ಚಾಮರಾಜನಗರ: ಕೊರೊನಾ ಮೂರನೇ ಅಲೆಯಲ್ಲಿ (Covid third wave) ಬಹುಪಾಲು ಮಂದಿ ಶೀತ, ಚಳಿ, ಜ್ವರದಿಂದ ನರಳುತ್ತಿದ್ದಾರೆ. ಆದರೆ, ಇಲ್ಲಿ ಇಡೀ ಊರಿಗೆ ಊರೇ ಅನಾರೋಗ್ಯ ಪೀಡಿತವಾಗಿದೆ. ಗ್ರಾಮದಲ್ಲಿ ವಾಸಿಸುವ 114 ಜನರಲ್ಲಿ 70 ಮಂದಿ ಹಾಸಿಗೆ ಹಿಡಿದಿದ್ದಾರೆ.


COMMERCIAL BREAK
SCROLL TO CONTINUE READING

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ (Malemahadeshwara hill) ತಪ್ಪಲಿನ ದೊಡ್ಡಾಣೆ ಎಂಬ ಕಾಡೊಳಗಿನ ಗ್ರಾಮದ ಜನರು ಚಳಿಜ್ವರದಿಂದ ಬಳಲುತ್ತಿದ್ದಾರೆ. ಬದಲಾದ ವಾತಾವರಣದಲ್ಲಿ ಕಾಡುತ್ತಿರುವ ಆರೋಗ್ಯ ಸಮಸ್ಯೆಗೆ ಗ್ರಾಮಸ್ಥರೆಲ್ಲಾ ಹಾಸಿಗೆ ಹಿಡಿದಿದ್ದು ಆಸ್ಪತ್ರೆಗೆ ತೆರಳಲು ರಸ್ತೆ ಸಂಪರ್ಕವೂ ಇಲ್ಲದಿರುವುದು ಆತಂಕವನ್ನು ಹೆಚ್ಚಿಸಿದೆ.


ಇದನ್ನೂ ಓದಿ: Anand Singh : 'ಕಾಂಗ್ರೆಸ್ ಪಕ್ಷ ಇಂದು ಆಕ್ಸಿಜನ್ ಮೇಲೆ ICU ನಲ್ಲಿದೆ'


ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ಅರಣ್ಯ ವ್ಯಾಪ್ತಿಗೆ ಈ  ದೊಡ್ಡಾಣೆ ಗ್ರಾಮ ಬರುತ್ತದೆ. ಇಲ್ಲಿ ರಸ್ತೆಗೆ ಡಾಂಬರೀಕರಣ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲದಿರುವುದರಿಂದ ಡೋಲಿ ಮೂಲಕವೇ ಮಾರ್ಟಳ್ಳಿ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆಯಬೇಕಿದೆ. ಆದರೆ, ಡೋಲಿಯಲ್ಲಿ ಹೊತ್ತು ಸಾಗಿಸುತ್ತಿದ್ದವರೇ ಜ್ವರದಿಂದ ನರಳಾಡುತ್ತಿದ್ದಾರೆ.


ಒಬ್ಬ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಕನಿಷ್ಟ 10 ಜನರು ಶ್ರಮವಹಿಸುತ್ತಾರೆ. ಕಾಡುಪ್ರಾಣಿಗಳ (Wild Animals) ಭಯದ ನಡುವೆಯೂ ಹಗಲು-ರಾತ್ರಿ ಎನ್ನದೆ ಕಷ್ಟಪಟ್ಟು ಗ್ರಾಮಸ್ಥರು ಒಬ್ಬರಿಗೊಬ್ಬರು ನೆರವಾಗುತ್ತಾರೆ. 


ಪ್ರಸ್ತುತ ಗ್ರಾಮಸ್ಥರೆಲ್ಲರೂ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಆಸ್ಪತ್ರೆಗೆ ಹೋಗಲು ಯಾರಿಗೂ ಸಾಧ್ಯವಾಗದೆ ಮನೆಯಲ್ಲೇ ಇದ್ದಾರೆ. ಹಳ್ಳಿಗರಲ್ಲಿ ಹಲವರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿಲ್ಲ. ಐದಾರು ದಿನಗಳಿಂದ ಗ್ರಾಮಸ್ಥರನ್ನು ಜ್ವರ ಬಾಧಿಸುತ್ತಿದೆ. 


ಸ್ಥಳಕ್ಕೆ ಆರೋಗ್ಯ ಸಿಬ್ಬಂದಿ ಭೇಟಿ: 


ದೊಡ್ಡಾಣೆ ಗ್ರಾಮಸ್ಥರು ಜ್ವರದಿಂದ ಬಳಲುತ್ತಿರುವುದು ತಿಳಿದ ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ (Health Department staff) ಇಂದು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.‌ 


ಇದನ್ನೂ ಓದಿ: Death By Selfie: ಸೆಲ್ಫಿ ಹುಚ್ಚು, ಹೊಗೆನಕಲ್ ಜಲಪಾತದಲ್ಲಿ ವಿದ್ಯಾರ್ಥಿ ನೀರುಪಾಲು


ಎಲ್ಲರ ಆರೋಗ್ಯ ತಪಾಸಣೆ ಮಾಡಲಿದ್ದು, ಅಗತ್ಯವಿದ್ದರೆ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುವುದು. ಮೊಬೈಲ್ ನೆಟ್ವರ್ಕ್ ಸಿಗದಿರುವುದರಿಂದ ತಾಲೂಕು ಆರೋಗ್ಯಾಧಿಕಾರಿಗಳಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ ಎಂದು ಡಿಎಚ್ಒ ಡಾ.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.