ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದರು. ದಾಖಲೆಯ 14ನೇ ಬಾರಿ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯನವರು, ಗ್ಯಾರಂಟಿ ಯೋಜನೆಗಳ ಜೊತೆಗೆ ಹತ್ತು-ಹಲವಾರು ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪಕ್ಷ ಕೊಟ್ಟ ಭರವಸೆಗಳನ್ನು ಸರ್ಕಾರ ಈಡೇರಿಸಿದೆ-ಎದೆ ಎತ್ತಿ ಉತ್ತರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ


ರಾಜ್ಯ ಕಾಂಗ್ರೆಸ್ ಸರ್ಕಾರದ 2023-24ರ ಗ್ಯಾರಂಟಿ ಬಜೆಟ್


• ಸಿಎಂ ಸಿದ್ದರಾಮಯ್ಯನವರು ಶುಕ್ರವಾರ (ಜುಲೈ 7) ಮಂಡಿಸಿದ ಬಜೆಟ್‍ನ ಒಟ್ಟು ಗಾತ್ರ 3 ಲಕ್ಷದ 27 ಸಾವಿರ ಕೋಟಿ


• ಸಾಲ (Public Debt) 85,818 ಸಾವಿರ ಕೋಟಿ


• ಸಾಲ ಮತ್ತು ಮುಂಗಡಗಳು (Loans and Advances) 227.50 ಕೋಟಿ


• ರಾಜಸ್ವ ವೆಚ್ಚ (Revenue  Expenditure) 2,50,932.50 ಕೋಟಿ


• ರಾಜಸ್ವ ಕೊರತೆ (Revenue Deficit) 12,522.69 ಕೋಟಿ


• ವಿತ್ತೀಯ ಕೊರತೆ (Fiscal Deficit) 66,646.22 ಕೋಟಿ


• ರಾಜ್ಯ ತೆರಿಗೆ ( State Tax Revenue) 1,75,652.60 ಕೋಟಿ


• ತೆರಿಗೆ ರಹಿತ ರಾಜಸ್ವ (Non- Tax Revenue) 12,500 ಕೋಟಿ


• ಕೇಂದ್ರ ತೆರಿಗೆ ಪಾಲು (Centeral Taxes) 37,252.21 ಕೋಟಿ


• ಸಹಾಯಾನುದಾನ (Grants in Aid) 13,005 ಕೋಟಿ


• ಬಡ್ಡಿ ಸಂದಾಯ (Interest Payment) 34,027.08 ಕೋಟಿ


• ವಾಣಿಜ್ಯ ತೆರಿಗೆ (Commercial Tax)- 15771.97 ಕೋಟಿ (31-03-2022)


• ಅಬಕಾರಿ (Excise)- 613.83 ಕೋಟಿ


• ಮೋಟಾರು ವಾಹನ  (Motor Vehicles Tax) - 122.70 ಕೋಟಿ


• ಮುದ್ರಾಂಕ ಮತ್ತು ನೋಂದಣಿ Stamps & Registration - 170.49 ಕೋಟಿ


• ಒಟ್ಟು -  16678.99 ಕೋಟಿ


• ಹಿಂದಿನ ಸರ್ಕಾರ ಕಾಮಗಾರಿ ಬಾಕಿ ಮೊತ್ತ - 2,55, 136 ಕೋಟಿ


• ರಾಜ್ಯಕ್ಕೆ ಬರುತ್ತಿರುವ ತೆರಿಗೆ ಹಣ ಕೇವಲ - 10,858  ಕೋಟಿ


• ಕಳೆದ 3 ವರ್ಷಗಳಲ್ಲಿ 26,146 ಕೋಟಿ ತೆರಿಗೆ ನಷ್ಟ


• ತೆರಿಗೆ ಮೇಲಿನ ಸೆಸ್ ಮತ್ತು ಸರ್‍ಚಾರ್ಜ್  ಹೆಚ್ಚಳದಿಂದ 7,780 ಕೋಟಿ ನಷ್ಟ


• ಕಾಮಗಾರಿಗಳಲ್ಲಿ ಕೇಂದ್ರ ಪಾಲು ಕಡಿಮೆ ಮಾಡಲಾಗಿದ್ದು, ರಾಜ್ಯಗಳ ಮೇಲೆ ಹೊರೆ ಹೆಚ್ಚಾಗುತ್ತಿದೆ.


• ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತೆಗಳಿಗೆ 443 ಕೋಟಿ, 8,636 ಕೋಟಿ ಮಾತ್ರ.


• ಬದ್ಧ ವೆಚ್ಚ ಕಳೆದ 5 ವರ್ಷಗಳಲ್ಲಿ ಶೇ.80 ರಷ್ಟು ಹೆಚ್ಚಳ.


• 5 ಗ್ಯಾರಂಟಿ ಯೋಜನೆ 52 ಸಾವಿರ ಕೋಟಿ


• ಗೃಹಲಕ್ಷ್ಮೀ ಯೋಜನೆಗೆ 30 ಸಾವಿರ ಕೋಟಿ


• ಗೃಹಜ್ಯೋತಿ ಯೋಜನೆಗೆ 13,910 ಕೋಟಿ


• ಬೆಂಗಳೂರಿಗೆ 45 ಸಾವಿರ ಕೋಟಿ, ವೈಟ್ ಟಾಪಿಂಗ್ ಯೋಜನೆಗೆ 800  ಕೋಟಿ, ನಮ್ಮ ಮೆಟ್ರೋಗೆ 45 ಸಾವಿರ ಕೋಟಿ, ಇಂದಿರಾ ಕ್ಯಾಂಟೀನ್‍ಗೆ 100 ಕೋಟಿ


• ಸಮಾಜ ಕಲ್ಯಾಣ ಇಲಾಖೆಗೆ 11,173 ಕೋಟಿ


• ಆಹಾರ ಇಲಾಖೆಗೆ 10,460 ಕೋಟಿ


ರೈತರಿಗೆ ಕೊಡುಗೆ


• ಕೃಷಿ ಭಾಗ್ಯ ಯೋಜನೆಗೆ  ನರೇಗಾ 100 ಕೋಟಿ


• ಹಸು, ಎಮ್ಮೆ ಸತ್ತರೆ 10 ಸಾವಿರ, ಕುರಿ- ಮೇಕೆ ಸತ್ತರೆ 5 ಸಾವಿರ


•  ರೈತ ಉತ್ಪನ್ನಗಳ ಬ್ರಾಡಿಂಗ್ ವ್ಯವಸ್ಥೆಗೆ 10 ಕೋಟಿ


• ರಾಮನಗರ, ಶಿಡ್ಲಘಟ್ಟದಲ್ಲಿ 75 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ


• ನಂದಿನಿಗೆ ಬ್ರಾಂಡ್ ಮೌಲ್ಯ ಹೆಚ್ಚಳಕ್ಕೆ 10 ಕೋಟಿ


• ರೈತ ಉತ್ಪಾದಕಾ ಸಂಸ್ಥೆಗಳಿಗೆ 5 ಕೋಟಿ


• ಕೃಷಿ ಯಂತ್ರದಾರೆ ಯೋಜನೆಗೆ ಹೈಟೆಕ್ ಸ್ಪರ್ಶ, 100 ಹಬ್ ಸ್ಥಾಪಿಸಲು 100 ಕೋಟಿ ವೆಚ್ಚ.


• ತೋಟಗಾರಿಕೆ ಉತ್ಪನ್ನಗಳಿಗೆ  8 ಶೀಥಲಿಕರಣ ಘಟಕಗಳು.


• ರೈತರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಕೃಷಿ ಸಾಲ


ನೀರಾವರಿ


ಸುಮಾರು 899 ಕೆರೆ ತುಂಬಿಸುವ ಯೋಜನೆಗೆ 779 ಕೋಟಿ ವೆಚ್ಚ


ಬಿಯರ್ ಮೇಲೆ ಅಬಕಾರಿ ಸುಂಕ ಶೇ.10ರಷ್ಟು ಹೆಚ್ಚಳ. ಒಟ್ಟು ಅಬಕಾರಿ ಸುಂಕ ಶೇ.20 ರಷ್ಟು ಹೆಚ್ಚಳ.


3 ಲಕ್ಷಕ್ಕೆ ಸಾಲ ಮಿತಿ ಹೆಚ್ಚಳ


ರಿಯಾಯಿತಿ ಡೀಸೆಲ್ ಹೆಚ್ಚಳ


200 ಕೋಟಿ ವೆಚ್ಚದಲ್ಲಿ ಎಲ್ಲಾ ಶಾಲಾ- ಕಾಲೇಜುಗಳಲ್ಲಿ ಶೌಚಾಲಯ ನಿರ್ಮಾಣ.


1 - 10ನೇ ತರಗತಿವರೆಗೆ ಎಲ್ಲಾ ಮಕ್ಕಳಿಗೆ ಮೊಟ್ಟೆ ವಿತರಣೆ


ಇದನ್ನೂ ಓದಿ: Karnataka Budget 2023-24: ಸಿಎಂ ಸಿದ್ದರಾಮಯ್ಯನವರ ದಾಖಲೆಯ 14 ನೇ ಬಜೆಟ್ ಮಂಡನೆ ವೇಳೆ ನೀಡಿದ ಭರವಸೆಗಳೇನು? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.