ರೂಪಾಂತರಿತ ಕರೋನಾ ಕರ್ನಾಟಕವನ್ನು ಕಾಡುತ್ತಿದೆಯಾ..? ಅಷ್ಟಕ್ಕೂ ಆರೋಗ್ಯ ಸಚಿವರು ಹೇಳಿದ್ದೇನು..?
ಬ್ರಿಟನ್ ನಿಂದ ಬಂದಿರುವ 26 ಮಂದಿ ಕರೋನಾ ರಿಪೋರ್ಟ್ ಪಾಸಿಟಿವ್ ಬಂದಿದೆ. ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು : ರೂಪಾಂತರಿತ ಕರೋನಾ ಈಗ ವಿಶ್ವದಾದ್ಯಂತ ಭಯ ಸೃಷ್ಟಿಸಿದೆ. ಸೂಪರ್ ಸ್ಪ್ರೆಡರ್ ಎಂದೇ ಕರೆಯಲಾಗುವ ಈ ರೂಪಾಂತರಿತ ಕರೋನಾ ಇನ್ನಷ್ಟು ಭಯಾನಕ ಎಂದು ಹೇಳಲಾಗುತ್ತಿದೆ. ಇದು ಕರೋನಾ ಮಹಾಮಾರಿಯನ್ನು ಶೇ 70ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಕ್ಷಮತೆ ಇಟ್ಟುಕೊಂಡಿದೆ. ಬ್ರಿಟನ್ ನಲ್ಲಿ ಕಂಡು ಬಂದ ಈ ಹೊಸ ಕರೋನಾ, ಭಾರತಕ್ಕೂ ಕಾಲಿರಿಸುವ ಸಾಧ್ಯತೆ ದಟ್ಟವಾಗಿದೆ.
ಅಷ್ಟಕ್ಕೂ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದೇನು..?
ಈ ನಡುವೆ, ಬೆಂಗಳೂರಿನಿಂದ ಒಂದು ಆತಂಕದ ಸುದ್ದಿಯೊಂದು ಬಂದಿದೆ. ಬ್ರಿಟನ್ ನಿಂದ ಬಂದಿರುವ 26 ಮಂದಿ ಕರೋನಾ (COVID-19) ರಿಪೋರ್ಟ್ ಪಾಸಿಟಿವ್ ಬಂದಿದೆ. ಅವರೆಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೋನಾ ಲಕ್ಷಣ ಇದ್ದರೂ ಕೂಡಾ ಆರೋಗ್ಯವಾಗಿದ್ದಾರೆ. ಹೀಗಂತ ಹೇಳಿದ್ದು, ಮತ್ಯಾರೂ ಅಲ್ಲ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (DR. K. Sudhakar).
ALSO READ : BIG NEWS: ಆರಂಭವಾದ ಕಾಲೇಜುಗಳನ್ನ ಮತ್ತೆ ಮುಚ್ಚಲು ಸರ್ಕಾರ ಚಿಂತನೆ..!
ಇದು ಸೂಕ್ಷ್ಮ ವಿಚಾರ: ಡಾ.ಸುಧಾಕರ್
ಇವರ ಆರೋಗ್ಯದ ಕುರಿತ ವರದಿಯನ್ನು ಐಸಿಎಂಆರ್ ಗೆ (ICMR) ಕಳುಹಿಸಲಾಗಿದೆ. ಇದು ಸ್ವಲ್ಪ ಸೂಕ್ಷ್ಮ ವಿಚಾರ. ದೆಹಲಿಯಿಂದಲೇ ಅದನ್ನು ಪ್ರಕಟಿಸಲಾಗುತ್ತದೆ. ನಾನು ಕೂಡಾ ಐಸಿಎಂಆರ್ ಜೊತೆ ಮಾತನಾಡುತ್ತೇನೆ. ಬಳಿಕ ಗೃಹ ಸಚಿವರೊಂದಿಗೂ ಮಾತನಾಡುತ್ತೇನೆ ಎಂದು ಸುಧಾಕರ್ ಹೇಳಿದ್ದಾರೆ.
ಬ್ರಿಟನ್ ನಿಂದ ಬಂದ ಕೆಲವರು ನಾಪತ್ತೆ..?
ಬ್ರಿಟನ್ ನಿಂದ ಬಂದ ಕೆಲವರು ಮಿಸ್ ಆಗಿದ್ದಾರೆ. ಅವರನ್ನು ಟ್ರೇಸ್ ಮಾಡಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಟ್ರೇಸ್ ಆಗದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚೆ ಮಾಡಲಾಗುವುದು. ಬ್ರಿಟನ್ ನಿಂದ ಭಾರತಕ್ಕೆ ಬರುವವರು ಸಹಕರಿಸಬೇಕು ಎಂದು ಸುಧಾಕರ್ ಮನವಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.