ನವದೆಹಲಿ :  ಪಂಜಾಬ್‌ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅಧಿಕಾರ ಹಿಡಿದ ಆಮ್ ಆದ್ಮಿ ಪಕ್ಷದ (Aam Aadmi Party) ದೃಷ್ಟಿ ಈಗ ಕರ್ನಾಟಕದತ್ತ ನೆಟ್ಟಿದೆ. ಈಗಾಗಲೇ ಹಲವಾರು ನಾಯಕರನ್ನು ಭೇಟಿಯಾಗಿ ಪಕ್ಷದತ್ತ ಸೆಳೆಯಲು ಚರ್ಚೆ ನಡೆಸಿದೆ.


COMMERCIAL BREAK
SCROLL TO CONTINUE READING

ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಶ್ರಮಿಸಿ, ಸಚಿವ ಸ್ಥಾನ ಕಳೆದುಕೊಂಡು ಹಪಹಪಿಸುತ್ತಿರುವ, ಸದಾ ಒಂದಿಲ್ಲೊಂದು  ಸುದ್ದಿಯಲ್ಲಿರುವ, ವಿವಾದಗಳಿಗೆ ಎದೆಗುಂದದ, ಯಾವುದೇ ಪಕ್ಷದಲ್ಲಿದ್ದರೂ ಅಲ್ಲಿನ ವ್ಯವಸ್ಥೆ ಬಗ್ಗೆ ದನಿ ಎತ್ತುವ 'ಹಳ್ಳಿ ಹಕ್ಕಿ' ಎಂದೇ ಖ್ಯಾತರಾಗಿರುವ ಮಾಜಿ ಸಚಿವ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್  (H. Vishwanath) ಅವರನ್ನೂ ಸಹ ಆಮ್ ಆದ್ಮಿ ಪಕ್ಷಕ್ಕೆ (Aam Aadmi Party) ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು‌ ತಿಳಿದುಬಂದಿದೆ. 


ಇದನ್ನೂ ಓದಿ- ‘ದೇಶದಲ್ಲಿ ಈಗ ಕೋಮುದ್ವೇಷ ಹೆಚ್ಚುತ್ತಿದೆ, ಸಾಮರಸ್ಯ ಸಾರುವ ಅಗತ್ಯವಿದೆ’


ವಿಶ್ವನಾಥ್ - ದಿನೇಶ್ ಮೊಹನೀಯ ಭೇಟಿ:
ಗುರುವಾರ ದೆಹಲಿಯ ಕರ್ನಾಟಕ ಭವನದಲ್ಲಿ ಎಚ್.ವಿಶ್ವನಾಥ್(H. Vishwanath) ಅವರನ್ನು ಭೇಟಿ ಮಾಡಿದ ದೆಹಲಿಯ ಸಂಗಂ ವಿಹಾರ್ ಕ್ಷೇತ್ರದ ಹಿರಿಯ ಶಾಸಕ ದಿನೇಶ್ ಮೊಹನೀಯ ಅವರು 'ಹಳ್ಳಿ ಹಕ್ಕಿ'ಗೆ 'ಪೊರಕೆ ಹಿಡಿದು ರಾಜ್ಯವನ್ನು ಸ್ವಚ್ಚಗೊಳಿಸುವಂತೆ ಕೇಳಿಕೊಂಡಿದ್ದಾರೆ.


ಇದನ್ನೂ ಓದಿ- ಅಪ್ಪು ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ ರಾಹುಲ್ ಗಾಂಧಿ


ದೇಶದಲ್ಲಿ ಆಮ್ ಆದ್ಮಿ ಪಕ್ಷ (Aam Aadmi Party) ವೇಗವಾಗಿ ಬೆಳೆಯುತ್ತಿದೆ. ಇದು 'ಭವಿಷ್ಯದ ಪಕ್ಷ', ನಿಮ್ಮಂತಹ ಹಿರಿಯರು ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.