ಗ್ಯಾಂಗ್ ರೇಪ್ ಆರೋಪಿ ಮನೋಜ್ ಗೆ 20 ವರ್ಷ ಜೈಲು
ಎರಡೂವರೆ ವರ್ಷಗಳ ಹಿಂದೆ 14 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದ ಆರೋಪಿ ಮನೋಜ್ ಗೆ ಬೆಂಗಳೂರಿನ ಮಕ್ಕಳ ಸ್ನೇಹಿ ಕೋರ್ಟ್ 20 ವರ್ಷ ಜೈಲುಶಿಕ್ಷೆ ವಿಧಿಸಿದೆ.
ಬೆಂಗಳೂರು : ಎರಡೂವರೆ ವರ್ಷಗಳ ಹಿಂದೆ 14 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದ ಆರೋಪಿ ಮನೋಜ್ ಗೆ ಬೆಂಗಳೂರಿನ ಮಕ್ಕಳ ಸ್ನೇಹಿ ಕೋರ್ಟ್ 20 ವರ್ಷ ಜೈಲುಶಿಕ್ಷೆ ವಿಧಿಸಿದೆ.
ಡಿ.9 2014 ರಂದು ರಾತ್ರಿ ನಂದಿನಿ ಲೇಔಟ್ ರಾಜೀವ್ ಗಾಂಧಿ ನಗರ ಪಾರ್ಕ್ ನಲ್ಲಿ ಲೋಕೇಶ್ ಮತ್ತು ಮನೋಜ್ ಇಬ್ಬರಿಂದ ಗ್ಯಾಂಗ್ ರೇಪ್ ಕೃತ್ಯ ನಡೆದಿತ್ತು. ಆರೋಪಿ ಲೋಕೇಶ್ ಅಪಘಾತವೊಂದರಲ್ಲಿ ಮೃತಪಟ್ಟಿದ್ದ.
ಬೆಂಗಳೂರಿನ ಮಕ್ಕಳ ಸ್ನೇಹಿ ಕೋರ್ಟ್ನಲ್ಲಿ ವಿಚಾರಣೆ ನಡಿಯುತ್ತಿತ್ತು. ಸೆಷನ್ಸ್ ಜಡ್ಜ್ ವನಮಾಲಾ ಯಾದವ್, ನಿನ್ನೆ 2014 ರ ಬೆಂಗಳೂರಿನ ಗ್ಯಾಂಗ್ ರೇಪ್ ಆರೋಪಿ ಮನೋಜ್ ಗೆ 20 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದ್ದಾರೆ.
ಬಾಲಕಿ ಪರ ವಕೀಲ ಎಸ್.ಎನ್.ಹಿರೇಮನಿ ಗರಿಷ್ಟ ಪರಿಹಾರಕ್ಕಾಗಿ ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದರು. ಬಾಲಕಿಯ ಪ್ರಸ್ತುತ ಪರಿಸ್ಥಿತಿ ಬಗ್ಗೆ ವರದಿ ನೀಡುವಂತೆ ನಂದಿನಿ ಲೇಔಟ್ ಠಾಣೆ ತನಿಖಾಧಿಕಾರಿಗೆ ಕೋರ್ಟ್ ಸೂಚನೆ ನೀಡಿದೆ.