ಬೆಂಗಳೂರು: ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಸಂಚಾರ ನಿಯಮಗಳಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಎಲ್ಲಾ ಸವಾರರು ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಹೊಸ ನಿಯಮದ ಪ್ರಕಾರ ಬೈಕು ಅಥವಾ ಸ್ಕೂಟರ್ ಸವಾರಿ ಮಾಡುವ 4 ವರ್ಷಕ್ಕಿಂತ ಮೇಲ್ಪಟ್ಟ ಮಗುವಿಗೆ ಸಹ ಹೆಲ್ಮೆಟ್ ಧರಿಸುವುದು ಅಗತ್ಯವಾಗಿರುತ್ತದೆ.


COMMERCIAL BREAK
SCROLL TO CONTINUE READING

ಕರ್ನಾಟಕದ ಸಾರಿಗೆ ಇಲಾಖೆಯ ಹೊಸ ನಿಯಮಗಳ ಪ್ರಕಾರ ಎಲ್ಲಾ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ (Helmet) ಕಡ್ಡಾಯವಾಗಿದೆ. ಇವುಗಳಲ್ಲಿ 4 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸೇರಿದ್ದಾರೆ.  ಯಾರಾದರೂ  ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ಚಾಲನಾ ಪರವಾನಗಿಯನ್ನು 3 ತಿಂಗಳವರೆಗೆ ಅಮಾನತುಗೊಳಿಸಲಾಗುವುದು ಎಂದು ನಿಯಮಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.


Driving Licence ಹಾಗೂ e-Challansಗಳ ನಿಯಮಗಳಲ್ಲಿ ಬದಲಾವಣೆ, ನೀವೂ ತಿಳಿದುಕೊಳ್ಳಿ


ಸುಪ್ರೀಂ ಕೋರ್ಟ್‌ನ (Supreme Court) ರಸ್ತೆ ಸುರಕ್ಷತಾ ಸಮಿತಿಯು ಅಕ್ಟೋಬರ್ 14 ರಂದು ವಿಡಿಯೋ ಕಾನ್ಫರೆನ್ಸ್ ನಡೆಸಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಇದರ ನಂತರ ಕರ್ನಾಟಕದಾದ್ಯಂತ ಹೊಸ ನಿಯಮ ಜಾರಿಗೆ ಬಂದಿದೆ.


Motor Vehicle Act)ಯ ಪ್ರಕಾರ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ.


2019ರ ಮೋಟಾರು ವಾಹನ (ತಿದ್ದುಪಡಿ) ಕಾಯ್ದೆಯ ಪ್ರಕಾರ, ಹೆಲ್ಮೆಟ್ ಧರಿಸದಿದ್ದಕ್ಕಾಗಿ 1000 ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಆದರೆ ಕರ್ನಾಟಕ ಸರ್ಕಾರ ದಂಡದ ಮೊತ್ತವನ್ನು 500 ರೂ.ಗೆ ಇಳಿಸಿದೆ.


ಸಂಚಾರ ನಿಯಮ ಉಲ್ಲಂಘನೆ; ಟ್ರಕ್ ಮಾಲೀಕನಿಗೆ ಬಿತ್ತು ಬರೋಬ್ಬರಿ 2,00,500 ರೂ. ದಂಡ


ಕರ್ನಾಟಕದಲ್ಲಿ 1.65 ಕೋಟಿ ನೋಂದಾಯಿತ ದ್ವಿಚಕ್ರ ವಾಹನಗಳಿವೆ. ಬೆಂಗಳೂರಿನಲ್ಲಿ 59.9 ಲಕ್ಷ ಬೈಕ್‌ಗಳು ನೋಂದಣಿಯಾಗಿವೆ.


ಕಳೆದ ತಿಂಗಳು ಟ್ರಾಫಿಕ್ ಪೊಲೀಸರು 43,141 ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದಾರೆ ಮತ್ತು 2.14 ಕೋಟಿ ರೂ.ಗಳ ದಂಡವನ್ನು ವಸೂಲಿ ಮಾಡಿದ್ದಾರೆ ಎಂದು ಬೆಂಗಳೂರು ಸಂಚಾರ ಪೊಲೀಸರ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದರ ನಂತರ 55,717 ಪ್ರಕರಣಗಳು ದಾಖಲಾಗಿದ್ದು, 2.35 ಕೋಟಿ ರೂ.ಗಳ ದಂಡ ವಿಧಿಸಲಾಗಿದೆ.