ಬೆಂಗಳೂರು: ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಶಾಸಕ  ಬಿ.ಎನ್‌. ವಿಜಯಕುಮಾರ್‌ ಅವರ ಅಕಾಲಿಕ ನಿಧನದಿಂದ ಮುಂದೂಡಲ್ಪಟ್ಟಿದ್ದ  ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು ಶೇ 55 ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಇದರ ಮತಎಣಿಕೆಯು ಇದೇ  ಜೂನ್ 13 ರಂದು ನಡೆಯಲಿದೆ ಎನ್ನಲಾಗಿದೆ. ಈ ಬಾರಿ ವಿಜಯಕುಮಾರ್ ನಿಧನರಾದ ಕಾರಣ ಅದರ ಅನುಕಂಪದ ಲಾಭ ಪಡೆಯಲು ಸಹೋದರ ಬಿ ಎನ್ ಪ್ರಹ್ಲಾದಬಾಬು ಅವರನ್ನು ಕಣಕ್ಕೆ ಇಳಿಸಿದೆ.ಇನ್ನೊಂದೆಡೆ ಮಾಜಿ ಸಚಿವ ರಾಮಲಿಂಗಾರೆಡ್ಡಿಯವರ ಮಗಳಾದ ಸೌಮ್ಯ ರೆಡ್ಡಿ  ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ,ಅಲ್ಲದೆ ಜಯನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಹಲವಾರು ಪ್ರಗತಿಪರ ಕೆಲಸದ ಮೂಲಕ ತಮ್ಮದೇ ಛಾಪು ಮೂಡಿಸಿರುವ ರವಿಕೃಷ್ಣಾರೆಡ್ಡಿಯವರೂ ಸಹಿತ ಈ ಬಾರಿ ರಾಷ್ಟ್ರೀಯ ಪಕ್ಷಗಳಿಗೆ ಪ್ರಬಲ ಸ್ಪರ್ಧೆ ಒಡ್ಡುವ ಸಾಧ್ಯತೆ ಎನ್ನಲಾಗಿದೆ.


ಈ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಕ್ಕೆ ಅತಿ ಅವಶ್ಯಕವಾದ ಗೆಲುವಾಗಿದೆ.ಕಾರಣ ಈಗ ಪ್ರತಿ ಒಂದೊಂದು ಸ್ಥಾನವು ಸರ್ಕಾರವನ್ನು ಭದ್ರ ಪಡಿಸಲು ಅವಶ್ಯಕವಾಗಿರುವುದರಿಂದ ಜೆಡಿಎಸ್ ಕೂಡ ಇಲ್ಲಿ ಕಾಂಗ್ರೆಸ್ ಅಭ್ಯರ್ತಿಯನ್ನು ಬೆಂಬಲಿಸಿದೆ.