ಬೆಂಗಳೂರು: ಬೆಂಗಳೂರಿನ ಹತ್ತಿರ ಹೊಸಕೋಟೆಯ ಪ್ರಸಿದ್ಧ ಆನಂದ್ ದಮ್ ಬಿರಿಯಾನಿ ಭಾನುವಾರ ಬಿರಿಯಾನಿ ಪ್ರಿಯರ ದೀರ್ಘ ಸರತಿ ಸಾಲಿನಲ್ಲಿ ಸಾಕ್ಷಿಯಾಯಿತು.ಭಾನುವಾರ ರೆಸ್ಟೋರೆಂಟ್ ಹೊರಗೆ ಸುಮಾರು 1.5 ಕಿಲೋಮೀಟರ್ ವರೆಗೆ ಸರತಿಯಲ್ಲಿ ನಿಂತಿರುವ ನೂರಾರು ಗ್ರಾಹಕರನ್ನು ಒಳಗೊಂಡ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



COMMERCIAL BREAK
SCROLL TO CONTINUE READING

ಈ ವೀಡಿಯೊದಲ್ಲಿ, ಜನರು ಸರತಿ ಸಾಲಿನಲ್ಲಿ ನಿಂತ ಜನರು ಮುಖವಾಡಗಳನ್ನು ಧರಿಸಿರುವುದನ್ನು ಕಾಣಬಹುದು, ಆದಾಗ್ಯೂ, ಅವರ ನಡುವೆ ಯಾವುದೇ ಸಾಮಾಜಿಕ ಅಂತರವಿರದಿರುವುದನ್ನು ನಾವು ಕಾಣಬಹುದು.ಪೂರ್ವ-ಲಾಕ್‌ಡೌನ್ ಮಾರಾಟಕ್ಕೆ ಹೋಲಿಸಿದರೆ ಉಪಾಹಾರ ಗೃಹದ ಮಾಲೀಕ ಆನಂದ್, ಬಿರಿಯಾನಿ ಮಾರಾಟದಲ್ಲಿ ಶೇಕಡಾ 20 ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ


ಈ ರೆಸ್ಟೋರೆಂಟ್ ಬೆಂಗಳೂರು ನಗರ ಕೇಂದ್ರದಿಂದ 25 ಕಿಲೋಮೀಟರ್ ದೂರದಲ್ಲಿದೆ.ಬಿರಿಯಾನಿ ಬೇಗನೆ ಖಾಲಿಯಾದಿತು ಎಂದು ಬೇಗನೆ ಇಲ್ಲಿಗೆ ಅಗಮಿಸಿರುತ್ತಾರೆ. 6,300 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ ವೀಡಿಯೊ ತ್ವರಿತವಾಗಿ ವೈರಲ್ ಆಗಿದೆ. ಅನೇಕ ನೆಟಿಜನ್‌ಗಳು ಬಿರಿಯಾನಿಗಾಗಿ ಇಷ್ಟು ಉದ್ದದ ಸರತಿಯಲ್ಲಿ ನಿಂತಿರುವ ಜನರಿಗೆ ಅಚ್ಚರಿಯನ್ನುಂಟು ಮಾಡಿದರೆ.ಕೆಲವರೂ ಇಲ್ಲಿ ಯಾವುದೇ ಸಾಮಾಜಿಕ ಅಂತರ ಇರದಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.