ಬೆಂಗಳೂರು : ಆಮ್ ಆದ್ಮಿ ಪಕ್ಷ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸಮಾವೇಶ ಹೊಸ ಸಂಚಲನ ಮೂಡಿಸಿದ್ದು ರಾಷ್ಟ್ರೀಯ ಪಕ್ಷಗಳು ವಿಚಲಿತರಾಗಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ಆಮ್ ಆದ್ಮಿ ಪಕ್ಷ ತಿಳಿಸಿತು. 


COMMERCIAL BREAK
SCROLL TO CONTINUE READING

ಇನ್ನು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿರುವ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಅಥವಾ ಭಾಸ್ಕರ್ ರಾವ್ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಪ್ರೂವ್ ಆದರೆ ಜೈಲಿಗೆ ಹಾಕಲಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಉತ್ತರಿಸಿದರು. 


ಇದನ್ನೂ ಓದಿ : ಶ್ರಿಲಂಕಾಗೆ ಬಂದಿರುವ ಪರಿಸ್ಥಿತಿ ಭಾರತಕ್ಕೂ ಶೀಘ್ರದಲ್ಲಿ ಬರಲಿದೆ: ಎಚ್‌ಡಿಕೆ ಭವಿಷ್ಯ


ಬಳಿಕ ಮಾತನಾಡಿದ ಅವರು, ಆಪ್ ಸಮಾವೇಶಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಉಡಾಫೆಯಾಗಿ ಮಾತಾಡಿದ್ದಾರೆ. ದೊಡ್ಡ ಪಕ್ಷ, ಚುನಾವಣೆಗೆ ನಿಲ್ತಾರಂತೆ ನೋಡೋಣ ಅಂದಿದ್ದಾರೆ. ಆದರೆ ನಮ್ಮದು ಚಿಕ್ಕ ಪಕ್ಷ, ಈಗ ಹುಟ್ಟಿದ ಪಕ್ಷ. ಆದರೆ 7 ವರ್ಷದಲ್ಲಿ ಹೇಗೆ ಅದ್ಭುತ ಕೆಲಸ ಮಾಡ್ಬಹುದು ಅಂತ ತೋರಿಸಿದೇವೆ. 150 ವರ್ಷದ ಕಾಂಗ್ರೆಸ್ ಪಕ್ಷದಿಂದ ಅಂತೂ ಬಿಜೆಪಿಯನ್ನ ಸೋಲಿಸಲು ಸಾಧ್ಯವಿಲ್ಲ ಅಂತ ತೋರಿಸಿದಾರೆ. ಕೇವಲ ಎರಡು ಸೀಟ್ ತಗೊಂಡು ಬಿಜೆಪಿಗೆ ಇಡೀ ದೇಶದಲ್ಲಿ ಬಲ ಸಿಗಲು ಕಾಂಗ್ರೆಸ್ ಕಾರಣವಾಗಿದೆ ಎಂದರು. ಬೃಹತ್ ಪಕ್ಷ ಕಾಂಗ್ರೆಸ್ ಟೂವಿಲ್ಲರ್ ನಲ್ಲಿ ಓಡಾಡುವ ಹಾಗೆ ಕೇವಲ ಎರಡು ಸೀಟ್ ಗೆದ್ದಿದ್ದಾರೆ ಎಂದರು. 


ಬೆಂಗಳೂರು ಘಟಕದ ಅಧ್ಯಕ್ಷ ಮೋಹನ ದಾಸರಿ ಮಾತನಾಡಿ, ಸಿದ್ಧರಾಮಯ್ಯ ಅವರ, 5 ವರ್ಷದ ಆಡಳಿತದಲ್ಲಿ 0% ಕಮಿಷನ್ ಸರ್ಕಾರ ಮಾಡಲು ಸಾಧ್ಯವಾಯ್ತಾ. ಒಂದೇ ಒಂದು ಶಾಲೆ, ಒಂದೇ ಒಂದು ಆಸ್ಪತ್ರೆಯನ್ನು ಅಭಿವೃದ್ಧಿ ಮಾಡಲು ಸಾಧ್ಯವಾಯ್ತಾ. ಈತರ ಉಡಾಫೆ ಉತ್ತರ ಕೊಡೋದು ಬಿಟ್ಟು ನಿಮ್ಮ ಕೆಲಸ ನೀವ್ ಮಾಡಿ . ನಮ್ ಕೈಯಲ್ಲೇ ಮಾಡಲಾಗಿಲ್ಲ, ದೆಹಲಿಯಿಂದ ಬಂದು ಏನ್ ಮಾಡ್ತಾರೆ ಅಂತ ಕುಮಾರಸ್ವಾಮಿ ಹೇಳ್ತಾರೆ. ಕುಮಾರಸ್ವಾಮಿಗೆ ಪಕ್ಷ ಕಟ್ಟಿ ಗೊತ್ತಿದೆಯಾ, ತಂದೆ ಕಟ್ಟಿ ಕೊಟ್ಟ ಸಾಮ್ರಾಜ್ಯ ಆಳ್ತಿದಾರೆ ಅಷ್ಟೆ ಎಂದರು. 


ಆಪ್ ಪಕ್ಷದ ಸೇರ್ಪಡೆಗೆ 3 C ಮುಖ್ಯ ಭ್ರಷ್ಟಾಚಾರ ರಹಿತರಾಗಿರಬೇಕು, ಕ್ರಿಮಿನಲ್ ಕೇಸ್ ಇರಬಾರದು, ಕಮ್ಯುನಲ್ ಆಗಿರಬಾರದು. ಈ ರೀತಿ ಇರುವ ಜನರನ್ನು ಪಕ್ಷ ಸ್ವಾಗತಿಸುತ್ತದೆ. ಪ್ರಾಮಾಣಿಕರು ಬೇರೆ ಬೇರೆ ಪಕ್ಷದಲ್ಲಿದ್ದರೆ ಅವರನ್ನು ಆಮ್ ಆದ್ಮಿ ಪಕ್ಷ ಸ್ವಾಗತಿಸುತ್ತದೆ ಎಂದು ಅರವಿಂದ ಕೇಜ್ರಿವಾಲ್ ಅವರೇ ಹೇಳಿದ್ದಾರೆ ಎಂದರು.


ಇದನ್ನೂ ಓದಿ : B Sriramulu : 'ರಾಜ್ಯದಲ್ಲಿ ಆಗುತ್ತಿರುವ ಕೋಮು ಗಲಭೆಗಳಿಗೆ ಕಾಂಗ್ರೆಸ್ ನವರೇ ನೇರ ಕಾರಣ'


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.