ಬೆಂಗಳೂರು: ಕಲಬುರ್ಗಿಯಲ್ಲಿ ನಡೆಯಲಿರುವ 85 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಲಾಗಿದೆ 


COMMERCIAL BREAK
SCROLL TO CONTINUE READING

ಈ ಸಮ್ಮೇಳನದ ಲಾಂಛನದಲ್ಲಿ ಕನ್ನಡದ ಮಹತ್ತರ ಕೃತಿಯಾದ ಕವಿರಾಜ್ ಮಾರ್ಗ ಹಾಗೂ ಕಲಬುರ್ಗಿಯ ತಾಣಗಳನ್ನು ಒಳಗೊಂಡಿದೆ.ಇದೇ ವೇಳೆ ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಬಿ.ಶರತ್ ಅವರು ಸಮ್ಮೇಳನದ ಸಿದ್ದತೆಗಳ ಕುರಿತಾಗಿ ಹೇಳಿದರು.


ಸಾಹಿತ್ಯ ಸಮ್ಮೇಳನಕ್ಕಾಗಿ 16 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ಇದು ಸಮ್ಮೇಳನವನ್ನು ಸುಗಮವಾಗಿ ನಡೆಸಲು ಸಹಾಯಕವಾಗಲಿದೆ.


ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.