ಶಿವಮೊಗ್ಗ: ಶಿವಮೊಗ್ಗದ ಬಿಜೆಪಿ ಮುಖಂಡನೊಬ್ಬನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪದ ಅಡಿ ಕೇಸ್‌ ದಾಖಲಾಗಿದ್ದು ಆತನನ್ನು ಅರೆಸ್ಟ್‌ ಮಾಡಲಾಗಿದೆ. ಎಫ್‌ಐಆರ್‌ ನಲ್ಲಿರುವ ಆರೋಪವನ್ನು ಗಮನಿಸುವುದಾದರೆ, IPC 1860 (U/s-354C,376(2)(n),506,34); INFORMATION TECHNOLOGY ACT 2000 (U/s-66(E))  ಅಡಿಯಲ್ಲಿ ಈ ಕೇಸ್‌ ದಾಖಲಾಗಿದೆ. 


COMMERCIAL BREAK
SCROLL TO CONTINUE READING

ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಗಳು ರಾಜ್ಯ ರಾಜಕೀಯವಲಯದಲ್ಲಿ ಸಾಕಷ್ಟು ಮುಜುಗರಕ್ಕೆ ತಂದಿವೆ..ಇದೀಗ ಪ್ರಜ್ಚಲ್ ಸೂರಜ್ ಪ್ರಕರಣಗಳು ಮಾಸುವ ಮುನ್ನ ಮಲೆನಾಡು ಶಿವಮೊಗ್ಗ ಜಿಲ್ಲೆ ಈ ಸಂಬಂಧ  ಶಿವಮೊಗ್ಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸಾಗರ ತಾಲ್ಲೂಕು ನಿವಾಸಿ ಅರುಣ್ ಕುಗ್ವೆಯನ್ನ ಬಂಧಿಸಲಾಗಿದೆ.ಅರುಣ್ ಕುಗ್ವೆ ಶಿವಮೊಗ್ಗ ಜಿಲ್ಲಾ ಬಿಜೆಪಿಯಲ್ಲಿ ಸಕ್ರೀಯವಾಗಿರುವ ಯುವ ರಾಜಕಾರಣಿ. ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈತನ ಸಹೋದರನ ವಿರುದ್ಧವೂ ಸಹ ಕೇಸ್‌ ದಾಖಲಿಸಲಾಗಿದೆ. 


ಇದನ್ನೂ ಓದಿ-ಉದ್ಯೋಗ ಕ್ರಾಂತಿಗೆ ಹೊಸ ಮುನ್ನುಡಿ: ಐಟಿಐ, ಡಿಪ್ಲೊಮೊ ಕೋರ್ಸ್ ಪೂರ್ಣಗೊಳಿಸಿದವರಿಗೆ ವಿದೇಶದಲ್ಲಿ ಉದ್ಯೋಗ


ಶಿವಮೊಗ್ಗ ಜಿಲ್ಲೆಯ ನಿವಾಸಿಯೊಬ್ಬಳನ್ನು ಪ್ರೀತಿಸುವುದಾಗಿ ನಂಬಿಸಿ,  ಮದುವೆಯಾಗುತ್ತೇನೆ ಎಂದು ಹೇಳಿ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ ಆರೋಪದ ಅಡಿಯಲ್ಲಿ ಕೇಸ್‌ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿ ನ್ಯಾಯಾದೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮುಖ್ಯವಾಗಿ ಇಲ್ಲಿ Voyeurism ಆಕ್ಟ್‌ (354ಸಿ ) ಅಂದರೆ ಮಹಿಳೆಯ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸುವುದು. ಹಾಗೂ 376(2) ಲಿವ್‌ ಇನ್‌ ರಿಲೇಷನ್‌ಶಿಫ್‌ ನಲ್ಲಿದ್ದು ಮದುವೆಯಾಗುವುದಿಲ್ಲ ಎಂದು ಗೊತ್ತಿದ್ದು ಮಹಿಳೆಯೊರ್ವರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪವನ್ನು ಇಲ್ಲಿ ದಾಖಲಿಸಲಾಗಿದೆ.


 ಒಟ್ಟಾರೆ ಇತ್ತೀಚಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಸಕ್ರೀಯರಾಗಿರುವ ರಾಜಕೀಯ ನಾಯಕರ ಲೈಂಗಿಕ ಪ್ರಕರಣಗಳ ಒಂದೊದಾಂಗಿ ಹೊರಬರುತ್ತಿವೆ..ಪೊಲೀಸರು ಲೈಂಗಿಕ ಪ್ರಕರಣದಲ್ಲಿ ಎಷ್ಟೇ ಪ್ರಭಾವಿ ನಾಯಕರು  ಭಾಗಿಯಾಗಿದ್ದರು ಅವರ ಹೆಡೆಮುರಿ ಕಟ್ಟಿ ಸಂತ್ರಸ್ಥರಿಗೆ ನ್ಯಾಯ ಕೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ..


ಇದನ್ನೂ ಓದಿ-ಸಾಮಾನ್ಯ ಕೈದಿಯಂತೆ ಜೈಲಲ್ಲಿ 2 ದಿನ ಕಳೆದ ಪವಿತ್ರಾ


  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ