ಬೆಂಗಳೂರು: ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ'ಯನ್ನು ಇನ್ನು ಮುಂದೆ 2.20ನಿಮಿಷಗಳಲ್ಲಿ ಹಾಡಲು ಸಮಯ ನಿಗದಿ ಮಾಡಿ ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದ ಸಭೆ ಶಿಫಾರಸು ಮಾಡಿದೆ. 


COMMERCIAL BREAK
SCROLL TO CONTINUE READING

ಹಿರಿಯ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ, ಡಾ. ಚಂದ್ರಶೇಖರ ಪಾಟೀಲ, ನಾಡೋಜ ಕಮಲಾ ಹಂಪನಾ, ಡಾ. ದೊಡ್ಡರಂಗೇಗೌಡ, ಬಿ.ಟಿ. ಲಲಿತಾ ನಾಯಕ್‌, ಚಿರಂಜೀವಿ ಸಿಂಗ್‌, ಗಾಯಕರಾದ ವೈ.ಕೆ. ಮುದ್ದುಕೃಷ್ಣ, ಮುದ್ದುಮೋಹನ್‌, ಆನಂದ ಮಾದಲಗೆರೆ, ಕಿಕ್ಕೇರಿ ಕೃಷ್ಣಮೂರ್ತಿ, ಕನ್ನಡಪರ ಹೋರಾಟಗಾರರಾದ ರಾ.ನಂ. ಚಂದ್ರಶೇಖರ್‌, ಸತೀಶ್‌ಗೌಡ, ತಿಮ್ಮಯ್ಯ ಸೇರಿದಂತೆ ಒಟ್ಟಾರೆ 33 ಮಂದಿ ಗಣ್ಯರು ಸಮ್ಮುಖದಲ್ಲಿ ನಾಡಗೀತೆಯ ಅವಧಿಯ ಬಗ್ಗೆ ಚರ್ಚೆ ನಡೆಲಾಗಿದೆ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. 


ಇದರಿಂದಾಗಿ ಐದು ನಿಮಿಷಗಳಿಗೂ ಹೆಚ್ಚು ಕಾಲ ಹಾಡುತ್ತಿದ್ದ ನಾಡಗೀತೆಯನ್ನು 2.20 ನಿಮಿಷಗಳಲ್ಲಿ ಯಾವುದೇ ಪದಗಳನ್ನು ಕತ್ತರಿಸದೆ, ಪದಗಳು ಪುನರಾವರ್ತನೆಯಾಗದಂತೆ, ನಾಡಗೀತೆಗೆ ಯಾವುದೇ ಚ್ಯುತಿ ಬಾರದಂತೆ ಹಾಡಬಹುದು ಎಂಬುದನ್ನು ಪ್ರಾಯೋಗಿಕವಾಗಿ ಹಾಡಿಸಿ, ನಿರ್ಧರಿಸಲಾಯಿತು.


ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮನು ಬಳಿಗಾರ್‌, ನಾಡಗೀತೆಯನ್ನು ಪುನರಾವರ್ತನೆಯಾಗದಂತೆ, ಯಾವ ಪದವನ್ನೂ ಕತ್ತರಿಸದೆ ಹಾಡಿದರೆ ಎರಡೂವರೆ ನಿಮಿಷದೊಳಗೆ ಹಾಡಿ ಮುಗಿಸಬಹುದು. ಈ ಕುರಿತು ಎಲ್ಲಾ ಪರೀಕ್ಷೆ ಹಾಗೂ ತಜ್ಞರ ಜತೆಗೆ ಚರ್ಚೆಗಳನ್ನು ಮಾಡಿದ್ದು, ಈ ಸಭೆಯಲ್ಲಿ ಕೈಗೊಂಡ ಶಿಫಾರಸುಗಳನ್ನು ಎರಡು ದಿನಗಳ ಒಳಗೆ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.