ಬೆಂಗಳೂರು : 10 ವರ್ಷದ ಬಾಲಕನಿಗೆ ಪೋಲೀಸ್ ಆಗುವ ಕನಸು. ಆದರೆ ಈ ಬಾಲಕನ್ನು ಕ್ಯಾನ್ಸರ್ ಕಾಡುತ್ತಿದೆ. ಆದರೂ ಕೂಡಾ 10 ವರ್ಷದಲ್ಲಿಯೇ ಈ ಬಾಲಕ ಮಲ್ಲಿಕಾರ್ಜುನ್ ಪೋಲೀಸ್ ಅಧಿಕಾರಿಯಾಗಿದ್ದಾನೆ. ಹೌದು, ಕ್ಯಾನ್ಸರ್ ನಿಂದ ಬಳಲುತ್ತಿರುವ 10 ವರ್ಷದ ಬಾಲಕನ ಪೊಲೀಸ್ ಆಗುವ ಕನಸನ್ನ  ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ಈಡೇರಿಸಿ ಮಾನವೀಯತೆ ಮೆರೆದಿದ್ದಾರೆ. 


COMMERCIAL BREAK
SCROLL TO CONTINUE READING

ಮಲ್ಲಿಕಾರ್ಜುನ್ ಮೂಲತ: ದಾವಣಗೆರೆ ಜಿಲ್ಲೆಯ ಜಗಳೂರು ಮೂಲದ ಬಾಲಕ. 10 ವರ್ಷದ ಬಾಲಕ ಮಲ್ಲಿಕಾರ್ಜುನ್ ಐಪಿಎಸ್ ಆಗುವ ಕನಸು ಹೊಂದಿದ್ದ.ಆದರೆ 10 ವಯಸ್ಸಿನಲ್ಲೇ ಈ ಬಾಲಕನಿಗೆ ಕ್ಯಾನ್ಸರ್ ಕಾಡತೊಡಗಿದೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಕಾರಣ ಈತನನ್ನು ಚಿಕಿತ್ಸೆಗಾಗಿ ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಲಾಗಿದೆ. 


ಇದನ್ನೂ ಓದಿ : ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣ: ಪ್ರಹ್ಲಾದ ಜೋಶಿ


ಇದೀಗ ಮಲ್ಲಿಕಾರ್ಜುನನ ಪೋಲೀಸ್ ಆಗಬೇಕೆನ್ನುವ ಆಸೆಯನ್ನು ಈಡೇರಿಸಲಾಗಿದೆ. ಸದ್ಯ ಒಂದು ದಿನದ ಮಟ್ಟಿಗೆ ಪೊಲೀಸ್ ಅಧಿಕಾರಿ ಮಾಡಿ ಬಾಲಕನ ಐಪಿಎಸ್ ಕನಸನ್ನ ನನಸು ಮಾಡಲಾಗಿದೆ. ಬೆಂಗಳೂರು ಪೊಲೀಸ್ ಪರಿಹಾರ ಸಂಸ್ಥೆ ಹಾಗೂ ಕಿದ್ವಾಯಿ ಸಹಯೋಗದಿಂದ ಬಾಲಕನ ಕನಸು ಸಾಕಾರ ಗೊಂಡಿದೆ. 


ಇಂದು‌ ನಗರದ ಉತ್ತರ ವಿಭಾಗದ ಡಿಪಿಪಿಯಾಗಿ ಮಲ್ಲಿಕಾರ್ಜುನನಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಡಿಸಿಪಿ ಸೈದುಲು ಅಡಾವತ್ ಬಾಲಕನಿಗೆ ಪೊಲೀಸ್ ಗೌರವ ಸೂಚಕವಾದ ಬ್ಯಾಟನ್ ನೀಡಿ ಗೌರವಿಸಿದರು.


ಇದನ್ನೂ ಓದಿ : ಜನರು ಬರದಿಂದ ಕಂಗೆಟ್ಟಿದ್ದರೆ ಸರಕಾರ ಗ್ಯಾರಂಟಿ ಸಮಾವೇಶಗಳನ್ನು ನಡೆಸುತ್ತಿದೆ: ಹೆಚ್.ಡಿ.ಕುಮಾರಸ್ವಾಮಿ


 ಈ ಘಟನೆಯಿಂದಾಗಿ ಸದಾ ಕ್ರೈಂ ಕೇಸ್ ಗಳ ಆಗರವಾಗಿರುತ್ತಿದ್ದ ಉತ್ತರ  ಡಿಸಿಪಿ ಕಚೇರಿ ಇಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.