ಬೆಂಗಳೂರಿನಲ್ಲಿ ಹೊಸದಾಗಿ 11 ಪೊಲೀಸ್ ಠಾಣೆ ಸ್ಥಾಪನೆ: ಸಿಎಂ ಸಿದ್ದರಾಮಯ್ಯ
CM Siddarmaiah: ನಗರದ ಪೊಲೀಸರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಪರ್ ಕೊಡುಗೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಸಿಸಿಬಿ ಘಟಕಕ್ಕೆ 234 ಸಿಬ್ಬಂದಿ ಸೇರಿದಂತೆ ಕಮೀಷನರೇಟ್‌ಗೆ ಹೊಸದಾಗಿ 2,454 ಹುದ್ದೆಗಳಿಗೆ ನೇಮಿಸಿಕೊಳ್ಳಲು ಒಪ್ಪಿಗೆ ಸೂಚಿಸಿದ್ದಾರೆ.
ಬೆಂಗಳೂರು: ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಗುರುವಾರ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಪೊಲೀಸರಿಗೆ ಶಕ್ತಿ ತುಂಬಲು ಸರ್ಕಾರ ಬದ್ಧವಾಗಿದೆ ಎಂದರು.
ನಗರದಲ್ಲಿ ಸುಗಮ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಐದು ಸಂಚಾರ ಹಾಗೂ ಆರು ಮಹಿಳಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುವುದು. ಅಲ್ಲದೇ ಸಿಸಿಬಿ ಘಟಕಕ್ಕೆ 234 ಸಿಬ್ಬಂದಿ ಸೇರಿದಂತೆ ನಗರ ಕಮೀಷನರೇಟ್‌ಗೆ 2454 ಹುದ್ದೆಗಳನ್ನು ಸೃಷ್ಟಿಸಲಾಗುವುದು. ಇದು ಪೊಲೀಸ್ ವ್ಯವಸ್ಥೆಗೆ ಮತ್ತಷ್ಟು ಬಲವರ್ಧನೆಯಾಗಲಿದೆ ಎಂದರು.
2016-17ನೇ ಸಾಲಿನ ಬಜೆಟ್‌ನಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಪಶ್ಚಿಮ ಹಾಗೂ ಪೂರ್ವಘಟಕಗಳನ್ನು ಸ್ಥಾಪಿಸಲು ಘೋಷಿಸಿದ್ದೆ. ಇದರಲ್ಲಿ ಪಶ್ಚಿಮ ಸ್ಥಾಪನೆಯಾಗಿದ್ದು, ಇನ್ನುಳಿದ ಪೂರ್ವ ಘಟಕ ಘಟಕ ಆರಂಭಕ್ಕೆ 60.64 ಕೋಟಿ ರೂ. ಅನುದಾನ ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ-ಸಾಲು ಕೊಡುವ ನೆಪದಲ್ಲಿ ಅನುಚಿತ ವರ್ತನೆ: ಮೈಕ್ರೋಫೈನಾನ್ಸ್ ಸಿಬ್ಬಂದಿಗೆ ಧರ್ಮದೇಟು!
ಪಾರಂಪರಿಕ ಕಟ್ಟಡವಾಗಿರುವ 148 ವರ್ಷದ ಹಳೆಯ ಪೊಲೀಸ್ ಆಯುಕ್ತರ ಕಚೇರಿ ಸಂರಕ್ಷಿಸುವ ಉದ್ದೇಶದಿಂದ ನವೀಕರಣಕ್ಕೆ 3 ಕೋಟಿ ರೂ. ಅನುದಾನ ನೀಡಲಾಗುತ್ತದೆ ಎಂದು ಆಶ್ವಾಸನೆ ನೀಡಿದರು.
ಬೆಂಗಳೂರು ಪೊಲೀಸರಿಗೆ ಹೊಸ ವಾಹನಗಳ ಖರೀದಿಗೆ 100 ಕೋಟಿ ರೂ. ಹಣಕಾಸು ನೆರವು ನೀಡುವ ಸಂಬಂಧ ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲು ಒಪ್ಪಿಗೆ ಸೂಚಿಸಲಾಗುವುದು ಎಂದರು.
ಪ್ರಸಕ್ತ ವರ್ಷ ಚಿಕ್ಕಬಾಣಾವರ ಮತ್ತು ಜ್ಞಾನಭಾರತಿ ಸಂಚಾರಠಾಣೆಗಳು ಹಾಗೂ ಉತ್ತರ, ಕೇಂದ್ರ ಪಶ್ಚಿಮ, ಈಶಾನ್ಯ, ಆಗ್ನಿಯ ಮತ್ತು ವೈಟ್‌ಫೀಲ್ಡ್ ವಿಭಾಗದಲ್ಲಿ ಮಹಿಳಾ ಠಾಣೆಗಳನ್ನು ಸ್ಥಾಪಿಸಲಾಗುತ್ತದೆ. ಹಾಗೆಯೇ 3 ಎಸಿಪಿ, 23 ಪಿಐಗಳು, 116 ಪಿಎಸ್‌ಐಗಳು, 234 ಎಎಸ್‌ಐಗಳು, 273 ಹೆಡ್ ಕಾನ್‌ಸ್ಟೇಬಲ್, 574 ಕಾನ್‌ಸ್ಟೇಬಲ್‌ಗಳು ಸೇರಿದಂತೆ 1226 ಹುದ್ದೆಗಳನ್ನು ಹೊಸದಾಗಿ, ಸೃಷ್ಟಿಸಿ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದರು.
2024-25ನೇ ಸಾಲಿನಲ್ಲಿ ಜೆ.ಪಿ.ನಗರ, ಶೇಷಾದ್ರಿಪುರ ಹಾಗೂ ಸಂಜಯನಗರ ಸಂಚಾರ ಠಾಣೆಗಳು ಸ್ಥಾಪಿಸಲಾಗುತ್ತದೆ. ಹಾಗೆಯೇಓರ್ವಎಸಿಪಿ, ಆರು ಪಿಐಗಳು, 162 ಪಿಎಸ್‌ಐಗಳು, 318 ಎಎಸ್‌ಐಗಳು, 236 ಹೆಡ್ ಕಾನ್‌ಸ್ಟೇಬಲ್‌ಗಳು ಹಾಗೂ 505 ಕಾನ್‌ಸ್ಟೇಬಲ್‌ಗಳು ಸೇರಿದಂತೆ 1228 ಹುದ್ದೆಗಳನ್ನು ಸೃಜಿಸುವುದಾಗಿ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ-Farmers suicide in Karnataka: ಬಿಜೆಪಿ ಅವಧಿಯಲ್ಲಿ ಅತ್ಯಧಿಕ ರೈತರ ಆತ್ಮಹತ್ಯೆ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.