ಬಾಗಲಕೋಟೆ: ಹದ್ದು ಜಾತಿಯ ಅಪರೂಪದ  ಮೀನೊಂದು ಮೀನುಗಾರರ ಗಾಳಕ್ಕೆ ಬಿದ್ದ ಘಟನೆ ಬಾಗಲಕೋಟೆ ಜಿಲ್ಲೆಯ  ಗುಳೇದಗುಡ್ಡ ತಾಲೂಕಿನ ಮಲಪ್ರಭಾ ನದಿಯಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಮೀನುಗಾರರ ಗಾಳಕ್ಕೆ ಬಿದ್ದ ಮೀನನ್ನು ಗುಳೇದಗುಡ್ಡದ ಮಾರುಕಟ್ಟೆಗೆ ತರುತ್ತಿದ್ದಂತೆ ಈ ಅಪರೂಪದ ಹದ್ದು ಜಾತಿಯ 50 ಕೆ.ಜಿ ತೂಕದ ಮೀನನ್ನು ನೋಡಿ ಗ್ರಾಹಕರು ಹಾಗೂ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.


ಇದನ್ನೂ ಓದಿ: ವಿದ್ಯುತ್‌ ತಿದ್ದುಪಡಿ ಮಸೂದೆ ತರಾತುರಿಯಲ್ಲಿ ಬೇಡ: ರೈತ ಸಮುದಾಯ ಕಳವಳ


ಗುಳೇದಗುಡ್ಡ ಪಟ್ಟಣದ ಪರಸಪ್ಪ ಭೋವಿ. ಕುಬ್ಬಣ್ಣ ಚೌಹಾನ್. ಪರಸಪ್ಪ ರಾಥೋಡ್. ಆನಂದ್ ಚೌಹಾಣ್. ಮುತ್ತಣ್ಣ ಚೌಹಾಣ್. ನೀಲಪ್ಪ ಚೌಹಾನ್. ಕವಿ ರಾಥೋಡ್. ಇವರು ಮಲಪ್ರಭಾ ನದಿಯಲ್ಲಿ ಮೀನು ಹಿಡಿಯುವ ವೇಳೆಯಲ್ಲಿ ಅಪರೂಪದ ಹದ್ದು ಜಾತಿಯ ಮೀನು ಗಾಳಕ್ಕೆ ಬಿದ್ದು ಮೀನುಗಾರರಲ್ಲಿ ಬಹಳಷ್ಟು ಸಂಭ್ರಮ ಮೂಡಿದೆ. ಗುಳೇದಗುಡ್ಡ ಪಟ್ಟಣದ ಮೀನುಗಾರರು ನಿತ್ಯ ಕಾಯಕದಂತೆ ಮಲಪ್ರಭಾ ನದಿಯಲ್ಲಿ ಗಾಳ ಹಾಕಿ ಮೀನುಗಳನ್ನು ಸೆರೆಹಿಡಿಯುತ್ತಿದ್ದರು ಈ ಸಂದರ್ಭದಲ್ಲಿ ಮೀನುಗಾರರು ನದಿಯಲ್ಲಿ ಗಾಳ ಬೀಸಿದಾಗ ಈ ಅಪರೂಪದ 50 ಕೆಜಿ ತೂಕದ 10 ಜಾತಿ ಮೀನು ಸಿಕ್ಕಿದೆ.


ಇದನ್ನೂ ಓದಿ: ಕಾಲುಸಂಕ ದಾಟುತ್ತಿದ್ದ ವೇಳೆ ಕಾಲುಜಾರಿ ಬಿದ್ದು ನೀರುಪಾಲಾಗಿದ್ದ ವ್ಯಕ್ತಿ: ಇಂದು ಮೃತದೇಹ ಪತ್ತೆ!


ಈ ಸಂದರ್ಭದಲ್ಲಿ 50 ಕೆಜಿ ತೂಕದ ಹದ್ದು ಜಾತಿಯ ಅಪರೂಪದ ಮೀನು ಬೇಟೆಯಾಡಿರುವುದು ವಿಶೇಷವಾಗಿದೆ ಈ ಮೀನು ನೀರು ಇಲ್ಲದೆ ನಾಲ್ಕೈದು ದಿನಗಳಿಂದ ಬದುಕಬಹುದಾಗಿದೆ ಎನ್ನುತ್ತಾರೆ ಪರಸಪ್ಪ ಭೋವಿ ಹಾಗೂ ಇತರೆ ಮೀನುಗಾರರು.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.