ಧಾರವಾಡ : ಬೆಳಗಾವಿ ಜಿಲ್ಲಾ ರಾಯಬಾಗ ತಾಲ್ಲೂಕಿನ ಯಳಪರಟ್ಟಿ ಗ್ರಾಮದ ಶಿವಪುತ್ರ ಕುಮಟಿ ಎಂಬುವವರು ದಿ:09/07/2018 ರಂದು ಹುಬ್ಬಳ್ಳಿಯ ಪಿಂಟೋ ರಸ್ತೆಯಲ್ಲಿನ ಪಿಂಟೋ ವೈನ್‍ಲ್ಯಾಂಡನಿಂದ ರೂ.650/- ಹಣ ಕೊಟ್ಟು ಇಂಪೇರಿಯಲ್ ಬ್ಲ್ಯೂ ವಿಸ್ಕಿ ಬಾಟಲ್ ಖರೀದಿಸಿದ್ದರು. ಆ ವಿಸ್ಕಿ ಬಾಟಲ್‍ನ್ನು ತೆಗೆಯುವ ಪೂರ್ವದಲ್ಲಿ ಗಮನಿಸಿದಾಗ ಆ ಬಾಟಲ್‍ನಲ್ಲಿ ಗಾಜಿನ ಚೂರುಗಳು ಕಾಣಿಸಿಕೊಂಡಿದ್ದವು. ಕಾರಣ ದೂರುದಾರ ಸದರಿ ಬಾಟಲ್‍ನ್ನು ಹಿಂಪಡೆದು ನೂತನ ವಿಸ್ಕಿ ಬಾಟಲ್ ನೀಡುವಂತೆ ಎದುರುದಾರರಲ್ಲಿ ವಿನಂತಿಸಿದ್ದರು.


COMMERCIAL BREAK
SCROLL TO CONTINUE READING

ಆದರೆ ಅದಕ್ಕೆ ಒಪ್ಪದ ಎದುರುದಾರ ಪಿಂಟೋ ವೈನ್ ಲ್ಯಾಂಡ್ ನವರು ಬಾಟಲ್‍ನಲ್ಲಿ ಗಾಜಿನ ಚೂರು ಇರುವುದು ನನ್ನ ತಪ್ಪಿನಿಂದಲ್ಲಾ ಅದು ಉತ್ಪಾದಕರ ತಪ್ಪು ಎನ್ನುವ ಕಾರಣ ನೀಡಿ ಬಾಟಲ್ ಹಿಂಪಡೆಯಲು ನಿರಾಕರಿಸಿದ್ದರು. ಒಂದು ವೇಳೆ ಬಾಟಲ್‍ನಲ್ಲಿ ಗಾಜಿನಚೂರು ಇರುವುದನ್ನು ಗಮನಿಸದೇ ಹಾಗೆಯೇ ಅದರಲ್ಲಿನ ಮಧ್ಯ ಸೇವಿಸಿದ್ದರೇ ಜೀವಕ್ಕೆ ಅಪಾಯ ಆಗುವ ಸಂಭವವಿತ್ತು. ಎದುರುದಾರರ ಈ ನಡಾವಳಿಕೆ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಹಾಗೂ ಅನ್ಯಾಯದ ವ್ಯಾಪಾರಾಭ್ಯಾಸ ಆಗುತ್ತದೆ ಅಂತಾ ಹೇಳಿ ಅದರ ಮಾರಾಟಗಾರರು ಮತ್ತು ಉತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಫಿರ್ಯಾದಿದಾರ ಧಾರವಾಡ ಜಿಲ್ಲಾಗ್ರಾಹಕರ ಆಯೋಗಕ್ಕೆ ಈ ದೂರು ಸಲ್ಲಿಸಿದ್ದರು.


ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಸಿದ್ಧತೆ- ಮಾಜಿ ಪಶುಸಂಗೋಪನಾ ಸಚಿವ


ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ, ಪ್ರಭು .ಸಿ ಹಿರೇಮಠ ಅವರು ಸದರಿ ಪ್ರಕರಣದಲ್ಲಿ ನೋಟಿಸ್ ಜಾರಿಯಾದರೂ ಪಿಂಟೋ ವೈನ್ ಲ್ಯಾಂಡ್‍ರವರು ಗೈರು ಹಾಜರಾಗಿದ್ದರು. 2 ಮತ್ತು 3ನೇ ಎದುರುದಾರರು ಸದರಿ ವಿಸ್ಕಿ ಬಾಟಲ್ ಉತ್ಪಾದಕರು ಮೂವರ ತಪ್ಪಿನಿಂದ ತನಗೆ ತೊಂದರೆಯಾಗಿದೆ


ಅನ್ನುವುದು ದೂರುದಾರನ ಕೋರಿಕೆಯಾಗಿತ್ತು. ತಾವು ಪ್ರತಿಷ್ಠಿತ ಪಾನೀಯಗಳ ಉತ್ಪಾದಕರಿದ್ದು ಅವುಗಳ ಸ್ವಚ್ಛತೆಗೆ ಬೇಕಾದ ಎಲ್ಲ ನಿಯಮಗಳನ್ನು ಪಾಲಿಸಿ ಮಾರುಕಟ್ಟೆಗೆ ಸರಬರಾಜು ಮಾಡುವುದಾಗಿ 2 ಮತ್ತು 3ನೇ ಎದುರುದಾರರು ಆಕ್ಷೇಪಿಸಿದ್ದರು. ತಮ್ಮ ಕಂಪನಿಯ ಹೆಸರನ್ನು ದುರುಪಯೋಗಪಡಿಸಿಕೊಂಡು ನಕಲಿ ಉತ್ಪಾದಕರು ಅಂತಹ ಆಕ್ಷೇಪಾರ್ಹ ಪಾನೀಯಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಾರೆ. ಅವರು ಮಾಡಿದ ತಪ್ಪಿಗೆ ತಾವು ಹೊಣೆಗಾರರಾಗುವುದಿಲ್ಲ ಅಂತಾ ಎದುರುದಾರ/ಉತ್ಪಾದಕರು ಆಕ್ಷೇಪಿಸಿದ್ದರು. ತಾನು ಖರೀದಿಸಿದ ವಿಸ್ಕಿ ಬಾಟಲಿ 2 ಮತ್ತು 3ನೇ ಎದುರುದಾರರು ಉತ್ಪಾದಿಸಿದ ಪಾನೀಯ ಅಂತಾ ರುಜುವಾತು ಪಡಿಸುವಲ್ಲಿ ದೂರುದಾರ ವಿಫಲರಾಗಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಲಾಗಿದೆ.


ಇದನ್ನೂ ಓದಿ: Karnataka Bandh: ವಿದ್ಯುತ್ ದರ ಹೆಚ್ಚಳಕ್ಕೆ‌ ಖಂಡನೆ.. ಹುಬ್ಬಳ್ಳಿಯಲ್ಲಿ ಬಂದ್ ಯಶಸ್ಸಿ..!


ಹಣ ಪಡೆದು ಆ ರೀತಿ ದೋಷಯುಕ್ತ ನಕಲಿ ವಿಸ್ಕಿ ಮಾರಾಟ ಮಾಡಿದ ಸಂಗತಿಯನ್ನು 1ನೇ ಎದುರುದಾರ ಅಲ್ಲಗಳೆದಿಲ್ಲವಾದ್ದರಿಂದ ದೂರುದಾರರಿಗೆ ಅವರು ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಹಾಗೂ ಮೋಸದ ವ್ಯಾಪಾರಾಭ್ಯಾಸ ಎಸಗಿದ್ದಾರೆಂದು ತೀರ್ಪಿನಲ್ಲಿ ಅಭಿಪ್ರಾಯ ಪಡಲಾಗಿದೆ. ಅಂತಹ ದೋಷಯುಕ್ತ ಪಾನೀಯಗಳನ್ನು ಸೇವಿಸಿದ್ದಲ್ಲಿ ದೂರುದಾರರ ಆರೋಗ್ಯದ ಮೇಲೆ ಆಗಬಹುದಾದ ಕೆಟ್ಟ ಪರಿಣಾಮಗಳನ್ನು ಮತ್ತು ದೋಷಯುಕ್ತ ಪಾನೀಯ ಮಾರಾಟ ಮಾಡುವ 1ನೇ ಎದುರುದಾರರ ನೀತಿಯನ್ನು ಖಂಡಿಸಿ ದೂರುದಾರರಿಗೆ ಈ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ರೂ.1 ಲಕ್ಷ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/-ಗಳನ್ನು ನೀಡುವಂತೆ 1ನೇ ಎದುರುದಾರ ಪಿಂಟೋ ವೈನ್ ಲ್ಯಾಂಡ್ ಮಾಲೀಕರಿಗೆ ನಿರ್ದೇಶಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.