ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ಸಿಡಿ ವಿಚಾರವಾಗಿ ಯುವತಿಯ ಪೋಷಕರು ನೇರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ನಗರದ ಎಸ್​ಐಟಿ ವಿಚಾರಣೆ(SIT Inquiry) ಎದುರಿಸಿ ಹೊರ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯುವತಿಯ ಸಹೋದರ, ಡಿಕೆ ಶಿವಕುಮಾರ್ ಅವರೇ ನನ್ನ ಅಕ್ಕನನ್ನು ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ನನ್ನ ಅಕ್ಕನನ್ನು ಮುಂದೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಡಿಕೆಶಿ ಅವರೇ ದುಡ್ಡು ಕೊಟ್ಟು ನನ್ನ ಅಕ್ಕನನ್ನು ಗೋವಾಕ್ಕೆ ಕಳಿಸಿದ್ದರು ಎಂದು ಆರೋಪಿಸಿದರು.


Congress: ಬೈ ಎಲೆಕ್ಷನ್ ನಲ್ಲಿ CD ಮಸಲತ್ತು: ಲಾಭ ಪಡೆಯಲು 'ಕೈ' ಕಸರತ್ತು!


ಯುವತಿಯ ತಂದೆ ಪ್ರಕಾಶ್ ಮಾತನಾಡಿ, ನನ್ನ ಮಗಳಿಗೆ ಡಿಕೆ ಶಿವಕುಮಾರ್(DK Shivakumar) ಅವರಿಂದ ಬೆದರಿಕೆ ಇದೆ. ನಮಗೆ ಹಾಗೂ ನಮ್ಮ ಕುಟುಂಬಕ್ಕೆ ಬೆದರಿಕೆ ಇದೆ. ನಮ್ಮ ಮಗಳನ್ನು ತಂದು ಒಪ್ಪಿಸಿ. ಅವಳು ಎಲ್ಲಿದ್ದಾಳೆ ಎಂದು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.


JOBS: ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ


ಆಡುಗೋಡಿ ಬಳಿ ಇರುವ ಎಸ್​ಐಟಿ ಟೆಕ್ನಿಕಲ್ ಕಚೇರಿ(SIT Technical Office)ಯಲ್ಲಿ ಯುವತಿಯ ತಂದೆ ಪ್ರಕಾಶ್ ಹಾಗೂ ತಾಯಿ ಮತ್ತು ಸಹೋದರನ್ನು ಸುಮಾರು ನಾಲ್ಕು ತಾಸು ತೀವ್ರ ವಿಚಾರಣೆಗೆ ಒಳಪಡಿಸಿದರು. ಡಿಸಿಪಿ ಅನುಚೇತ್, ರವಿಕುಮಾರ್​, ಶರಣಪ್ಪ ಅವರ ನೇತೃತ್ವದ ತಂಡ ವಿಚಾರಣೆಗೆ ಒಳಪಡಿಸಿ, ಸಂಜೆ 5 ಗಂಟೆಗೆ ವಿಚಾರಣೆ ಮುಗಿಸಿದೆ. ಪೋಷಕರ ಹೇಳಿಕೆಗಳನ್ನು ಲಿಖಿತವಾಗಿ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.


ನನ್ನ ಹತ್ಯೆಗೆ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ - ಸಿ.ಡಿ ಯುವತಿಯ ಗಭೀರ ಆರೋಪ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.