ಬೆಂಗಳೂರು: ಅಧಿವೇಶನದ ಸಂದರ್ಭದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಮಂಗಳವಾರ ರಾತ್ರಿ ಕರೆದ ಔತಣಕೂಟಕ್ಕೆ ಸುಮಾರು 28 ಕ್ಕೂ ಅಧಿಕ ಶಾಸಕರ ಗೈರು ಹಾಜರಿ ಕಮಲ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.


COMMERCIAL BREAK
SCROLL TO CONTINUE READING

ಬಜೆಟ್‌ಗೂ ಮೊದಲು ಶಾಸಕರ ಜೊತೆಗೆ ಅನೌಪಚಾರಿಕ ಮಾತುಕತೆ ಹಾಗೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa) ಮಂಗಳವಾರ ರಾತ್ರಿ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಔತಣ ಕೂಟ ಹಮ್ಮಿಕೊಂಡಿದ್ದರು. ಆದರೆ ಸಚಿವ ಸ್ಥಾನ ಅಸಮಾಧಾನ ಹಿನ್ನೆಲೆಯಲ್ಲಿ ಈ ಔತಣಕೂಟ ಮಹತ್ವ ಪಡೆದುಕೊಂಡಿತ್ತು.


BJP: ನಾವು ಪಕ್ಷದಿಂದ ಹೊರಗಿದ್ರು ಗೆಲ್ತೀವಿ: ದೂರ ಸರಿವ ಸೂಚನೆ ನೀಡಿದ್ರಾ ಬಿಜೆಪಿ ಶಾಸಕ!?


ಆನಂದ್ ಸಿಂಗ್,  ಸೋಮಶೇಖರ ರೆಡ್ಡಿ, ಜಿ ಎಚ್ ತಿಪ್ಪಾರೆಡ್ಡಿ, ಕರುಣಾಕರ ರೆಡ್ಡಿ, ಗೂಳಿಹಟ್ಟಿ ಶೇಖರ್, ಸತೀಶ್ ರೆಡ್ಡಿ, ಉದಯ್ ಗರುಡಾಚಾರ್, ಸುರೇಶ್ ಕುಮಾರ್, ಎಂ ಪಿ ಕುಮಾರಸ್ವಾಮಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ, ಪೂರ್ಣಿಮಾ ಶ್ರೀನಿವಾಸ್, ಮಹಾಂತೇಶ್ ದೊಡ್ಡನಗೌಡ ಪಾಟೀಲ, ವೀರಣ್ಣ ಚರಂತಿಮಠ, ಮಹಾಂತೇಶ್ ದೊಡ್ಡನಗೌಡರ್ ಕಳಕಪ್ಪ ಬಂಡಿ, ದಿನಕರ್ ಶೆಟ್ಟಿ, ಸುನೀಲ್ ನಾಯ್ಕ್, ಸಿ ಎಂ‌ ಉದಾಸಿ, ಅರುಣ್ ಕುಮಾರ್‌, ಸಿ ಟಿ ರವಿ, ಜೆ ಸಿ ಮಾಧುಸ್ವಾಮಿ, ಎಚ್ ನಾಗೇಶ್, ಡಿ ಎಸ್ ಸುರೇಶ್ , ಎಸ್‌ಎ ರಾಮದಾಸ್ ಸಭೆಗೆ ಗೈರಾಗಿದ್ದಾರೆ.


R Ashok: ನೂತನ ಸಭಾಪತಿ ಬಳಿ ಕೇವಲ ಎರಡು ಆಯ್ಕೆಗಳಿವೆ: ಸಚಿವ ಅಶೋಕ್ ಹೇಳಿದ್ದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ