ಬೆಂಗಳೂರು: ಬಿಜೆಪಿ ಪಕ್ಷವು ಆರಂಭದಿಂದಲೂ ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಅನುಕೂಲಕರವಾಗಲಿದೆ ಎನ್ನುವ ಅಭಿಪ್ರಾಯವನ್ನು ಹೇಳುತ್ತಲೇ ಬಂದಿದೆ. ಇದೆ ಮಾತಿನಂತೆ ಅದು ಈ ಬಾರಿಯ ಚುನಾವಣಾ ಪ್ರಚಾರದಲ್ಲಿಯೂ ಡಬಲ್ ಇಂಜಿನ್ ಸರ್ಕಾರದಿಂದ ಪ್ರಗತಿ ತ್ವರಿತಗತಿಯಲ್ಲಿ ಸಾಗಲಿದೆ ಎನ್ನುವುದು ಅದರ ಸ್ಪಷ್ಟವಾದಂತಹ ವಾದವಾಗಿದೆ.ಡಬಲ್ ಇಂಜಿನ್ ಸರ್ಕಾರದ ಜೊತೆಗೆ ಮೋದಿ ಪ್ರಭಾವ ಹಾಗೂ ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆ ಕುರಿತಾಗಿ ಜನರ ಅಭಿಪ್ರಾಯವನ್ನು ಜೀ ಕನ್ನಡ ನ್ಯೂಸ್ ಸಮೀಕ್ಷೆಯಲ್ಲಿ ಸಂಗ್ರಹಿಸಿದೆ.


COMMERCIAL BREAK
SCROLL TO CONTINUE READING

ಡಬಲ್ ಇಂಜಿನ್ ಸರ್ಕಾರ:


ಈ ಹಿನ್ನೆಲೆಯಲ್ಲಿ ಸಮೀಕ್ಷೆ ವೇಳೆ ಜನರಿಗೆ  ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಎಷ್ಟು ಅನುಕೂಲಕರವಾಗಲಿದೆ ಎನ್ನುವ ಪ್ರಶ್ನೆಯನ್ನು ಇಟ್ಟಾಗ ಇದಕ್ಕೆ ಶೇ 34 ರಷ್ಟು ಜನರು ತುಂಬಾ ಲಾಭವಾಗಲಿದೆ ಎಂದು ಹೇಳಿದರೆ, ಶೇ 45 ರಷ್ಟು ಜನರು ಸ್ವಲ್ಪ ಲಾಭವಾಗಲಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು, ಇನ್ನೂ ಶೇ 21 ರಷ್ಟು ಜನರು ಮಾತ್ರ ಯಾವುದೇ ಲಾಭವೇ ಆಗಿಲ್ಲ ಎಂದು ಹೇಳಿದರು.ಮೋದಿ ಅಲೆಯ ಮೇಲೆ ಚುನಾವಣೆಯನ್ನು ಎದುರಿಸುವುದು ಮತ್ತು ಅದನ್ನು ಒಂದು ರೀತಿ ಟ್ರಂಪ್ ಕಾರ್ಡ್ ಎನ್ನುವಂತೆ ಬಳಸಿಕೊಳ್ಳುವುದನ್ನು ನಾವು ನೋಡಿರುತ್ತೇವೆ.ಇದೆ ವಿಚಾರವಾಗಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಮತ್ತೊಮ್ಮೆ ಗೇಮ್ ಚೇಂಜರ್ ಆಗ್ತಾರಾ ಎನ್ನುವ ವಿಚಾರವನ್ನು ಜನರ ಮುಂದೆ ಇಟ್ಟಾಗ ಇದಕ್ಕೆ ಶೇ 44 ಜನರು ಖಂಡಿತಾ ಆಗುತ್ತಾರೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ಇನ್ನೂ ಶೇ 34 ರಷ್ಟು ಜನರು ಸ್ವಲ್ಪ ಮಟ್ಟಿಗೆ ಆಗಬಹುದು ಎಂದು ಹೇಳಿದ್ದಾರೆ, ಶೇ 22 ರಷ್ಟು ಜನರು ಯಾವುದೇ ವ್ಯತ್ಯಾಸವಾಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.