ಬೆಂಗಳೂರು: ಕರ್ನಾಟಕ ರತ್ನ ದಿ ಡಾ. ಪುನೀತ್ ರಾಜ್‌ಕುಮಾರ್‌ ಅವರ ಸ್ಮರಣೆಗಾಗಿ ಹಾವೇರಿ ಜಿಲ್ಲೆಯ ಯಲಗಚ್ಚ ಗ್ರಾಮದಲ್ಲಿ ದೇವಾಲಯ ಮತ್ತು ಪುತ್ಥಳಿಯನ್ನು  ನೂತನವಾಗಿ ನಿರ್ಮಿಸಲಾಗಿದೆ. ಇದರ ಅನಾವರಣ ಕಾರ್ಯಕ್ರಮ ಇದೇ ಸೆಪ್ಟೆಂಬರ್ 26ರಂದು ಮಧ್ಯಾಹ್ನ 1 ಕ್ಕೆ ನಡೆಯಲಿದೆ ಎಂದು ಅಪ್ಪು ಅವರ ಅಪ್ಪಟ ಅಭಿಮಾನಿ ಆಯೋಜಕ ಪ್ರಕಾಶ ಮೊರಬದ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ಕ್ಯಾಮೆರಾ ಫೋನ್‌ ಖರೀದಿಸಬೇಕೆಂದಿದ್ದೀರಾ?


ಪುನೀತ್ ರಾಜ್‌ಕುಮಾರ್‌ ಅವರ ಪುತ್ಥಳಿಯನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಲೋಕರ್ಪಣೆ ಮಾಡಲಿದ್ದಾರೆ ಮಾಹಿತಿ ನೀಡಿದ್ದಾರೆ.


ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ ಮೊರಬದ ಅವರು, "ಅಪ್ಪು ಅವರ ಹೆಸರು ಚಿರಸ್ಥಾಯಿಯಾಗಿಸಲು ಯಲಗಚ್ಚ ಗ್ರಾಮದಲ್ಲಿ 9 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ದೇವಾಲಯ ನಿರ್ಮಿಸಿ, ಅಪ್ಪು ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಸೆಪ್ಟೆಂಬರ್‌ 26ರಂದು ಬೆಳಗ್ಗೆ 10ಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಅವರು ಆಗಮಿಸಲಿದ್ದು, ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸ್ವಾಗತಿಸಿ, ಯಲಗಚ್ಚ ಗ್ರಾಮದವರೆಗೆ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಾಗುತ್ತದೆ" ಎಂದಿದ್ದಾರೆ.


ಮಧ್ಯಾಹ್ನ 12ಕ್ಕೆ ಗ್ರಾಮದೇವತೆ ದರ್ಶನ, ಮಹಿಳೆಯರ ಪೂರ್ಣ ಕುಂಭ ಮೆರವಣಿಗೆ ನಡೆಯಲಿದೆ. ಬಳಿಕ ಅಶ್ವಿನಿ ಅವರು ದೇವಾಲಯ ಮತ್ತು ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.


ಇದನ್ನೂ ಓದಿ: 147 ವರ್ಷಗಳಲ್ಲಿ ಇದೇ ಮೊದಲು... ವಿಶ್ವದಾಖಲೆ ಬರೆದೇಬಿಟ್ರು ಭಾರತದ ಸ್ಪಿನ್‌ ಮಾಂತ್ರಿಕ ಅಶ್ವಿನ್


ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಂಸದ ಬಸವರಾಜ ಬೊಮ್ಮಾಯಿ, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಬಸವರಾಜ ಶಿವಣ್ಣನವರ ಸೇರಿದಂತೆ ವಿವಿಧ ಮಠಾಧೀಶರು, ಅನೇಕ ಜನಪ್ರತಿನಿಧಿಗಳು, ನಟ ನಟಿಯರು, ಕಲಾವಿದರು, ಸಾಹಿತಿಗಳು, ಉದ್ಯಮಿಗಳು, ಅಭಿಮಾನಿ ಆಗಮಿಸಲಿದ್ದಾರೆ. ಸುಮಾರು 25 ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಭಾಗವಹಿಸುವ ನಿರೀಕ್ಷೆ ಇದೆ. ಇದೆ ವೇಳೆ ಅಪ್ಪು ಅಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಯಲಿದೆ. ಮಕ್ಕಳ ಮನರಂಜನಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮ, ಭಾಷಣ ಸ್ಪರ್ಧೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ