ಹತ್ಯೆಯಾಗುವ 12 ದಿನಕ್ಕೂ ಮುನ್ನ ಗದುಗಿನ ಯುವಕನಿಗೆ ಪತ್ರ ಬರೆದಿದ್ದ ಮಹಾತ್ಮಾ ಗಾಂಧೀಜಿ...!
ಈ ಪತ್ರ ದಿಲ್ಲಿಯಿಂದ ಇನ್ನೂ ಗದುಗಿನ ಶಿಗ್ಲಿ ಗ್ರಾಮಕ್ಕೆ ತಲುಪಿರಲಿಲ್ಲ, ಅದು ಗ್ರಾಮಕ್ಕೆ ತಲುಪುವಷ್ಟರಲ್ಲಿ ಜನವರಿ 30 ರಂದು ಮಹಾತ್ಮಾ ಗಾಂಧಿ ಅವರ ಕಗ್ಗೊಲೆಯಾಯಿತು. ಇದಾದ ಎರಡು ಮೂರು ದಿನಗಳ ನಂತರ ಗ್ರಾಮಕ್ಕೆ ಗಾಂಧೀಜಿ ಅವರ ಪತ್ರ ತಲುಪಿತು.
ಅದು 1942, ದೇಶದೆಲ್ಲೆಡೆ ಕ್ವಿಟ್ ಇಂಡಿಯಾ ಚಳುವಳಿ ತೀವ್ರಗೊಂಡಿತ್ತು,ಇಂತಹ ಸಂದರ್ಭದಲ್ಲಿ ಗಾಂಧೀಜಿ, ಅರವಿಂದರ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಬಸವಕುಮಾರರು ಇಂದಿನ ಗದಗ ಜಿಲ್ಲೆಯಲ್ಲಿರುವ ತಮ್ಮ ಶಿಗ್ಲಿ ಗ್ರಾಮವನ್ನೇ ತಮ್ಮ ಕೇಂದ್ರವನ್ನಾಗಿಟ್ಟುಕೊಂಡು ಸ್ವಾತಂತ್ರ ಹೋರಾಟಕ್ಕೆ ಧುಮುಕಿದವರು.
ಗಾಂಧೀಜಿ, ಆಚಾರ್ಯ ವಿನೋಭಾ ಭಾವೆ, ಪಂಡಿತ್ ನೆಹರು ರಂತಹ ಘಟಾನುಘಟಿಗಳ ಜೊತೆ ಪತ್ರ ವ್ಯವಹಾರದ ನಂಟನ್ನು ಇಟ್ಟುಕೊಂಡಿದ್ದ ಬಸವಕುಮಾರರು ಅವಿಭಜಿತ ಧಾರವಾಡ ಜಿಲ್ಲೆಯ ಭಾಗದಲ್ಲಿನ ಮೈಲಾರ ಮಹಾದೇವಪ್ಪ, ಹಳ್ಳಿಕೇರಿ ಗುದ್ಲೆಪ್ಪರಂತಹ ಹೋರಾಟಗಾರರ ಜೊತೆಗೂಡಿ ಚಳುವಳಿಯ ರೂಪುರೇಷೆಗಳನ್ನು ಈ ಭಾಗದಲ್ಲಿ ಸಿದ್ದಪಡಿಸುತ್ತಿದ್ದರು.
ಇಂತಹ ಬಸವಕುಮಾರರು ಸ್ವಾತಂತ್ರ ಸಿಕ್ಕ ನಂತರ ರಾಜಕೀಯದಿಂದ ವಿಮುಖರಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕೆನ್ನುವುದು ಅವರ ಬಯಕೆಯಾಗಿತ್ತು, ಹೀಗಾಗಿ ಅವರು ಎಂದಿನಂತೆ ರಾಷ್ಟ್ರೀಯ ನಾಯಕರಿಗೆ ನೇರವಾಗಿ ಪತ್ರವನ್ನು ಬರೆಯುವ ಮೂಲಕ ತಮ್ಮ ಗೊಂದಲಗಳನ್ನು ನಿವಾರಿಸಿಕೊಳ್ಳುತ್ತಿದ್ದರು.
ಸ್ವಾತಂತ್ರ ಸಿಕ್ಕು ಇನ್ನೂ ಆರು ತಿಂಗಳು ಆಗಿರಲಿಲ್ಲ,ಆದಾಗಲೇ ಬಸವಕುಮಾರರಿಗೆ ಇನ್ನೂ ಮುಂದೇನು ಎನ್ನುವ ಪ್ರಶ್ನೆ ಕಾಡತೊಡಗಿತು,ಅಪ್ಪಟ ಗಾಂಧಿವಾದಿಯಾಗಿದ್ದ ಅವರು ಶಿಕ್ಷಣ, ಸಾಕ್ಷರತೆ, ಅಸ್ಪೃಶ್ಯತೆಯ ನಿವಾರಣೆ, ಗ್ರಾಮೋದ್ಯೋಗ ಇಂತಹ ಹಲವು ಯೋಜನೆಗಳನ್ನು ಉಲ್ಲೇಖಿಸಿ ಜನವರಿ 11, 1948 ರಂದು ಮಹಾತ್ಮಾ ಗಾಂಧೀಜಿ ಅವರಿಗೆ ಪತ್ರ ಬರೆದು' ನನ್ನ ಜೀವನವನ್ನು ಸಮಾಜಸೇವೆಗೆ ಮೀಸಲಿಡಲು ತಿರ್ಮಾನಿಸಿದ್ದೇನೆ. ನಿಮ್ಮ ಆಶೀರ್ವಾದದಿಂದಲೇ ಈ ಸಮಾಜ ಸೇವೆ ಕೈಗೊಳ್ಳಬೇಕೆಂದು ನಿರ್ಧರಿಸಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.