ಬೆಂಗಳೂರು : ನಿಷೇಧಿತ ಸಂಘಟನೆ ಪಿಎಫ್ಐ ಕಚೇರಿ ಮೇಲೆ ದಾಳಿ ನಡೆಸಿದಾಗ ಅನೇಕ ಸ್ಪೋಟಕ ಮಾಹಿತಿಗಳು ದೊರೆತಿವೆ. ಕಚೇರಿಯಲ್ಲಿ ಬ್ರೌಸರ್‌ಗಳು ಸಿಕ್ಕಿದ್ದು ನೂರನೇ ವರ್ಷದ ಸ್ವಾತಂತ್ರ್ಯೋತ್ಸವ ಪಿಎಫ್ಐ ಟಾರ್ಗೆಟ್ ಎಂಬ ಅಘಾತಕಾರಿ ಸಂಗತಿ ಗೊತ್ತಾಗಿದೆ. 


COMMERCIAL BREAK
SCROLL TO CONTINUE READING

2047 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತು 100 ವರ್ಷವಾಗುತ್ತೆ. ಅಷ್ಟರೊಳಗೆ ಅಂದುಕೊಂಡಿದ್ದನ್ನ ಸಾಧಿಸಬೇಕು ಎಂದು ಪಿಎಫ್‌ಐ ಪ್ಲ್ಯಾನ್‌ ಮಾಡಿಕೊಂಡಿತ್ತಂತೆ. ಪಿಎಎಫ್‌ಐ ಅಂಗಸಂಸ್ಥೆ ಎಂಪವರ್ ಇಂಡಿಯಾ ಕಚೇರಿಯಲ್ಲಿ ಇದಕ್ಕೆ ಇಂಬು ನೀಡುವಂತಹ ಸಾಕ್ಷಿಗಳು ಲಭಿಸಿವೆ. 2047ಕ್ಕೆ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಸಮಾನವಾದ ಹಕ್ಕು ಬರಬೇಕು ಹಾಗೂ ಮುಸ್ಲಿಂಮರಿಗೆ ತೊಂದರೆ ಕೊಡುವವರ ವಿರುದ್ಧ ಹೋರಾಡಬೇಕು ಎಂಬುದು ಮೂಲ ಗುರಿಯಾಗಿತ್ತಂತೆ.


ಇದನ್ನೂ ಓದಿ: ನಾಗರ ಹಾವಿಗೆ ಮುತ್ತಿಕ್ಕಲು ಹೋಗಿ ಕಚ್ಚಿಸಿಕೊಂಡ ಉರಗ ರಕ್ಷಕ..! 


ಅಷ್ಟೇ ಅಲ್ಲದೇ ಎಂಪವರ್ ಇಂಡಿಯಾ ಸಂಸ್ಥೆ ಮುಸ್ಲಿಂರ ಏಳಿಗೆಗಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಮುಸಲ್ಮಾನರ ಏಳಿಗೆ, ಮುಸಲ್ಮಾನ ಮಹಿಳೆಯರ ಸಾಕ್ಷರತೆ, ಮುಸಲ್ಮಾನ ಮಹಿಳೆಯರ ಅಭಿವೃದ್ಧಿ, ಪ್ರಿಯಾರಿಟೀಸ್ ಟು ಎಜುಕೇಷನ್ ಮಾಡ್ರನ್ ಮುಸ್ಲೀಂ ಇನ್ ಸ್ಟಿಟ್ಯೂಷನ್, ಇಂಪ್ರೂವ್ ಎಕಾನಮಿ ಕಂಡೀಷನ್ಸ್ ಎಂಬ ಗುರಿಯನ್ನು ಮುಸ್ಲಿಂ ಸಮುದಾಯಕ್ಕಾಗಿ ಇಟ್ಟುಕೊಂಡಿತ್ತಂತೆ. 


ಇದನ್ನೂ ಓದಿ: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ದಕ್ಷಿಣ ಚಿತ್ರರಂಗದ ಪ್ರಾಬಲ್ಯ, ಇಲ್ಲಿದೆ ಸಂಪೂರ್ಣ ಪಟ್ಟಿ


ಕೋಜಿಕ್ಕೋಡ್, ಬೆಂಗಳೂರು, ಚನ್ನೈ , ಹೈದ್ರಾಬಾದ್, ಕೋಲ್ಕತ್ತಾ, ದೆಹಲಿ ಹೀಗೆ ಹತ್ತಾರು ಕಡೆ ಸೆಮಿನಾರ್ ಕಂಡಕ್ಟ್ ಮಾಡಲಾಗಿತ್ತು. ಎಕ್ಸ್ಪರ್ಟ್‌ಗಳನ್ನು ಕರೆಸಿ ವಿಚಾರ ಮಂಡಿಸಲಾಗಿತ್ತು. ಅಲ್ಲಿಗೆ 2047ರ ಹೊತ್ತಿಗೆ ಎಲ್ಲಾ ರಂಗಗಳಲ್ಲೂ ಮುಸ್ಲಿಂ ಸಮಾಜ ಅಭಿವೃದ್ಧಿ ಹೊಂದಲು ಮಾಸ್ಟರ್ ಪ್ಲಾನ್ ಮಾಡಲಾಗಿತ್ತು. ಇದಕ್ಕಾಗಿ ಎಂಪವರ್ ಇಂಡಿಯಾ ಅಂಗಸಂಸ್ಥೆ ಸಾಕಷ್ಟು ಶ್ರಮ ಹಾಕಿತ್ತು. ಹಲಸೂರು ಗೇಟ್‌ನ ಕಚೇರಿ ಸೀಲ್ ಡೌನ್ ವೇಳೆ ನೂರಾರು ಬ್ರೌಸರ್‌ಗಳು ಪತ್ತೆಯಾಗಿದ್ದು. ಮುಸ್ಲಿಂ ಸಮಾಜ ಮೇಲೆತ್ತಲು ಹತ್ತಾರು ಪ್ಲಾನ್‌ಗಳನ್ನ ಹಾಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.