ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಕ್ಷದ ರಾಜ್ಯ ಘಟಕದ ಸಹ ಸಂಚಾಲಕ ಶಿವಕುಮಾರ್ ಚೆಂಗಲರಾಜು, ಮೇನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ 40 ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಈವರೆಗೆ 28 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಉಳಿದ ಅಭ್ಯರ್ಥಿಗಳ ಪಟ್ಟಿಯನ್ನು ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಎಎಪಿ ಬಿಡುಗಡೆ ಮಾಡಿದ 10 ಅಭ್ಯರ್ಥಿಗಳ 2ನೇ ಪಟ್ಟಿ ಈ ರೀತಿ ಇದೆ.
1. ದೇವರಹಿಪ್ಪರಗಿ -ಆಸಿಫ್ ಹರ್ಕಾಲ್
2. ರಾಮನಗರ - ಅಜಿತ್ ಬಾಬು
3. ಮಹಾದೇವಪುರ- ಬಿ.ಆರ್ ಭಾಸ್ಕರ್ ಪ್ರಸಾದ್
4. ಗಾಂಧಿನಗರ - ಇಲ್ಯಾಂಗೊವನ್
5. ಬೆಳಗಾವಿ(ಉತ್ತರ)- ಫರೂಕ್ಸಾಬ್ ನಡಾಫ್
6. ಬೆಳಗಾವಿ(ದಕ್ಷಿಣ) - ಸದಾನಂದ ಮೆಟ್ರಿ
7. ಕಲಬುರ್ಗಿ ಉತ್ತರ - ಸಂಜೀವ ಕುಮಾರ್ ಕರಿಕಲ್
8. ಚಿಕ್ಕಮಗಳೂರು - ಡಾ.ಸುಂದರ ಗೌಡ
9. ಗುಬ್ಬಿ- ಬಿ.ಪ್ರಭುಸ್ವಾಮಿ
10. ಧಾರವಾಡ(ಗ್ರಾಮಾಂತರ)- ಎಸ್.ಎಫ್.ಪಾಟೀಲ್
ಇದಕ್ಕೂ ಮುನ್ನ ಮಾರ್ಚ್ 20ರಂದು ಎಎಪಿ 18 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿತ್ತು. ಈ ಅಭ್ಯರ್ಥಿಗಳ ಹೆಸರು ಮತ್ತು ಕ್ಷೇತ್ರದ ವಿವರ ಈ ಕೆಳಗಿನಂತಿದೆ.
1. ಸರ್ವಜ್ಞ ನಗರ (ಬೆಂಗಳೂರು) - ಪೃಥ್ವಿ ರೆಡ್ಡಿ
2. ಶಾಂತಿನಗರ (ಬೆಂಗಳೂರು) - ರೇಣುಕಾ ವಿಶ್ವನಾಥ್
3. ಕೆ.ಆರ್.ಪುರ (ಬೆಂಗಳೂರು) - ಲಿಂಗರಾಜ್ ಅರಸ್
4. ಸಿ.ವಿ.ರಾಮನ್ ನಗರ (ಬೆಂಗಳೂರು) - ಮೋಹನ್ ದಾಸರಿ
5. ಬಸವನಗುಡಿ (ಬೆಂಗಳೂರು) - ಎಸ್.ಜಿ. ಸೀತಾರಾಮ್
6. ಬಿ.ಟಿ.ಎಂ.ಲೇಔಟ್ (ಬೆಂಗಳೂರು) - ಎಂ.ಸಿ.ಅಬ್ಬಾಸ್
7.ಹೆಬ್ಬಾಳ (ಬೆಂಗಳೂರು) - ರಾಘವೇಂದ್ರ ಥಾಣೆ
8. ಪುಲಿಕೇಶಿ ನಗರ (ಬೆಂಗಳೂರು) - ಆರ್. ಸಿದ್ದಗಂಗಯ್ಯ
9. ಶಿವಾಜಿನಗರ (ಬೆಂಗಳೂರು) - ಅಯೂಬ್ ಖಾನ್
10. ಬಸವ ಕಲ್ಯಾಣ (ಬೀದರ್) - ದೀಪಕ್ ಮಲಗಾರ್
11.ಚಾಮರಾಜ (ಮೈಸೂರು) - ಮಾಳವಿಕ ಗುಬ್ಬಿವಾಣಿ
12. ದಾವಣಗೆರೆ ದಕ್ಷಿಣ (ದಾವಣಗೆರೆ) - ಕೆ.ಎಲ್.ರಾಘವೇಂದ್ರ
13. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ - ಸಂತೋಷ್ ನರಗುಂದ್
14. ಕಾಗವಾಡ (ಬೆಳಗಾವಿ) - ಬಾಳಾಸಾಹೇಬ್ ರಾವ್
15. ಕಿತ್ತೂರು (ಬೆಳಗಾವಿ) - ಆನಂದ್ ಹಂಪನ್ನವರ್
16. ಶಿಕಾರಿಪುರ (ಶಿವಮೊಗ್ಗ) - ಚಂದ್ರಕಾಂತ್ ರೇವಂಕರ್
17.ಭದ್ರಾವತಿ (ಶಿವಮೊಗ್ಗ) - ರವಿ ಕುಮಾರ್
18. ಗಂಗಾವತಿ (ಕೊಪ್ಪಳ) - ಶರಣಪ್ಪ