ಬೆಳಗಾವಿ : ಸವದತ್ತಿ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದೆ (Saundatti yellamma temple). ಯಲ್ಲಮ್ಮನ ಹುಂಡಿಗೆ ಕೋಟಿ ಕೋಟಿ ದೇಣಿಗೆ  ಹರಿದು ಬಂದಿದೆ. ಮಾತ್ರವಲ್ಲ ತಮ್ಮ ಮನದ ಇಚ್ಛೆಯನ್ನು ಈಡೇರಿಸುವಂತೆ ಭಕ್ತರು ತಾಯಿಗೆ ಹರಕೆ ಚೀಟಿಗಳನ್ನು ಕೂಡಾ ಸಲ್ಲಿಸಿದ್ದಾರೆ. 


COMMERCIAL BREAK
SCROLL TO CONTINUE READING

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸವದತ್ತಿ ಯಲ್ಲಮ್ಮನ ದೇವಸ್ಥಾನದಲ್ಲಿ ಫೆಬ್ರವರಿ 1 ರಿಂದ ಮಾರ್ಚ್ 15ರವರೆಗಿನ ಅವಧಿಯಲ್ಲಿ ದಾಖಲೆ ಮೊತ್ತ ಸಂಗ್ರಹವಾಗಿದೆ (Saundatti yellamma temple). ನಾಲ್ಕು ದಿನಗಳವರೆಗೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 1.30ಕೋಟಿ ನಗದು ಸಂಗ್ರಹವಾಗಿದೆ. ಅಲ್ಲದೆ, 12 ಲಕ್ಷ ಮೌಲ್ಯದ ಚಿನ್ನಾಭರಣ,  30 ಲಕ್ಷ ಮೌಲ್ಯದ ‌ಬೆಳ್ಳಿಯ ಆಭರಣ ದೇಣಿಗೆಯಾಗಿ ಬಂದಿದೆ. 


ಇದನ್ನೂ ಓದಿ : Road Accident: ಎರಡು ಲಾರಿಗಳ ನಡುವೆ ಪರಸ್ಪರ ಡಿಕ್ಕಿ, ಸ್ಥಳದಲ್ಲಿಯೇ ದಗದಗನೆ ಹೊತ್ತು ಉರಿದ ಲಾರಿಗಳು


ಇನ್ನು ಯಲ್ಲಮ್ಮನ ಹುಂಡಿಯಲ್ಲಿ  ವಿಚಿತ್ರ ಹರಕೆ ಚೀಟಿಗಳು ಕೂಡಾ ಪತ್ತೆಯಾಗಿದೆ (Yalamma Hundi ). ಗಂಡನಿಗೆ  ಕುಡಿತ ಚಟ ಬಿಡಿಸು,  ಗಂಡನನ್ನು ಕುಡುಕ ಸ್ನೇಹಿತರಿಂದ ದೂರ ಮಾಡು ಎನ್ನುವಂಥಹ ಚೀಟಿಗಳು ಹುಂಡಿಯಲ್ಲಿ ಪತ್ತೆಯಾಗಿವೆ.  ಇಷ್ಟು ಮಾತ್ರವಲ್ಲದೆ,  ಮಗಳಿಗೆ ನಮಗಿಂತ 100 ಪಟ್ಟು ಅಧಿಕ ಆಸ್ತಿಯಿರುವ ಯುವಕನೊಂದಿಗೆ ಕಲ್ಯಾಣ ಪ್ರಾಪ್ತಿಗೊಳಿಸು ಎಂಬ ಮನವಿ ಪತ್ರಗಳು ಕೂಡಾ ಹುಂಡಿಯಲ್ಲಿತ್ತು. 


ಪಿಎಸ್‍ಐ (PSI) ಹುದ್ದೆ ಕರುಣಿಸುವಂತೆ, ಕೊಟ್ಟ ಸಾಲವನ್ನು ಮರಳಿ ಪಡೆಯುವಂತೆ ಸಹಾಯ ಮಾಡು ಹೀಗೆ ಚಿತ್ರ ವಿಚಿತ್ರ ಬೇಡಿಕೆಗಳು ಯಲ್ಲಮ್ಮ ದೇವಿಯ ಹುಂಡಿಯಲ್ಲಿ ಪತ್ತೆಯಾಗಿವೆ. 


ಇದನ್ನೂ ಓದಿ : ವಿಧಾನಸೌಧದ 3 ನೇ ಮಹಡಿಯಲ್ಲಿ ಮಂತ್ರಿಯೊಬ್ಬರು ಏನು ಮಾಡುತ್ತಿದ್ದರು ಎಂಬುದು ನಿಮಗೆ ಗೊತ್ತಿಲ್ಲವೇ ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.