ಬೆಂಗಳೂರು : ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ವಾಹನ ದಟ್ಟಣೆ ತಡೆಯುವ ಉದ್ದೇಶದಿಂದ ಸಾರಿಗೆ ಇಲಾಖೆ ಕೈಗೊಂಡಿರುವ ‘ವಿರಳ ಸಂಚಾರ ದಿನ’ (ಲೆಸ್‌ ಟ್ರಾಫಿಕ್‌ ಡೆ) ಅಭಿಯಾನಕ್ಕೆ ಚಿತ್ರ ನಟ ಯಶ್ ರಾಯಭಾರಿಯಾಗಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಮಾಲಿನ್ಯ ನಿಯಂತ್ರಣಕ್ಕೆ ಲೆಸ್ ಟ್ರಾಫಿಕ್ ಡೇ


ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ, ಸಾರ್ವಜನಿಕರು ಸ್ವಂತ ವಾಹನ ಬಿಟ್ಟು ಸರ್ಕಾರಿ ಸಾರಿಗೆ ವಾಹನದಲ್ಲಿ ಸಂಚರಿಸಲು ಪ್ರೇರೇಪಿಸುವ ವಿನೂತನ ಪ್ರಯತ್ನ ಇದಾಗಿ ಈ ಕಾರ್ಯಕ್ರಮಕ್ಕೆ ಚಿತ್ರ ನಟ ಯಶ್ ರಾಯಭಾರಿ ಆಗಿದ್ದಾರೆ ಎಂದು ತಿಳಿಸಿದರು. 


ಅಲ್ಲದೆ, ನಟ ಪುನೀತ್ ರಾಜ್‌‌ಕುಮಾರ್ ಕೂಡ ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದು, ಯೋಗರಾಜ್ ಭಟ್ ಪರಿಸರ ಕುರಿತು ಕವಿತೆ ವಾಚನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. 


ಇದನ್ನೂ ಓದಿ : 'ಲೆಸ್ ಟ್ರಾಫಿಕ್ ಡೇ' ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮಾತು


ಬೆಂಗಳೂರು ನಗರದ ಪರಿಸರ ರಕ್ಷಣೆ ಮತ್ತು ಸಾರ್ವಜನಿಕ ಸಾರಿಗೆ ಉತ್ತೇಜಿಸುವುದಕ್ಕಾಗಿ ಪ್ರತಿ ತಿಂಗಳು ಎರಡನೇ ಭಾನುವಾರ ಲೆಸ್ ಟ್ರಾಫಿಕ್ ಡೇ ಆಚರಣೆಗೆ ಸರ್ಕಾರ ಈ ಹಿಂದೆ ಕರೆ ನೀಡಿತ್ತು. ಅದರಂತೆ ಅಂದು ಸ್ವಂತ ವಾಹನ ಬಳಸದೆ ಸಮೂಹ ಸಾರಿಗೆ ಬಳಸುವಂತೆ ವಾಹನ ಮಾಲೀಕರಿಗೆ ಮನವಿ ಮಾದಿತ್ತು. ಇದೀಗ ಈ ಕಾರ್ಯಕ್ರಮದ ಪ್ರಚಾರ ಮತ್ತು ಜಾಗೃತಿ ಕಾರ್ಯಕ್ರಮಗಳಿಗೆ ನಟ ಯಶ್ ಅವರನ್ನು ಸರ್ಕಾರ ರಾಯಭಾರಿಯಾಗಿ ಆಯ್ಕೆ ಮಾಡಿದೆ.