ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ನಿಮ್ಮೆಲ್ಲರಿಗೂ ಮೇ 13ಕ್ಕೆ ತಿಳಿಯಲಿದೆ.ಆದರೆ ಅದಕ್ಕೂ ಮುನ್ನ ಜೀ ಕನ್ನಡ ನ್ಯೂಸ್ ಅತ್ಯಂತ ನಿಖರವಾದ ಅಭಿಪ್ರಾಯ ಸಂಗ್ರಹಿಸಿ ಸಾರ್ವಜನಿಕರ ನಾಡಿಮಿಡಿತ ಹಿಡಿಯುವ ಪ್ರಯತ್ನ ಮಾಡಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ ಚುನಾವಣಾ ರಾಜಕೀಯ ಚಿತ್ರಣವನ್ನು ನೋಡುತ್ತಾ ಹೊರಟಾಗ ಸದ್ಯ ದಕ್ಷಿಣ ಭಾರತದಲ್ಲಿ ಬಿಜೆಪಿಯ ಏಕೈಕ ಭದ್ರಕೋಟೆಯಾಗಿರುವ ಕರ್ನಾಟಕದಲ್ಲಿ ಮತ್ತೊಮ್ಮೆ ಮರು ಅಧಿಕಾರಕ್ಕೆ ಹಿಡಿಯುವ ಪ್ರಯತ್ನದಲ್ಲಿದ್ದರೆ, ಇನ್ನೊಂದೆಡೆಗೆ ರಾಜ್ಯದಲ್ಲಿಕಾಂಗ್ರೆಸ್ ಪಕ್ಷವು ರಾಜ್ಯ ಸರ್ಕಾರದ ಲೋಪದೋಷಗಳನ್ನು ಜನರಿಗೆ ತೋರಿಸುವ ಮೂಲಕ ಈ ಬಾರಿ ಅಧಿಕಾರ ಹಿಡಿಯುವ ಉತ್ಸಾಹದಲ್ಲಿದೆ, ಅದೇ ರೀತಿಯಾಗಿ ಜೆಡಿಎಸ್ ಪಕ್ಷವು ಮತ್ತೊಮ್ಮೆ ಕಿಂಗ್ ಮೇಕರ್ ಪಾತ್ರವನ್ನುನಿರ್ವಹಿಸುವ ಉತ್ಸುಕತೆಯನ್ನು ಹೊಂದಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಈ ಬಾರಿಯ ರಾಜಕೀಯ ಲೆಕ್ಕಾಚಾರಗಳು ಹೇಗಿರಲಿವೆ ಎನ್ನುವುದನ್ನು ಜನರ ಅಭಿಪ್ರಾಯವನ್ನು ಸಂಗ್ರಹಿಸುವ ಮೂಲಕ ಜೀ ಕನ್ನಡ ನ್ಯೂಸ್ ತನ್ನ ಸಮೀಕ್ಷೆಯ ಮೂಲಕ ಕಂಡುಕೊಂಡಿದೆ.


 224 ವಿಧಾನಸಭಾ ಸ್ಥಾನಗಳಿರುವ ರಾಜ್ಯದಲ್ಲಿ ಪ್ರಮುಖವಾಗಿ ಜನರ ನಾಡಿ ಮಿಡಿತವನ್ನು ಪ್ರದೇಶವಾರು ವಿಂಗಡಿಸುವ ಮೂಲಕ ಜಾತಿ, ವಿವಿಧ ಪ್ರದೇಶಗಳಲ್ಲಿರುವ ಸೋಶಿಯಲ್ ಇಂಜಿನಿಯರಿಂಗ್ ನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಈ ಸಮೀಕ್ಷೆ ಮಾಡಿದೆ. ಪ್ರದೇಶವಾರು ಸೀಟು ಹಂಚಿಕೆಗಳನ್ನು ನೋಡುವುದಾರೆ ಕಲ್ಯಾಣ ಕರ್ನಾಟಕದಲ್ಲಿ 40 ವಿಧಾನಸಭಾ ಸ್ಥಾನಗಳಿದ್ದರೆ, ಕಿತ್ತೂರು ಕರ್ನಾಟಕದಲ್ಲಿ 44 ಸ್ಥಾನಗಳಿವೆ. ಹಳೆ ಮೈಸೂರು 66 ಸ್ಥಾನಗಳನ್ನು ಹೊಂದಿದ್ದರೆ, ಕರಾವಳಿ ಪ್ರದೇಶದಲ್ಲಿ 18 ಸ್ಥಾನಗಳಿವೆ.ಇನ್ನೂ ಬೆಂಗಳೂರು ಪ್ರದೇಶದಲ್ಲಿ 28 ಮತ್ತು ಮಧ್ಯ ಕರ್ನಾಟಕದಲ್ಲಿ 27 ಸ್ಥಾನಗಳಿವೆ.


ಜೀ ಕನ್ನಡ ನ್ಯೂಸ್ ನ ಈ ಸಮೀಕ್ಷೆಯಲ್ಲಿ ಪ್ರಮುಖವಾಗಿ ಸಿಎಂ ಬೊಮ್ಮಾಯಿ ಅವರ ಕೆಲಸಗಳಿಂದ ಜನ ಎಷ್ಟು ತೃಪ್ತರಾಗಿದ್ದಾರೆ ಎನ್ನುವ ಪ್ರಶ್ನೆಯನ್ನು ಇಟ್ಟಾಗ ಇದರಲ್ಲಿ ಶೇ 30 ರಷ್ಟು ಜನರು ಸಂಪೂರ್ಣ ತೃಪ್ತಿಯನ್ನು ಹೊಂದಿದ್ದರೆ, ಶೇ 41 ರಷ್ಟು ಜನರು ಅಲ್ಪ ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ,ಶೇ 29 ರಷ್ಟು ಜನರು ತಮಗೆ ಯಾವುದೇ ತೃಪ್ತಿ ತಂದಿಲ್ಲ ಎನ್ನುವ ಅಭಿಪ್ರಾಯವನ್ನು ಸಮೀಕ್ಷೆಯಲ್ಲಿ ವ್ಯಕ್ತಪಡಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.