ಬೆಳಗಾವಿ: ಬೆಳಗಾವಿ ಜಿಲ್ಲೆಯ ಬಾಗೇವಾಡಿ ಹತ್ತಿರದ ಗದ್ದಿನಕರಿವಿನಕೊಪ್ಪ ಗ್ರಾಮದ ಹೊಲದಲ್ಲಿ ವಿಚಿತ್ರವಾದ  ಬಲೂನ ಬಂದು ಬಿದ್ದಿದ್ದು ಇದೀಗ  ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.


COMMERCIAL BREAK
SCROLL TO CONTINUE READING

ಈ ಬಲೂನು  ಎಲ್ಲಿಂದ ಬಂದಿದೆ. ಹೇಗೆ ಬಂತು ಯಾವಾಗ ಹಾರಿ ಬಂದಿದೆ ಎಂದು ಗೊತ್ತಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ಈ ಬಲೂನಲ್ಲಿ ಕೆಲ ಎಲೆಕ್ಟ್ರಿಕ್ ಮಷೀನ್ ಗಳು ಪತ್ತೆಯಾಗಿದ್ದು ಸಾಕಷ್ಟು ಅನುಮಾನಗಳಿಗೆ ಗ್ರಾಸವಾಗಿದ್ದು, ಚರ್ಚೆಗಳನ್ನು ಹುಟ್ಟು ಹಾಕಿದೆ. 


ಇದನ್ನೂ ಓದಿ- ಮಸೀದಿ ಮುಂದೆ ಮಾರಮ್ಮನ ಕೊಂಡೋತ್ಸವ... ತಮಿಳುನಾಡಿನ ಕನ್ನಡಿಗರ ಭಾವೈಕ್ಯತೆ


ಇನ್ನೊಂದೆಡೆ ಈ ವಿಚಿತ್ರ ಎಲೆಕ್ಟ್ರಿಕ್ ಬಲೂನ್ ಕಂಡು ಆತಂಕದಲ್ಲಿರುವ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.


ಇದನ್ನೂ ಓದಿ- Karnataka 2nd PUC Exam: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ


ಸ್ಥಳಕ್ಕೆ ಧಾವಿಸಿದ ಬೈಲಹೊಂಗಲ ಪೋಲಿಸರು ಬಲೂನನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಯುಎಸ್ಎಯಲ್ಲಿ ಚೈನೀಸ್ ಸ್ಪೈ ಬಲೂನ್ ಸದ್ದು ಮಾಡಿತ್ತು. ಅದೆ ಥರ ಇದು ಕೂಡ ಇರಬಹುದೆಂಬ ಶಂಕೆ ಗ್ರಾಮಸ್ಥರಲ್ಲಿ ಮೂಡಿದೆ. ಆದರೆ ಅದು ಏನೆ ಇರಲಿ ಪೊಲೀಸರು‌ ಈ ಬಗ್ಗೆ ಪರಿಶೀಲನೆ ನಡಿಸಿದ್ದು, ಪೊಲೀಸ್ ವರದಿ ಬಳಿಕವೇ ಈ ಸಸ್ಪೇನ್ಸ್ ಬಲೂನ್ ಮಾಹಿತಿ ತಿಳಿದುಬರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.