19 ವರ್ಷದ ಯುವತಿಯ ಹೊಟ್ಟೆಯಲ್ಲಿ 7.5 ಕೆಜಿ ಗಡ್ಡೆ; ಕ್ಯಾನ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ!
Successful surgery: 19 ವರ್ಷ ವಯಸ್ಸಿನ ಯುವತಿಯ ಹೊಟ್ಟೆಯಲ್ಲಿದ್ದ 7.5 ಕೆಜಿ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಕ್ಯಾನ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ಬೆಂಗಳೂರು: ಬೆಂಗಳೂರು ನಗರದ ಯುವತಿಯ ಹೊಟ್ಟೆಯ ಸುತ್ತಳತೆಯ ತೂಕ ಕಳೆದ ಒಂದೂವರೆ ವರ್ಷಗಳಿಂದ ನಿರಂತರವಾಗಿ ಹೆಚ್ಚಳವಾಗಿದೆ.
ಯುವತಿಯ ಹೊಟ್ಟೆ ಸುತ್ತಳತೆ ನಿರಂತರವಾಗಿ ಹೆಚ್ಚಳವಾಗಿದ್ದರಿಂದ ಯುವತಿಯ ಪೋಷಕರು ಆತಂಕಕ್ಕೆ ಒಳಗಾಗಿ ವಿದ್ಯಾರಣ್ಯಪುರ ಸಮೀಪವಿರುವ ಕ್ಯಾನ್ಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತಪಾಸಣೆಗೆಂದು ಕರೆತಂದಿದ್ದರು.
ಇದನ್ನೂ ಓದಿ-ತಾಯಿ ಅರಸುತ್ತಾ ನಾಡಿಗೆ ಬಂದ ಆನೆಮರಿ!!!
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಚೈತ್ರಾ ಎಸ್.ನಿರಂತರ ಅವರು ತಪಾಸಣೆ ನಡೆಸಿ ಪರೀಕ್ಷೆಗೊಳಪಡಿಸಿದಾಗ ಗರ್ಭಕೋಶದಲ್ಲಿ 7.5 ಕೆಜಿಯಷ್ಟು ಗಡ್ಡೆ ಇರುವುದು ಪತ್ತೆಯಾಗಿದೆ.
ಇದನ್ನೂ ಓದಿ-ಶಿವರಾತ್ರಿ ಜಾತ್ರೆ: ಮಾದಪ್ಪನ ಬೆಟ್ಟದಲ್ಲಿ ಬರೋಬ್ಬರಿ 4 ಲಕ್ಷ ಲಾಡು ತಯಾರಿ
ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರತೆಗೆಯುವಲ್ಲಿ ಡಾ. ಚೈತ್ರಾ ಎಸ್. ನಿರಂತರ, ಡಾ ನಂದ ಕುಮಾರ್ ಮತ್ತು ತಂಡ ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಯುವತಿ ಆರೋಗ್ಯವಾಗಿದ್ದು ಪೋಷಕರ ಆತಂಕ ದೂರವಾಗಿದೆ.
19 ವರ್ಷದ ಯುವತಿಯಲ್ಲಿ 7.5 ಕೆಜಿ ತೂಕದ ಗಡ್ಡೆ ಇರುವುದು ತುಂಬಾ ವಿರಳ. ಶಸ್ತ್ರಚಿಕಿತ್ಸೆ ಮಾಡುವುದು ಸ್ವಲ್ಪ ಸವಾಲಿನ ಕೆಲಸವೇ, ಆದರೂ ನಮ್ಮ ವೈದ್ಯಕೀಯ ತಂಡದ ನೆರವಿನಿಂದ ಗಡ್ಡೆಯನ್ನು ಹೊರೆತೆಗೆಯುವಲ್ಲಿ ಯಶಸ್ವಿಯಾಗಿದ್ದೇವೆ. ಯುವತಿ ಆರೋಗ್ಯವಾಗಿದ್ದಾರೆ.
-ಡಾ. ಚೈತ್ರಾ ಎಸ್. ನಿರಂತರ (ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.