ಬೆಂಗಳೂರು: ಇಲ್ಲೊಬ್ಬವ್ಯಕ್ತಿ  ಸದಿಲ್ಲದೇ ಹಸಿದ ಹೊಟ್ಟೆ (Hungry) ತುಂಬಿಸುವ‌ ಕೆಲಸ ಮಾಡ್ತಿದ್ದಾರೆ. ಪ್ರತಿನಿತ್ಯ 200 ರಿಂದ 300 ಜನ ನಿರಾಶ್ರಿತರಿಗೆ ಉಚಿತ ಊಟ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಎನ್ಇಪಿ ಜಾರಿ ಹೊಣೆ: ಹೊಸ ಹುದ್ದೆ ಸೃಷ್ಟಿಗೆ ನಿರ್ದೇಶನ


ಸರತಿ ಸಾಲಿನಲ್ಲಿ ನಿಂತಿರುವ ನೂರಾರು ಬಡ ಜನರು (Poor People). ಊಟಕ್ಕಾಗಿ ಕಾದು ಕುಳಿತ ನಿರಾಶ್ರಿತರು ಒಂದೆಡೆಯಾದರೆ, ಮತ್ತೊಂದೆಡೆ ಹಸಿದು ಬಂದ ಹೊಟ್ಟೆಗೆ ಅನ್ನ ನೀಡುತ್ತಿರುವ ದೃಶ್ಯ. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರಿನ ನಿಮ್ಹಾನ್ಸ್ ಹಾಗೂ ರಾಜೀವ್ ಗಾಂಧಿ ಆಸ್ಪತ್ರೆಯ ಮುಂಭಾಗ.  


ಇವರ ಹೆಸರು ಗುಲಾಬ್. ಕಳೆದ ಆರೇಳು ವರ್ಷದಿಂದ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಕೊರೊನಾ (Corona) ಕಾಲದಲ್ಲಿ ಕೆಲಸವಿಲ್ಲದೇ ಬಸವಳಿದಿದ್ದ ಜನರ ಹಸಿವು ನೀಗಿಸಿದವರು ಇವರು. 


[[{"fid":"228407","view_mode":"default","fields":{"format":"default","field_file_image_alt_text[und][0][value]":"A Man Feeds hundred of people in Bangalore ","field_file_image_title_text[und][0][value]":"ಹಸಿದವರ ಪಾಲಿನ ಅನ್ನದಾತ "},"type":"media","field_deltas":{"1":{"format":"default","field_file_image_alt_text[und][0][value]":"A Man Feeds hundred of people in Bangalore ","field_file_image_title_text[und][0][value]":"ಹಸಿದವರ ಪಾಲಿನ ಅನ್ನದಾತ "}},"link_text":false,"attributes":{"alt":"A Man Feeds hundred of people in Bangalore ","title":"ಹಸಿದವರ ಪಾಲಿನ ಅನ್ನದಾತ ","class":"media-element file-default","data-delta":"1"}}]]


ಮೂಲತಃ ಬೆಂಗಳೂರಿನವರೇ ಆಗಿರುವ ಗುಲಾಬ್, ನಿಮ್ಹಾನ್ಸ್ ಆಸ್ಪತ್ರೆ (Nimhans Hospital) ಬಳಿ ಪ್ರತಿನಿತ್ಯ 12:30ಕ್ಕೆ ಉಚಿತ ಊಟ ನೀಡುತ್ತಾರೆ. "ನಾನು ಹಲವಾರು ವರ್ಷಗಳ ಕಾಲ ಹಸಿವಿನಿಂದ‌ ಬಳಲಿದ್ದೇನೆ.‌ ನನ್ನದೊಂದು ತೀರಾ ಬಡ ಕುಟುಂಬ, ಹಸಿವಿನ ಬೆಲೆ‌‌ ಏನೆಂದು ನನಗೆ ಗೊತ್ತು.‌ ಈ ಕಾರಣದಿಂದಾಗಿ ರೋಟಿ ಚಾರಿಟಿ ಟ್ರಸ್ಟ್ ಸ್ಥಾಪಿಸಿದ್ದೇನೆ. ಇದರಡಿ ದಾನಿಗಳ ಸಹಾಯದಿಂದ ಈ ಸೇವೆ ನಡೆಸುತ್ತಿದ್ದೇನೆ" ಎಂದು ಗುಲಾಬ್ ತಿಳಿಸುತ್ತಾರೆ.


ಇದನ್ನೂ ಓದಿ:  BBMP ಚುನಾವಣೆ ಮೇಲೆ ‘ಕೇಸರಿ ಪಡೆ’ ಕಣ್ಣು: ಚುರುಕಾಗಿರುವಂತೆ ಕಾರ್ಯಕರ್ತರಿಗೆ ಬಿಜೆಪಿ ಕರೆ


"ನಾವು ನೀಡುವ ಊಟದ ಮಾಹಿತಿ ಇದ್ದವರು ಸಮಯಕ್ಕೆ ಸರಿಯಾಗಿ ಬಂದು ಊಟವನ್ನ ಪಡೆಯುತ್ತಾರೆ.‌ ಬಡವರು, ನಿರಾಶ್ರಿತರು, ಆಸ್ಪತ್ರೆಗಳಿಗೆ ಬರುವ ಕುಟುಂಬಗಳು ನಾವು ನೀಡುವ ಊಟವನ್ನ ಸೇವಿಸುತ್ತಾರೆ" ಎಂದು ಹೇಳುತ್ತಾರೆ ಗುಲಾಬ್.


ಪ್ರತಿನಿತ್ಯ  ನೂರಾರು ಜನರ ಹಸಿವು ನೀಗಿಸುವ ಗುಲಾಬ್ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.