ಬೆಂಗಳೂರು: ಅಧಿಕಾರದ ಬೆನ್ನತ್ತಿ ಹೊಗೋ ದೇವೆಗೌಡ ನಾನಲ್ಲ. ಆಕಸ್ಮಿಕವಾಗಿ ಪ್ರಧಾನ‌ ಮಂತ್ರಿಯಾದೆ, ನಾನು ಯಾರ ಬಗ್ಗೆಯು ಲಘುವಾಗಿ ಮಾತನಾಡೋದಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಪಕ್ಷದ ಅಲ್ಪಸಂಖ್ಯಾತರ ಘಟಕ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶಕ್ಕೆ ಒದಗಿರೊ ಗಂಡಾಂತರ ಹೇಗೆ ಸರಿಪಡಿಸಬೇಕು ಅನ್ನೊ ಬಗ್ಗೆ ಪ್ರತಿ ಕ್ಷಣ ಯೋಚನೆ ಮಾಡುತ್ತಿದ್ದೇನೆ. ನಾನು ಹಿಂದು ನಾನು ಎಲ್ಲ ದೇವಸ್ಥಾನಕ್ಕೆ ಹೊಗಿದ್ದೇನೆ, ಅಜ್ಮೀರ್ ಗೆ ಹೊಗಿದ್ದೇನೆ, ಗೊಲ್ಡನ್ ಟಂಪಲ್ ಗೂ ಹೋಗಿದ್ದೀನಿ. ಅಧಿಕಾರದ ಬೆನ್ನತ್ತಿ ಹೊಗೋ ದೇವೆಗೌಡ ನಾನಲ್ಲ. ಈ ದೇವೆಗೌಡ ಮತ್ತು ಕುಮಾರಸ್ವಾಮಿ ಅವರು ಯಾವತ್ತೂ ಅಧಿಕಾರದ ಹಿಂದೆ ಹೊಗಿಲ್ಲ ಹೋಗೋದು ಇಲ್ಲಾ ಎಂದು ತಿಳಿಸಿದರು.


ಈ ದೇವೆಗೌಡ ಮತ್ತು ಕುಮಾರಸ್ವಾಮಿ ಅವರು ಯಾವತ್ತೂ ಅಧಿಕಾರದ ಹಿಂದೆ ಹೊಗಿಲ್ಲ ಹೋಗೋದು ಇಲ್ಲಾ. ನನಗೆ ಯಾರ ಬಗ್ಗೆಯೂ  ದ್ವೇಷ ಇಲ್ಲ ಎಂದು ತಿಳಿಸಿದ ದೇವೇಗೌಡರು, ಮುಂಬರುವ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಮುರಿಯುವುದಿಲ್ಲ. ನಮ್ಮ ಜೊತೆ ಕಾಂಗ್ರೇಸ್ ಸಹಕರಿಸಬೇಕು ಎಂದು ಮನವಿ ಮಾಡಿದರು


ನಾನು ಆಕಸ್ಮಿಕವಾಗಿ ಪ್ರಧಾನ ಮಂತ್ರಿಯಾದೆ, ನಾನು ಯಾರ ಬಗ್ಗೆಯು ಲಘುವಾಗಿ ಮಾತನಾಡೋದಿಲ್ಲ ಎಂದ ದೇವೇಗೌಡರು, ಕನಕಪುರದಲ್ಲಿ ನೆಡೆದ ಅದೊಂದು ಘಟನೆ ನಾನು ಅಲ್ಪಸಂಖ್ಯಾತರಿಗೆ ಏನಾದರು ಕೆಲಸ ಮಾಡಬೇಕು ಅಂತ ಡಿಸೈಡ್ ಮಾಡಿದೆ. ಮುಸ್ಲಿಂ ಬಂದವರಿಗೆ ಅರ್ಮಿಯಲ್ಲಿ ಕೆಲಸ ಕೊಡಬಾರ್ದು ಅಂತ ಅನ್ನುತ್ತಿದ್ದರು. ಆದರೆ ನಾನು ಪ್ರಧಾನಿ ಮಂತ್ರಿಯಾದ ಸಮಯದಲ್ಲಿ ಮುಸ್ಲಿಂಮರಿಗೆ ಅರ್ಮಿಯಲ್ಲಿ ಕೆಲಸ ಸಿಗುವಂತೆ ಮಾಡಿದೆ ಎಂದು ಹೆಚ್ಡಿಡಿ ಹೇಳಿದರು.


ನನ್ನ ಮಗನನ್ನು ಮುಖ್ಯಮಂತ್ರಿ ಮಾಡಿ ಅಂತ ಹೇಳಿಲ್ಲ:
ಯಾರು ಕುಮಾರಸ್ವಾಮಿ ಬಗ್ಗೆ ಅಲ್ಲಗಳೆದ್ರು ಅವರೇ ಸಿಎಂ ಆಗಿ ಎಂದು ಡೆಲ್ಲಿಗೆ ಬಂದಿದ್ರು. ಕುಮಾರಸ್ವಾಮಿ ಅವರ ಬಗ್ಗೆ ಕೆಲವರು ಅಪಪ್ರಾಚಾರ ಮಾಡುತ್ತಾರೆ. ಅದರ ಬಗ್ಗೆ ನಾನು ಮಾತಾನಾಡೋದಿಲ್ಲ. ಎಲ್ಲರ ಮನಸ್ಸಿನಲ್ಲಿ ನಾವು ಭಾರತೀಯ ಜನತ ಪಾರ್ಟಿ ಜೊತೆ ಹೊಗಿದ್ದಿ ಅನ್ನೋ ಭಾವನೆ ಇದೆ. ನಮ್ಮ ಶಾಸಕರು, ಸಚಿವರು ಯಾರು ಮೈತ್ರಿ ಸರ್ಕಾರಕ್ಕೆ ದಕ್ಕೆ ತರದಂದೆ ಕೆಲಸ ಮಾಡುತ್ತಿದ್ದಾರೆ ಎಂದರು.


ಒಗ್ಗೂಡಿ ಪ್ರಬಲ ಸಂದೇಶ ರವಾನಿಸಿದ್ದ ಜಾತ್ಯಾತೀತ ಪಕ್ಷಗಳ ನಾಯಕರು:
ಬಿಜೆಪಿಯನ್ನು ಹಿಂದೆ ಸರಿಸಸಬೇಕು ಅಂತ ಕುಮಾರಸ್ವಾಮಿ ಸಿಎಂ ಆಗುವ ವೇಳೆ ನಾಲ್ಕು ಜನ ಪ್ರಾದೇಶಿಕ ಮುಖ್ಯಮಂತ್ರಿ ಗಳು ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದರು.  2018ರ ಮೇ ತಿಂಗಳಿನಲ್ಲಿ ಮುಖ್ಯಮಂತ್ರಿಯಾಗಿ ಕುಮಾರ ಸ್ವಾಮಿ  ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ಎಲ್ಲಾ ಜಾತ್ಯಾತೀತ ಪಕ್ಷಗಳ ನಾಯಕರು ಒಗ್ಗೂಡಿ ಪ್ರಬಲ ಸಂದೇಶ ರವಾನಿಸಿದ್ದರು ಎಂದು ತಿಳಿಸಿದ್ದಾರೆ.