್ಲದೆ, ಜಗದೀಶ್ ಶೆಟ್ಟರ್ ಜನ ಸಂಘ ಕಾಲದಿಂದ ಬಿಜೆಪಿ ಕುಟುಂಬದಲ್ಲಿ ಇದ್ದವರು. ಇವರನ್ನ ಬಿಜೆಪಿ ರಾಜ್ಯಧ್ಯಕ್ಷ, ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಮಾಡಲಾಗಿತ್ತು. ದಿವಂಗತ ಅನಂತಕುಮಾರ್ ಹಾಗೂ ನಾನು ಮುಂದೆ ನಿಂತು ಮುಖ್ಯಮಂತ್ರಿ ಮಾಡಿದ್ವಿ. ಮೋದಿ ಅವರ ಜೊತೆ ಹೆಜ್ಜೆ ಹಾಕಬೇಕಿತ್ತು. ಶೆಟ್ಟರ್ ಅವರಿಗೆ ಪಕ್ಷ ಯಾವ ಅನ್ಯಾಯ ಮಾಡಿದೆ.? ಯಾತಕ್ಕಾಗಿ ಕಾಂಗ್ರೆಸ್ ಹೋಗ್ತಿದ್ದಾರೆ. ಶೆಟ್ಟರ್ ಅವರನ್ನ ರಾಜಕೀಯ ನಿವೃತಿ ತಗೋಳಿ ಅಂತ ಎಂದೂ ಹೇಳಿಲ್ಲ. ರಾಜ್ಯಸಭೆಗೆ ಕಳಿಸುವ ಬಗ್ಗೆ ಚರ್ಚೆಯಾಗಿತ್ತು. ರಾಜೀನಾಮೆ ಕೊಟ್ಟು ಹೋಗಿರೋರು ಪುನಃ ಪಕ್ಷಕ್ಕೆ ಬರುವ ವಿಚಾರ. ಅವರಿಗೆ ಅವರ ತಪ್ಪಿನ ಅರಿವಾಗಿದ್ರೆ. ಅವರು ಪಕ್ಷಕ್ಕೆ ವಾಪಸ್ ಮರೊಳೋದಾದ್ರೆ ಅವರಿಗೆ ಸ್ವಾಗತ ಕೋರ್ತೀನಿ ಎಂದರು.


ಇದನ್ನೂ ಓದಿ: ಜಗದೀಶ್ ಶೆಟ್ಟರ್ ರಾಜೀನಾಮೆ ನೋವು ತಂದಿದೆ: ಸಿಎಂ ಬಸವರಾಜ ಬೊಮ್ಮಾಯಿ


ನನಗೆ 80 ವರ್ಷ ಆಗಿದೆ. ನಾನಿನ್ನೂ ಗಟ್ಟಿ ಇದ್ದೇನೆ. ರಾಜ್ಯಾದ್ಯಂತ ಓಡಾಡಿ ಇವರ ಬಣ್ಣ ಬಯಲು ಮಾಡ್ತೀನಿ. ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬರ್ತೀವಿ. ಬಿಜೆಪಿ ಅಧಿಕಾರಕೆ ಬರುವುದನ್ನ ತಡೆಯಲು ಸಾಧ್ಯವಿಲ್ಲ. ಇದು ಸೂರ್ಯ ಚಂದ್ರ ಅಷ್ಟೇ ಸತ್ಯ ಎಂದು ಬಿಎಸ್‌ ಯಡಿಯೂರಪ್ಪ ಸವಾಲ್‌ ಹಾಕಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.