ಪ್ರವಾಹಕ್ಕೆ ತುತ್ತಾದ ಸೇತುವೆಯಲ್ಲಿ ಆಂಬುಲೆನ್ಸ್‌ಗೆ ದಾರಿ ತೋರಿದ 12 ವರ್ಷದ ಪೋರನಿಗೆ ಸನ್ಮಾನ
ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿರುವ ವೀಡಿಯೊದಲ್ಲಿ ವೆಂಕಟೇಶ್ ಅವರು ಪ್ರವಾಹಕ್ಕೆ ಸಿಲುಕಿದ ಸೇತುವೆಯ ಮೇಲೆ ತನ್ನ ಜೀವದ ಹಂಗನ್ನೂ ತೊರೆದು ನೀರಿನಿಂದ ತುಂಬಿದ ರಸ್ತೆಗೆ ಅಡ್ಡಲಾಗಿ ಓಡುತ್ತಾ ಆಂಬುಲೆನ್ಸ್‌ಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ರಾಯಚೂರು: ಪ್ರವಾಹಕ್ಕೆ ಸಿಲುಕಿದ ಸೇತುವೆಯ ಮೇಲೆ ಸುರಕ್ಷಿತವಾಗಿ ತೆರಳಲು ಆಂಬುಲೆನ್ಸ್‌ಗೆ ಮಾರ್ಗದರ್ಶನ ನೀಡಿದ 12 ವರ್ಷದ ಬಾಲಕ ವೆಂಕಟೇಶ್ ಅವರನ್ನು ಸ್ವಾತಂತ್ರ್ಯ ದಿನಾಚರಣೆಯಂದು ನಗರದ ಜಿಲ್ಲಾಧಿಕಾರಿ ಶರತ್ .ಬಿ ಸನ್ಮಾನಿಸಿ ಜಿಲ್ಲಾ ಮಟ್ಟದ ಸಾಹಸ ಪ್ರಶಸ್ತಿ ನೀಡಿದರು.
ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿರುವ ವೀಡಿಯೊದಲ್ಲಿ ವೆಂಕಟೇಶ್ ಅವರು ಪ್ರವಾಹಕ್ಕೆ ಸಿಲುಕಿದ ಸೇತುವೆಯ ಮೇಲೆ ತನ್ನ ಜೀವದ ಹಂಗನ್ನೂ ತೊರೆದು ನೀರಿನಿಂದ ತುಂಬಿದ ರಸ್ತೆಗೆ ಅಡ್ಡಲಾಗಿ ಓಡುತ್ತಾ ಆಂಬುಲೆನ್ಸ್‌ಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಕರ್ನಾಟಕದಲ್ಲಿ ವರುನಾಘಾತದಿಂದ ಪ್ರವಾಹ ಸನ್ನಿವೇಶ ಉಂಟಾಗಿದೆ. ಪ್ರವಾಹದಿಂದಾಗಿ ರಾಜ್ಯದಲ್ಲಿ ಬುಧವಾರ ಸಾವಿನ ಸಂಖ್ಯೆ 61 ಕ್ಕೆ ಏರಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮಾನಿಟರಿಂಗ್ ಸೆಂಟರ್ (ಕೆಎಸ್‌ಎನ್‌ಡಿಎಂಸಿ) ಬಿಡುಗಡೆ ಮಾಡಿದ ಮಾಹಿತಿಯಿಂದ ತಿಳಿದುಬಂದಿದೆ.
22 ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ, ಬೆಳಗಾವಿಯಲ್ಲಿ ಗರಿಷ್ಠ ಸಾವು ಸಂಭವಿಸಿವೆ, ಅಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಮಾಹಿತಿಯ ಪ್ರಕಾರ, ಕನಿಷ್ಠ 14 ಜನರು ಕಾಣೆಯಾಗಿದ್ದಾರೆ.
ರಾಜ್ಯದಲ್ಲಿ ನಿಯೋಜಿಸಲಾದ ಪಾರುಗಾಣಿಕಾ ತಂಡಗಳು ಈವರೆಗೆ ಏಳು ಲಕ್ಷ ಜನರನ್ನು ರಕ್ಷಿಸಿವೆ ಎಂದು ವರದಿ ತಿಳಿಸಿದೆ. ಪ್ರಸ್ತುತ 3, 75,663 ಜನರಿಗೆ 1, 096 ಕ್ಕೂ ಹೆಚ್ಚು ಪರಿಹಾರ ಶಿಬಿರಗಳಲ್ಲಿ ವಸತಿ ಕಲ್ಪಿಸಲಾಗಿದೆ.