ಅಯ್ಯೋ ವಿಧಿಯೇ: ತಾಯಿ ಮೃತಪಟ್ಟಿರೋದು ಗೊತ್ತಾಗದೆ ಮೃತದೇಹದ ಜೊತೆ ಎರಡು ದಿನ ಕಳೆದ ಬಾಲಕ..
40 ವರ್ಷದ ಅಣ್ಣಮ್ಮ ಎಂಬುವರು ಮಲಗಿರುವಾಗಲೇ ಉಸಿರು ಚೆಲ್ಲಿದ್ದರು. ಆದರೆ ಇದನ್ನ ಅರಿಯದ ಮಗ ತನ್ನ ತಾಯಿ ಮಲಗಿದ್ದಾರೆ ಎಂದು ಭಾವಿಸಿ ಮನೆಯಂಗಳದಲ್ಲಿ ಆಟವಾಡಿಕೊಂಡು ಎರಡು ದಿನಗಳ ಕಾಲ ಅಣ್ಣಮ್ಮನ ಮೃತದೇಹದ ಪಕ್ಕದಲ್ಲೇ ನಿದ್ರಿಸಿ ಸಮಯ ಕಳೆದಿದ್ದಾನೆ.
ಬೆಂಗಳೂರು: ತನ್ನ ತಾಯಿ ಮೃತಪಟ್ಟಿದ್ದಾಳೆ ಎಂಬುದನ್ನ ಅರಿಯದ 11 ವರ್ಷದ ಬಾಲಕ ಮೃತದೇಹದೊಂದಿಗೆ ಎರಡು ದಿನಗಳ ಕಾಲ ಕಳೆದಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
40 ವರ್ಷದ ಅಣ್ಣಮ್ಮ ಎಂಬುವರು ಮಲಗಿರುವಾಗಲೇ ಉಸಿರು ಚೆಲ್ಲಿದ್ದರು. ಆದರೆ ಇದನ್ನ ಅರಿಯದ ಮಗ ತನ್ನ ತಾಯಿ ಮಲಗಿದ್ದಾರೆ ಎಂದು ಭಾವಿಸಿ ಮನೆಯಂಗಳದಲ್ಲಿ ಆಟವಾಡಿಕೊಂಡು ಎರಡು ದಿನಗಳ ಕಾಲ ಅಣ್ಣಮ್ಮನ ಮೃತದೇಹದ ಪಕ್ಕದಲ್ಲೇ ನಿದ್ರಿಸಿ ಸಮಯ ಕಳೆದಿದ್ದಾನೆ.
ಇದನ್ನೂ ಓದಿ- ʼಲವ್ʼ ಮಾಡಿ ʼಮದುವೆ ಬೇಡʼ ಅಂದ ಪ್ರೇಯಸಿಯನ್ನ ʼಚುಚ್ಚಿ ಚುಚ್ಚಿ ಕೊಂದʼ ಪಾಗಲ್ ಪ್ರೇಮಿ..!
ಗಂಗಾನಗರದಲ್ಲಿ ಅಣ್ಣಮ್ಮ ಕುಟುಂಬದ ಜೊತೆ ವಾಸವಾಗಿದ್ದಳು. ಕಳೆದ ವರ್ಷ ಈಕೆಯ ಗಂಡ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದರು. ಜೀವನ ನಡೆಸಲು ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಳು ಅಣ್ಣಮ್ಮ. ಆದರೆ ಈಕೆಗೂ ಲೋಬಿಪಿ, ಶುಗರ್ ಇದ್ದ ಕಾರಣ ಫೆಬ್ರವರಿ 25 ರಂದು ಮನೆಯಲ್ಲಿ ಅಣ್ಣಮ್ಮ ಸಾವನ್ನಪ್ಪಿದ್ದಳು.
ತನ್ನ ತಾಯಿ ಇಹಲೋಕ ತ್ಯಜಿಸಿರುವ ಕಿಂಚಿತ್ತು ಸುಳಿವು ಸಹ ಬಾಲಕನಿಗೆ ಇರಲಿಲ್ಲ. ಎರಡು ದಿನಗಳ ಕಾಲ ಮೃತದೇಹದ ಜೊತೆ ಸಮಯ ಕಳೆದ ಬಾಲಕ, ಅಕ್ಕಪಕ್ಕದ ಮನೆಯವರ ಬಳಿ ಹೋಗಿ ಅಮ್ಮ ಅಡುಗೆ ಮಾಡಿಲ್ಲ ಎಂದು ಹೇಳಿ ಅವರ ಬಳಿಯೇ ಊಟ ಮಾಡಿ ಕಾಲ ಕಳೆದಿದ್ದಾನೆ.
ಇದನ್ನೂ ಓದಿ- ಕ್ಷುಲ್ಲಕ ಕಾರಣಕ್ಕೆ ಬೇಕರಿ ಗ್ಲಾಸ್ ಒಡೆದು ಪುಂಡನ ಅಟ್ಟಹಾಸ..!
ಫೆಬ್ರವರಿ 28 ರಂದು ಅಣ್ಣಮ್ಮ ಮೃತದೇಹ ದುವಾರ್ಸನೆ ಬರಲಾರಂಭಿಸಿತ್ತು. ಈ ಬಗ್ಗೆ ಬಾಲಕ ಅಕ್ಕ-ಪಕ್ಕದ ಮನೆಯವರಿಗೆ ತಿಳಿಸಿದ್ದ. ಪರಿಶೀಲನೆ ನಡೆಸಿದಾಗ ಅಣ್ಣಮ್ಮ ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದೆ. ಆರ್.ಟಿ.ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.