200 ಕನ್ಯೆಗಳಿಗಾಗಿ 10 ಸಾವಿರ ಹುಡುಗರ ಅರ್ಜಿ : ಭಾವಿ ಸೊಸೆಗೆ ಪೋಷಕರ ಪರದಾಟ..!
ಇಂದಿನ ಜಮಾನದಲ್ಲಿ ಯಾರನ್ನಾದ್ರೂ ಮಾತನಾಡಿಸಿ ಹೇಗಿದ್ದೀರಾ.. ಅಂತ ಕೇಳಿದ ನಂತರ ಮಂದಿನ ಮಾತೇ.. ನನ್ನ ಮಗನಿಗೆ ಕನ್ಯೆ ಸಿಗ್ತಿಲ್ಲ ನಿಮಲ್ಲಿ ಯಾವುದಾದ್ರೂ ಹುಡುಗಿ ಇದ್ರೆ ಹೇಳಿ ಎನ್ನತ್ತಾರೆ. ಹೌದು ಮಗನಿಗೆ ಮದುವೆ ಮಾಡಲು ಪೋಷಕರು ಸಪ್ತಸಾಗರ ದಾಟಿ ಹುಡುಗಿ ಹುಡುಕಬೇಕಾದ ಪರಿಸ್ಥಿತಿ ಬಂದೊದಗಿದೆ. ಇನ್ನು 200 ಒಕ್ಕಲಿಗ ಹುಡುಗಿಯರಿಗೆ 10 ಸಾವಿರ ವರ ಮುಗಿಬಿದ್ದ ಅಚ್ಚರಿ ಘಟನೆ ಚುಂಚನಗಿರಿಯಲ್ಲಿ ನಡೆದ ವಧು ವರ ಸಮಾವೇಶದಲ್ಲಿ ನಡೆದಿದೆ.
ಮಂಡ್ಯ : ಇಂದಿನ ಜಮಾನದಲ್ಲಿ ಯಾರನ್ನಾದ್ರೂ ಮಾತನಾಡಿಸಿ ಹೇಗಿದ್ದೀರಾ.. ಅಂತ ಕೇಳಿದ ನಂತರ ಮಂದಿನ ಮಾತೇ.. ನನ್ನ ಮಗನಿಗೆ ಕನ್ಯೆ ಸಿಗ್ತಿಲ್ಲ ನಿಮಲ್ಲಿ ಯಾವುದಾದ್ರೂ ಹುಡುಗಿ ಇದ್ರೆ ಹೇಳಿ ಎನ್ನತ್ತಾರೆ. ಹೌದು ಮಗನಿಗೆ ಮದುವೆ ಮಾಡಲು ಪೋಷಕರು ಸಪ್ತಸಾಗರ ದಾಟಿ ಹುಡುಗಿ ಹುಡುಕಬೇಕಾದ ಪರಿಸ್ಥಿತಿ ಬಂದೊದಗಿದೆ. ಇನ್ನು 200 ಒಕ್ಕಲಿಗ ಹುಡುಗಿಯರಿಗೆ 10 ಸಾವಿರ ವರ ಮುಗಿಬಿದ್ದ ಅಚ್ಚರಿ ಘಟನೆ ಚುಂಚನಗಿರಿಯಲ್ಲಿ ನಡೆದ ವಧು ವರ ಸಮಾವೇಶದಲ್ಲಿ ನಡೆದಿದೆ.
ಹೌದು.. ನಾಗಮಂಗಲ ತಾಲೂಕಿನ ಚುಂಚನಗಿರಿ ಮಹಾ ಸಂಸ್ಥಾನ ಮಠ, ಸಮಾಜ ಸಂಪರ್ಕ ವೇದಿಕೆ(ರಿ) ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ವಧು-ವರರ ಸಮಾವೇಶವನ್ನು ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಕೇವಲ 200 ಒಕ್ಕಲಿಗ ಯುವತಿಯರು ಪಾಲ್ಗೊಂಡಿದ್ದರು, 10 ಸಾವಿರಕ್ಕೂ ಹೆಚ್ಚು ಯುವಕರು ಬಂದಿದ್ದರು. ವಧುಗಳು ಮತ್ತು ವರರ ಸಂಖ್ಯೆಯಲ್ಲಿದ್ದ ಈ ಅಂತರ ಗಮನಿಸಿದ ಆಯೋಜಕರಲ್ಲಿ ಅಚ್ಚರಿ ಮೂಡಿತ್ತು.
ಇದನ್ನೂ ಓದಿ: ವಿಧಾನಸಭೆ ಚುನಾವಣೆ 2023: ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಕೊರತೆ!; ಕೈ ಪಾಲಯದ ತಂತ್ರ ಏನು?
ಹುಡುಗರ ಅರ್ಜಿ ಸಂಖ್ಯೆ ನೋಡಿ ಸಮಾವೇಶದ ಆಯೋಜಕರು ಸುಸ್ತಾಗಿದ್ದರು. ಕನ್ಯೆಗಾಗಿ ಹುಡುಗರು ಮತ್ತು ಅವರ ಪೋಷಕರು ಸಮಾವೇಶದಲ್ಲಿ ಕ್ಯೂ ನಿಂತಿದ್ದರು. ವಧು ವರರ ಸಮಾವೇಶಕ್ಕೆಂದು ಭಾರೀ ಸಂಖ್ಯೆಯ ಜನಸ್ತೋಮವೇ ಹರಿದು ಬಂದಿತ್ತು. ಹೆಚ್ಚಿನ ಜನಸ್ತೋಮದಿಂದಾಗಿ ಚುಂಚನಗಿರಿಯಲ್ಲಿ ಟ್ರಾಫಿಕ್ ಜಾಮ್, ವಾಹನ ಸವಾರರರೂ ಕೂಡ ಪರದಾಡುವಂತಾಗಿತ್ತು.
ಕರ್ನಾಟಕದಲ್ಲಿ ಒಕ್ಕಲಿಗ ಯುವಕರು ಮದುವೆಗಾಗಿ ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಒಕ್ಕಲಿಗ ಸಮುದಾಯದ ಲಿಂಗಾನುಪಾತ ಮತ್ತು ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಗೆ ಹಿಡಿದ ಕೈಗನ್ನಡಿಯಾಗಿತ್ತು. ವಧು-ವರರ ಸಮಾವೇಶಕ್ಕೆಂದು ಬಂದಿದ್ದ ಬಹುತೇಕ ಪೋಷಕರು ಭಾವಿ ಸೊಸೆ ಸಿಗಬಹುದೆ ಎಂದು ಹಾತೊರೆಯುತ್ತಿದ್ದ ದೃಶ್ಯಗಳು ಸಮಾವೇಶದ ತುಂಬ ಕಂಡು ಬಂತು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.