ಹುಬ್ಬಳ್ಳಿ: ಹೆಚ್ಚುವರಿ ತರಗತಿಗಳಿಗೆ ಹಾಜರಾಗಿ ಮರಳಿ ಮನೆ ಹೋಗಲು ಕಾರಿಗೆ ಹತ್ತಿದ ವಿದ್ಯಾರ್ಥಿಗಳು, ಕಾರು ಪಲ್ಟಿಯಾದ ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಚಿಲಕವಾಡ -ಬೆಳಹಾರ್ ಗ್ರಾಮಗಳ ಮದ್ಯೆ ಸಂಭವಿಸಿದ್ದು ಗಾಯಾಳು ಹುಬ್ಭಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಚಿಲಕವಾಡ ಸರಕಾರಿ ಪ್ರೌಢಶಾಲೆಯಲ್ಲಿ ರವಿವಾರವಾದರೂ ಹೆಚ್ಚುವರಿ ತರಗತಿಗಳು ನಡೆಸಲಾಗಿತ್ತು. ಕ್ಲಾಸ್ ಮುಗಿದ ನಂತರ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಬಳಿ ನಿಂತಾಗ, ನವಲಗುಂದದಿಂದ ನಾಗರಳ್ಳಿಯತ್ತ ಹೊರಟಿದ್ದ ಕಾರಿಗೆ ‘ಕೈ’ ಮಾಡಿ ಲಿಫ್ಟ್ ಕೇಳಿದ್ದಾರೆ.


ಇದನ್ನೂ ಓದಿ: ಚೊಚ್ಚಲ ಸ್ಪರ್ಧೆಯಲ್ಲೇ ದಾಖಲೆ ಮತ ಪಡೆದು ಗೆಲುವು


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.


ಆರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹತ್ತಿಸಿಕೊಂಡ ಕಾರು ಚೀಲಕವಾಡ- ಬೆಳಹಾರ್ ಗ್ರಾಮಗಳ ಮದ್ಯ ರಸ್ತೆಯಲ್ಲಿ ಕೆಲವೇ ನಿಮಿಷಗಳಲ್ಲಿ ಪಲ್ಟಿಯಾಗಿದೆ. ಸ್ಥಳೀಯರು ಅಫಘಾತ ಸ್ಥಳದಲ್ಲಿ ಹಾಜರಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಿದ್ದು, ಗಂಭೀರವಾಗಿ ಗಾಯಗೊಂಡ 5 ವಿದ್ಯಾರ್ಥಿಗಳನ್ನು ಹುಬ್ಬಳ್ಳಿ ಕಿಮ್ಸಗೆ ರವಾನಿಸಲಾಗಿದೆ.ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.


ಇದನ್ನೂ ಓದಿ: ಡಿ. ಗ್ರೂಪ್ ಸಿಬ್ಬಂದಿ ರಾಣಿಯಿಂದ ಕೆಲಸದಲ್ಲಿ ನಿರ್ಲಕ್ಷ್ಯ


ಒಟ್ಟು 6 ವಿದ್ಯಾರ್ಥಿಗಳು ನಾಗರಹಳ್ಳಿ ಗ್ರಾಮದವರು ಎಂದು ತಿಳಿದು ಬಂದಿದೆ.ಕಾರು ಚಾಲಕನ ಬಗ್ಗೆ ಅಪೂರ್ಣ ಮಾಹಿತಿ ಇದ್ದು ಕುಡಿತದ ಅಮಲಿನಲ್ಲಿದ್ದ ಎಂದು ಗೊತ್ತಾಗಿದೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.