ಧಾರವಾಡ: ಸಂಗೀತ, ಕಲೆ ಮುಂತಾದ ಸೃಜನಾತ್ಮಕ ಪ್ರಕಾರಗಳನ್ನು ತಲೆಮಾರುಗಳಿಗೆ, ಹೊಸಪೀಳಿಗೆಗೆ ದಾಟಿಸುವುದು, ಜಾಗತೀಕರಣದ ಈ ಯಾಂತ್ರಿಕ ಕಾಲಘಟ್ಟದಲ್ಲಿ  ಸವಾಲಿನ ಕೆಲಸ. ಅಜ್ಜ,ಮಗ ಹಾಗೂ ಮೊಮ್ಮಗ ತಾವು ಬದುಕುತ್ತಿರುವ ಹಾಗೂ ಕಂಡುಂಡ ಸಮಕಾಲೀನ ಜಗತ್ತನ್ನು ತಮ್ಮ ಕುಂಚದಲ್ಲಿ ಅರಳಿಸಿ, ಸೃಷ್ಟಿಸಿರುವ ಮೂರು ತಲೆಮಾರುಗಳ ವೈವಿಧ್ಯಮಯ ದೃಶ್ಯಗಳ ಪ್ರದರ್ಶನ ಇಲ್ಲಿನ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಯಶಸ್ವಿಯಾಗಿ ಜರುಗಿತು.


COMMERCIAL BREAK
SCROLL TO CONTINUE READING

ಬಾಗಲಕೋಟ ಜಿಲ್ಲೆ ಅರಕೇರಿ ಗ್ರಾಮದ 82 ವರ್ಷದ ಹಿರಿಯ ಚೇತನ ವಿಠ್ಠಲಪ್ಪ ಹೂಗಾರ ,ಅವರ ಪುತ್ರ ಬೆಂಗಳೂರಿನ ಕೆನ್ ಸ್ಕೂಲ್ ಆಫ್ ಆರ್ಟ್ ನ ಡಿಎಫ್‍ಎ ಪದವೀಧರ ಶಿವಲಿಂಗಪ್ಪ ಹೂಗಾರ ಹಾಗೂ ಮೊಮ್ಮಗ ಕೃಷ್ಣ ಎಸ್.ಹೂಗಾರ ಅವರು ತಮ್ಮ ಕಲಾಕೃತಿಗಳನ್ನು ಜೂನ್ 14 ರಿಂದ 16 ರವರೆಗೆ ಇಲ್ಲಿ ಪ್ರದರ್ಶಿಸಿದರು.


ಇದನ್ನೂ ಓದಿ : ದೇಶದೆಲ್ಲೆಡೆ ಹಿಂಸಾಚಾರಕ್ಕೆ ಕಾರಣಾವಾಯ್ತು ಅಗ್ನಿಪಥ್: ಅಲರ್ಟ್ ಆದ್ರು ಕರ್ನಾಟಕ ರೈಲ್ವೇ ಪೊಲೀಸರು


ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಹೆಸರಾಂತ ಚಲನಚಿತ್ರ ನಟ ಸುರೇಶ್ ಹೆಬ್ಳೀಕರ್, ಸಾಹಿತಿಗಳಾದ ಬಸವರಾಜ ಸೂಳಿಭಾವಿ, ಟಿ.ಎಸ್. ಗೊರವರ, ಡಾ.ಆರ್.ಎಸ್. ಪಾಟೀಲ ಮೊದಲಾದವರು ಭೇಟಿ ನೀಡಿ ಕಲಾಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯರಾದ ವಿಠ್ಠಲಪ್ಪ ಹೂಗಾರ ಅವರ ಕೃತಿಗಳಲ್ಲಿ ಜಾನಪದೀಯ ಸತ್ವಗಳು, ಪ್ರಾಣಿ, ವೃಕ್ಷಗಳ ರೇಖಾಚಿತ್ರಗಳು, ಒಕ್ಕಲುತನದ ಎತ್ತು, ಹೊಲ ಮತ್ತಿತರ ನೆಲಮೂಲದ ಬದುಕು ಸಹಜವಾಗಿ ಅನಾವರಣಗೊಂಡಿರುವುದು ವಿಶೇಷವಾಗಿದೆ.


ಇದನ್ನೂ ಓದಿ : 'ನಿಮಗೆ ಪ್ರತಿವರ್ಷ ಎರಡು ಕೋಟಿ ನಿರುದ್ಯೋಗಿಗಳನ್ನು ಸೃಷ್ಟಿಸುವ ಗುಪ್ತಾ ಅಜೆಂಡಾ ಏನಾದರೂ ಇದೆಯೇ?'


ಎರಡನೇ ತಲೆಮಾರಿನ ಎಸ್.ವಿ. ಹೂಗಾರ ಕಲೆಯನ್ನು ಶಾಸ್ತ್ರೀಯವಾಗಿ ಅಭ್ಯಸಿಸುತ್ತಿರುವವರು. ದೃಶ್ಯಕಲಾ ಸೃಷ್ಟಿಯ ಸೂಕ್ಷ್ಮಗಳು, ವೈವಿಧ್ಯಮಯ ಗ್ರಹಿಕೆಗಳು ಇವರ ಕೃತಿಗಳಲ್ಲಿವೆ.ಮೂರನೇ ತಲೆಮಾರಿನ 15 ವರ್ಷದ ಬಾಲಕ ಕೃಷ್ಣ ಎಸ್. ಹೂಗಾರ ಅವರ ಕೃತಿಗಳಲ್ಲಿ ಬಾಲ್ಯದ ಮುಗ್ಧತೆ ದಾಟಿ ಸುತ್ತಲಿನ ಪರಿಸರ ಮತ್ತು ಸಮಾಜದ ಕೌತುಕದತ್ತ ಕಣ್ಣು ಹಾಯಿಸುವ ತವಕಗಳು ದಾಖಲಾಗಿವೆ. ಮೂರು ತಲೆಮಾರುಗಳು ಏಕಕಾಲದಲ್ಲಿ ಕಲಾಪ್ರದರ್ಶನ ನೀಡಿದ್ದು, ವಿಶೇಷವಾಗಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.